Advertisement

Modi washing powder; ಪತ್ರಿಕಾಗೋಷ್ಠಿಗೆ ‘ವಾಷಿಂಗ್‌ ಮಷಿನ್‌’ ಹೊತ್ತು ತಂದ ಕಾಂಗ್ರೆಸ್‌!

01:34 AM Mar 31, 2024 | Team Udayavani |

ಹೊಸದಿಲ್ಲಿ: “ಯಾವುದೇ ಪಕ್ಷದ ನಾಯಕರು ಈ ಮೊದಲು ಅತ್ಯಾಚಾರ, ಕೊಲೆ, ಸುಲಿಗೆ, ಭ್ರಷ್ಟಾಚಾರ, ವಂಚನೆ ಸೇರಿ ಏನೇ ಅಪರಾಧ ಮಾಡಿದ್ದರೂ ಬಿಜೆಪಿಗೆ ಸೇರಿದ ತತ್‌ಕ್ಷಣ ಕ್ಲೀನ್‌ಚಿಟ್‌ ಸಿಕ್ಕಿಬಿಡುತ್ತದೆ. ಇದು ಬಿಜೆಪಿ ವಾಷಿಂಗ್‌ ಮಷಿನ್‌ನ ಸಾಮರ್ಥ್ಯ’ ಎಂದು ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಸುಮಾರು 8,500 ಕೋಟಿ ಮೌಲ್ಯದ ವಾಷಿಂಗ್‌ ಮಷೀನ್‌ನಲ್ಲಿ, ಮೋದಿ ವಾಷಿಂಗ್‌ ಪೌಡರ್‌ ಬಳಸಿ ಬಿಜೆಪಿಗೆ ಸೇರಿದ ಎಲ್ಲ ನಾಯಕರ ಅಪರಾಧದ ಕಲೆಗಳನ್ನೂ ತೊಳೆದು ಹಾಕಲಾಗುತ್ತದೆ. ಚುನಾವಣ ಬಾಂಡ್‌ ಅಕ್ರಮದ ಮೂಲಕ ಬಿಜೆಪಿ ಅದನ್ನು ಖರೀದಿಸಿದೆ ಎಂದೂ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next