Advertisement

Modi ಮತ್ತೆ ಪ್ರಧಾನಿ ಆಗುವುದಿಲ್ಲ: ವಾರಾಣಸಿಯಲ್ಲಿ ರಾಹುಲ್‌ ಪ್ರಚಾರ

11:35 PM May 28, 2024 | Team Udayavani |

ವಾರಾಣಸಿ: ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗುವುದಿಲ್ಲ. ಇದು ಗ್ಯಾರಂಟಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಹೇಳಿದ್ದಾರೆ.

Advertisement

ಪ್ರಧಾನಿ ಮೋದಿ ಲೋಕಸಭಾ ಕ್ಷೇತ್ರ ವಾರಾಣಸಿ ಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿ ನಡೆಯುತ್ತಿರುವ ಸ್ಪರ್ಧೆ ಪ್ರಧಾನಿ ಅಭ್ಯರ್ಥಿ ಮತ್ತು ಅಜಯ್‌ ರಾಯ್‌ ನಡುವೆ ಅಲ್ಲ. ಏಕೆಂದರೆ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ. ಅಜಯ್‌ ರಾಯ್‌ ಇಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದರು.

ಅದಾನಿಗೆ ಸಹಾಯ ಮಾಡಲು ಮೋದಿ ಬಂದಿದ್ದಾರೆ: ನನ್ನನ್ನು ದೇವರು ಕಳುಹಿಸಿದ್ದಾರೆ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್‌, ಅದಾನಿಗೆ ಸಹಾಯ ಮಾಡುವುದಕ್ಕಾಗಿ ದೇವರು ಮೋದಿಯನ್ನು ಕಳುಹಿಸಿದ್ದಾನೆ. ಬಡವರಿಗೆ ಸಹಾಯ ಮಾಡಲು ಅಲ್ಲ. ಈ ಚುನಾವಣೆ ಯಾವುದೇ ಸಿದ್ಧಾಂತಗಳ ನಡುವಿನ ಹೊರಾಟವಲ್ಲ. ಇದು ಸಂವಿಧಾನವನ್ನು ಉಳಿಸಲು ಹೋರಾಡು ತ್ತಿರುವ ಇಂಡಿಯಾ ಒಕ್ಕೂಟ ಹಾಗೂ ಅದನ್ನು ನಾಶ ಮಾಡಲು ಹೊರಟಿರುವವರ ನಡುವಿನ ಹೋರಾಟ ಎಂದು ಹೇಳಿದರು.

ದಲಿತರು ಈ ದೇಶದಲ್ಲಿ ದೌರ್ಜನ್ಯಕ್ಕೆ ತುತ್ತಾಗಿದ್ದರು. ಸಂವಿಧಾನ ಅವರಿಗೆ ಗೌರವವನ್ನು ಒದಗಿಸಿಕೊಟ್ಟಿತು. ಇಂತಹ ಸಂವಿಧಾನವನ್ನು ನಾಶ ಮಾಡಲು ಯಾರಿಗೂ ಶಕ್ತಿ ಇಲ್ಲ. ಹೃದಯ, ಜೀವನ ಮತ್ತು ರಕ್ತವನ್ನು ಒತ್ತೆ ಇಟ್ಟಾದರೂ ಇಂಡಿಯಾ ಒಕ್ಕೂಟ ಸಂವಿಧಾನವನ್ನು ರಕ್ಷಣೆ ಮಾಡುತ್ತದೆ ಎಂದು ಭರವಸೆ ನೀಡಿದರು.

ಅಖೀಲೇಶ್‌ ಜತೆ ರ್‍ಯಾಲಿ:  ಉತ್ತರ ಪ್ರದೇಶದಲ್ಲಿ ಸಮಾಜ ವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಜತೆ ಸೇರಿ ರಾಹುಲ್‌ ರ್‍ಯಾಲಿ ನಡೆಸಿದರು. ಈ ಬಾರಿ ಕಾಂಗ್ರೆಸ್‌ ಕೈ ಸಮಾಜವಾದಿ ಪಕ್ಷದ ಸೈಕಲನ್ನು ಹಿಡಿದಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಕ್ಲೀನ್‌ ಸ್ವೀಪ್‌ ಮಾಡಲಿದ್ದೇವೆ ಎಂದು ಹೇಳಿದರು.

Advertisement

ಅಧಿಕಾರದಲ್ಲೇ ಇರಲು ಧರ್ಮ ಬಳಸುವ ಪಿಎಂ: ಪ್ರಿಯಾಂಕಾ ಆರೋಪ
ಉನಾ: ಅಧಿಕಾರದಲ್ಲಿ ಮುಂದುವರಿಯಲು ಧರ್ಮದ ಹೆಸರಲ್ಲಿ ಜನರನ್ನು ತಪ್ಪುದಾರಿಗೆಳೆಯುತ್ತಿ ರುವ ಪ್ರಧಾನಿ ಮೋದಿ “ಜನವಿರೋಧಿ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ವಾದ್ರಾ ಆರೋಪಿಸಿ ದ್ದಾರೆ. ಹಿಮಾಚಲ ಪ್ರದೇಶದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿ, ಮೋದಿ ಹಿಮಾ ಚಲ ಪ್ರದೇಶದ ಜನರನ್ನು ಕಡೆಗಣಿಸಿದ್ದಾರೆ. ಕಳೆದ ವರ್ಷ ಮಳೆ ಸಂತ್ರಸ್ತರಿಗೆ ಒಂದು ರೂಪಾಯಿಯನ್ನೂ ಪರಿಹಾರ ನೀಡಿಲ್ಲ. ಹಿಂದೂ ಧರ್ಮ ನಮಗೆ ಪ್ರಾಮಾಣಿಕ ಜೀವನ ನಡೆಸುವುದನ್ನು ಕಲಿಸಿದೆ. ಅದೇ ಧರ್ಮದ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಕೇಂದ್ರ ಸರಕಾರ ರಾಜ್ಯದಲ್ಲಿ ಮಳೆಯಿಂದಾದ ದುರಂತಕ್ಕೆ ಪರಿಹಾರ ನೀಡುವ ಬದಲಾಗಿ ರಾಜ್ಯದಲ್ಲಿ ರುವ ಕಾಂಗ್ರೆಸ್‌ ಸರಕಾರವನ್ನು ಉರುಳಿಸುವ ಪ್ರಯತ್ನದಲ್ಲಿದೆ ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next