Advertisement

2024; ನರೇಂದ್ರ ಮೋದಿ v/s ಅರವಿಂದ್ ಕೇಜ್ರಿವಾಲ್; ಏನಿದು ಆಪ್ ಬೆಂಬಲಿಗರ ಪೋಸ್ಟರ್ !

09:45 AM Feb 12, 2020 | Nagendra Trasi |

ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಯ ಮತಎಣಿಕೆ ಮಂಗಳವಾರ ಬೆಳಗ್ಗೆ ಆರಂಭವಾಗಿದ್ದು, ಸದ್ಯದ ಟ್ರೆಂಡ್ ಪ್ರಕಾರ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಭರ್ಜರಿ ಮುನ್ನಡೆ ಸಾಧಿಸಿದ್ದು, ಭಾರತೀಯ ಜನತಾ ಪಕ್ಷ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಏತನ್ಮಧ್ಯೆ ಆಪ್ ಕಚೇರಿ ಮುಂಭಾಗ ಆಪ್ ಬೆಂಬಲಿಗರು 2024ರ ಲೋಕಸಭಾ ಚುನಾವಣೆಯ ಕೇಜ್ರಿವಾಲ್ v/s ನರೇಂದ್ರ ಮೋದಿ ಸ್ಪರ್ಧಿಸುವ ಪೋಸ್ಟರ್ ಹಿಡಿದಿರುವುದು ಹೆಚ್ಚಿನ ಗಮನ ಸೆಳೆದಿದೆ.

Advertisement

ದೆಹಲಿಯ ಆಮ್ ಆದ್ಮಿ ಪಕ್ಷದ ಹೊರಭಾಗದಲ್ಲಿ ಆಪ್ ಬೆಂಬಲಿಗರು ಅರವಿಂದ್ ಕೇಜ್ರಿವಾಲ್ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂಬ ಬ್ಯಾನರ್ ಪ್ರದರ್ಶಿಸುತ್ತಿದ್ದು, ಬ್ಯಾನರ್ ನಲ್ಲಿ 2024: ಕೇಜ್ರಿವಾಲ್ v/s ಮೋದಿ ಎಂದು ಬರೆಯಲಾಗಿದೆ.

ದೆಹಲಿ ವಿಧಾನಸಭಾ ಚುನಾವಣೆ ಕೂಡಾ ನರೇಂದ್ರ ಮೋದಿ v/s ಕೇಜ್ರಿವಾಲ್ ಎಂಬಂತೆ ಬಿಂಬಿತವಾಗಿತ್ತು. ಕೇಂದ್ರ ಹಾಗೂ ದೆಹಲಿ ಸರ್ಕಾರದ ಜಟಾಪಟಿ ನಡುವೆ ಚುನಾವಣೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ಹಾಗೂ ಸ್ಥಳೀಯ ವಿಷಯಗಳೇ ಪ್ರಮುಖ ಅಸ್ತ್ರವಾಗಿದ್ದವು. ಸದ್ಯದ ಫಲಿತಾಂಶದ ಪ್ರಕಾರ ಕೇಜ್ರಿವಾಲ್ ನೇತೃತ್ವದ ಆಪ್ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ.

2013ರಿಂದ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆ ಏರುವುದನ್ನು ಆಮ್ ಆದ್ಮಿ ಪಕ್ಷ ತಡೆಯೊಡ್ಡಿದ್ದ ಬಳಿಕ ಅರವಿಂದ್ ಕೇಜ್ರಿವಾಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬದ್ಧ ರಾಜಕೀಯ ವಿರೋಧಿಯಾಗಿ ಗುರುತಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next