Advertisement

ನನ್ನ ಪರ ಪ್ರಚಾರಕ್ಕೆ ಮೋದಿ ಆಗಮಿಸಲಿದ್ದಾರೆ: BJP ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್

06:17 PM Apr 20, 2023 | Team Udayavani |

ಪಿರಿಯಾಪಟ್ಟಣ: ಜೀವನದುದ್ದಕ್ಕೂ ಪ್ರಾಮಾಣಿಕ ರಾಜಕರಣ ಮಾಡಿ ನೊಂದವರ ಪರ ಕೆಲಸ ಮಾಡಿದ್ದೇನೆ ಹಾಗಾಗಿ ನನ್ನ ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಪರ ಪ್ರಚಾರಕ್ಕೆ ಪಿರಿಯಾಪಟ್ಟಣಕ್ಕೆ ಆಗಮಿಸುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ತಿಳಿಸಿದರು.

Advertisement

ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಕುಸಮ ಕುಮಾರಿಯವರಿಗೆ ನಾಮಪತ್ರ ಸಲ್ಲಿಸಿ ಮಾತನಾಡಿದರು.
ನಾನು ಈಗಾಗಲೇ 9 ಚುನಾವಣೆಗಳನ್ನು ಎದುರಿಸಿ 10 ನೇ ಸ್ಪರ್ಧೆ ಮಾಡಿದ್ದೇನೆ. ಈ ಹಿಂದೆ ಶಾಸಕ, ಸಂಸದ, ಎಂಎಲ್ಸಿ ಹಾಗೂ ಮಂತ್ರಿಯಾಗಿ ಕೆಲಸ ಮಾಡಿದ ಅನುಭವವಿದೆ. ಆ ಸಂದರ್ಭದಲ್ಲಿ ಎಲ್ಲಾ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂಧಿಸಿದ್ದೇನೆ ಹಾಗಾಗಿ ಇಂದು ನನ್ನ ಪರ ಅಪಾರ ಪ್ರಮಾಣದಲ್ಲಿ ಜನತೆ ಭಾಗವಹಿಸುವ ಮೂಲಕ ನನ್ನ ಗೆಲುವಿಗೆ ಮುನ್ನುಡಿ ಬರೆಯುವ ಕೆಲಸ ಮಾಡಿದ್ದಾರೆ. ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಪಟ್ಟಣದ ಶಕ್ತಿ ದೇವತೆ ಶ್ರೀ ಮಸಣಿಕಮ್ಮ ದರ್ಶನ ಪಡೆದು ಬಂದಿದ್ದೇನೆ.

ನಾನು ಸಂಸದನಾಗಿದ್ದ 2008 ರಲ್ಲಿಯೇ ಪಿರಿಯಾಪಟ್ಟಣದಲ್ಲಿ ಸ್ಪರ್ಧಿಸುವಂತೆ ಪಕ್ಷದ ವರಿಷ್ಠರು ಸೂಚಿಸಿದ್ದರು ಆದರೆ ನಾನು ಸಂಸದನಾಗಿದ್ದ ಕಾರಣ ಬೇರೆಯವರಿಗೆ ಅವಕಾಶ ಕಲ್ಪಿಸಲಾಯಿತು. ಆ ಸಮಯ ಈಗ ಒದಗಿ ಬಂದಿದೆ, ನಾನು ಶಿಸ್ತು, ಆದರ್ಶ, ಪ್ರಾಮಾಣಿಕತೆ, ರೈತ ಪರ ಕಾಳಜಿ ಇಟ್ಟುಕೊಂಡು ಹೋರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಆದರೆ ಸಾಮಾಜಿಕ ಜಲತಾಣದಲ್ಲಿ ನನ್ನ ಭಾವಚಿತ್ರ ಬಳಸಿ ಟ್ರೋಲ್ ಮಾಡಿದವರ ಮೇಲೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ, ಇದು ನನ್ನ ಕೊನೆಯ ಚುನಾವಣೆ ತಾಲ್ಲೂಕಿನ ಜನತೆ ಹರಸಿ ಆಶೀರ್ವಧಿಸಬೇಕು, ಕ್ಷೇತ್ರದಲ್ಲಿ ನಾನು ಯಾವುದೇ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ ನನ್ನ ಮೇಲೆ ಅನಗತ್ಯ ಗೂಬೆ ಕೂರಿಸಲಾಗುತ್ತಿದೆ 14 ವರ್ಷಗಳ ಕಾಲದ ರಾಜಕೀಯ ಸನ್ಯಾಸಕ್ಕೆ ತಾಲ್ಲೂಕಿನ ಜನತೆ ಮುಕ್ತಿ ನೀಡ ಬೇಕು ಎಂದರು.

ಮೈಸೂರು ಬಿಜೆಪಿ ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಈ ಬಾರಿ ಹುಮ್ಮಸ್ಸಿನಿಂದ ಇದ್ದಾರೆ. ಈ ಸಲ ಕಾರ್ಯಕರ್ತನಿಗೆ ಕೂಡ ಟಿಕೆಟ್ ನೀಡಿದ್ದೇವೆ. ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣನವರ ಸ್ಪರ್ಧೇಯಿಂದ ಸಿದ್ದರಾಮಯ್ಯರವರುಗೆ ನಡುಕ ಉಂಟಾಗಿ ಭಾವನಾತ್ಮಕವಾಗಿ ತಮ್ಮ ಮೊಮ್ಮಗನನ್ನು ಚುನಾವಣಾ ಪ್ರಚಾರಕ್ಕೆ ಕರೆತಂದಿದ್ದಾರೆ. ಮೈಸೂರು ಚುನಾವಣಾ ಪ್ರಚಾರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ಯಡಿಯೂರಪ್ಪ ಸೇರಿದಂತೆ ಇನ್ನು ಹಲವಾರು ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಬರಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಹೆಚ್.ಸಿ.ಬಸವರಾಜ್, ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಉಪಾಧ್ಯಕ್ಷ ನಂದಿಪುರ ಲೋಕೇಶ್, ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಗೌಡ, ಪ್ರಧಾನ ಕಾರ್ಯದರ್ಶಿ ವೀರಭದ್ರ, ಬೆಮ್ಮತ್ತಿ ಚಂದ್ರು, ಮುಖಂಡರಾದ ಆರ್.ಟಿ.ಸತೀಶ್, ಕೌಲನಳ್ಳಿ ಸೋಮಶೇಖರ್, ಪಿ.ಜೆ.ರವಿ. ಪರೀಕ್ಷಿತ್ ರಾಜ್ , ಕಣಗಾಲ್ ಮಧು, ಹೊನ್ನಾಪುರ ವಿನಯಕುಮಾರ್, ಅಶೋಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
20:ವಿಜಯಶಂಕರ ನಾಮಪತ್ರ ಸಲ್ಲಿಕೆ, ಭಾಗವಹಿಸಿದ ಜನಸ್ತೋಮ.,

Advertisement
Advertisement

Udayavani is now on Telegram. Click here to join our channel and stay updated with the latest news.

Next