Advertisement

ಇಂದು, ನಾಳೆ ಮೋದಿ ಫ್ರಾನ್ಸ್‌ ಭೇಟಿ

11:08 PM Jul 12, 2023 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜು.13, 14ರಂದು ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಜು.14 ರಂದು ಫ್ರಾನ್ಸ್‌ನ ಬಾಸ್ಟಿಲ್‌ ಡೇ ಪಥಸಂಚಲನ ನಡೆಯಲಿದೆ. ಈ ವೇಳೆ ಫ್ರಾನ್ಸ್‌ನ ಶಸ್ತ್ರಾಸ್ತ್ರ ಸಾಮರ್ಥ್ಯ­ವನ್ನು ಪ್ರಕಟಿಸ­ಲಾಗುತ್ತದೆ. ಆ ಕಾರ್ಯ­ಕ್ರಮದ ಮುಖ್ಯ ಅತಿಥಿಯಾಗಿ ಮೋದಿ ಭಾಗವಹಿಸಲಿ­ದ್ದಾರೆ. ಸ್ವತಃ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರಾನ್‌ ನೀಡಿದ ಆಹ್ವಾನದ ಮೇರೆಗೆ ಮೋದಿ ಪಾಲ್ಗೊಳ್ಳಲಿದ್ದಾರೆ. ವಿಶೇಷವೆಂದರೆ ಫ್ರಾನ್ಸ್‌ ಭೇಟಿ ಮುಗಿದ ನಂತರ, ಜು.15 ರಂದು ಮೋದಿ ಯುಎಇಗೆ ತೆರಳಲಿದ್ದಾರೆ. ಯುಎಇ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಝಾಯೆದ್‌ ಅಲ್‌ ನಹ್ಯಾನ್‌ರನ್ನು ಅಬುಧಾಬಿಯಲ್ಲಿ ಭೇಟಿ ಮಾಡಲಿದ್ದಾರೆ.

Advertisement

ಏನೇನು ಚರ್ಚೆಯಾಗಲಿದೆ?: ಎಲ್ಲ ಮುಸ್ಲಿಮ್‌ ರಾಷ್ಟ್ರಗಳೊಂದಿಗೆ ಮೋದಿ ಆತ್ಮೀಯ ಸಂಬಂಧವನ್ನು ಬೆಳೆಸುತ್ತಿದ್ದಾರೆ. ಈ ಬಾರಿ ಅಬುಧಾಬಿಯಲ್ಲಿ ಶೇಖ್‌ರನ್ನು ಭೇಟಿಯಾದಾಗ ಇಂಧನ, ಆಹಾರ ಭದ್ರತೆ, ಶಿಕ್ಷಣ, ಆರೋಗ್ಯ, ಆರ್ಥಿಕ ತಂತ್ರಜ್ಞಾನ, ಸಂಸ್ಕೃತಿ, ರಕ್ಷಣೆಯಲ್ಲಿ ಸಂಬಂಧವನ್ನು ಗಟ್ಟಿಗೊಳಿಸುವುದರ ಬಗ್ಗೆ ಚರ್ಚೆಯಾಗ­ಲಿದೆ. ಇನ್ನು ಫ್ರಾನ್ಸ್‌ನಲ್ಲಿ ಹಲವು ವಿಚಾರಗಳ ಬಗ್ಗೆ ಮ್ಯಾಕ್ರಾನ್‌ ಜೊತೆಗೆ ಗಂಭೀರ ಚರ್ಚೆ ನಡೆಸಲಿದ್ದಾರೆ. ಬಾಸ್ಟಿಲ್‌ ಡೇ ಪೆರೇಡ್‌ ಭಾರತ-ಫ್ರಾನ್ಸ್‌ ನಡುವಿನ ವ್ಯೂಹಾತ್ಮಕ ಸಂಬಂಧದ 25ನೇ ವರ್ಷಾಚರಣೆಯೂ ಹೌದು. ಇಲ್ಲಿ ಭಾರತದ ಸೇನಾಪಡೆಗಳು ಪಾಲ್ಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next