Advertisement

ಮೋದಿ ಬೈಡನ್ ಚೊಚ್ಚಲ ಭೇಟಿ : ಇಬ್ಬರು ನಾಯಕರು ಹೇಳಿದ್ದೇನು ಗೊತ್ತಾ?

07:58 AM Sep 25, 2021 | Team Udayavani |

ವಾಷಿಂಗ್ಟನ್: ಅಮೆರಿಕ ಮತ್ತು ಭಾರತದ ನಡುವಣ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ವೃದ್ಧಿಗೊಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರು ಶುಕ್ರವಾರ ಶ್ವೇತಭವನದಲ್ಲಿ ಭೇಟಿಯಾಗಿ ಚರ್ಚಿಸಿದರು. ಕೊರೊನಾ, ಅಫ್ಘಾನಿಸ್ಥಾನ ಬೆಳವಣಿಗೆ, ಜಾಗತಿಕ ತಾಪಮಾನ ಬದಲಾವಣೆ ಮತ್ತು ಇಂಡೋ ಫೆಸಿಫಿಕ್‌ ಪ್ರದೇಶದಲ್ಲಿ ಚೀನದ ಹಾವಳಿ ಸಹಿತ ಜಗತ್ತು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಈ ಇಬ್ಬರು ನಾಯಕರು ಮಾತುಕತೆ ನಡೆಸಿದರು.

Advertisement

ಮೋದಿಯವರ ಅಮೆರಿಕ ಪ್ರವಾಸ ದಿಂದ ಭಾರತೀಯ ರಕ್ಷಣ ಕ್ಷೇತ್ರ ಬಲವರ್ಧನೆಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಗುರುವಾರ ವಿವಿಧ ಕಂಪೆನಿಗಳ ಸಿಇಒಗಳ ಜತೆ ಮಾತುಕತೆ ನಡೆಸಿದ್ದರು. ಬಳಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನು ಭೇಟಿಯಾಗಿದ್ದರು.

ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 8.30ರ ವೇಳೆಗೆ ಶ್ವೇತಭವನಕ್ಕೆ ಆಗಮಿಸಿದ ಮೋದಿ ಅವರಿಗೆ ಬೈಡೆನ್‌ ಆತ್ಮೀಯ ಸ್ವಾಗತ ಕೋರಿದರು. ಬಳಿಕ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿ, ಪತ್ರಿಕಾಗೋಷ್ಠಿ ನಡೆಸಿದರು.

ಅಮೆರಿಕದ ಅಧ್ಯಕ್ಷೀಯ ಕಟ್ಟಡ ಶ್ವೇತಭವನಕ್ಕೆ ಪ್ರಧಾನಿ ಮೋದಿಯವರದು ಇದು 7ನೇ ಭೇಟಿ. ಬೈಡೆನ್‌ ಅಧ್ಯಕ್ಷರಾದ ಬಳಿಕ ಇದೇ ಮೊದಲ ಭೇಟಿ.

ಬೈಡೆನ್ ಹೇಳಿದ್ದೇನು?:

  • ಮುಂದಿನ ವಾರ ಗಾಂಧೀಜಿ ಜಯಂತಿಯನ್ನು ಆಚರಿಸಿ ಅವರ ಅಹಿಂಸೆಯ ಸಿದ್ಧಾಂತವನ್ನು ನೆನಪಿಸಿಕೊಳ್ಳಲಿದ್ದೇವೆ
  • ಭಾರತ ಮತ್ತು ಅಮೆರಿಕದ ಸಂಬಂಧ ಮತ್ತಷ್ಟು ದೃಢವಾಗುತ್ತಿದೆ. ಅಮೆರಿಕವನ್ನು 40 ಲಕ್ಷ ಭಾರತೀಯ ಅಮೆರಿಕನ್ನರು ಬಲಪಡಿಸುತ್ತಿದ್ದಾರೆ.
  • ಅಮೆರಿಕ-ಭಾರತ ದೃಢ ಸಂಬಂಧದಿಂದ ಜಗತ್ತು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ನಾನು ನಂಬಿದ್ದೇನೆ.
  • ನಾನು ನಿಮ್ಮನ್ನು ಹಲವಾರು ವರ್ಷಗಳಿಂದ ಬಲ್ಲೆ. ಮತ್ತೆ ಶ್ವೇತಭವನಕ್ಕೆ ನಿಮ್ಮನ್ನು ಆಹ್ವಾನಿಸಲು ಖುಷಿ ಪಡುತ್ತೇನೆ. ಇತಿಹಾಸವೇ ಹೇಳುವಂತೆ ನಮ್ಮ ಸಂಬಂಧ ಅತ್ಯುತ್ತಮವಾಗಿದೆ.
Advertisement

ಮೋದಿ ಹೇಳಿದ್ದೇನು? :

  • ಬೈಡೆನ್‌ ಅವರು ಗಾಂಧೀಜಿಯವರ ಬಗ್ಗೆ ಪ್ರಸ್ತಾವಿಸಿದ್ದಾರೆ. ಗಾಂಧೀಜಿ ಸದಾ ಸತ್ಯ ಮತ್ತು ವಿಶ್ವಾಸದ ಅಗತ್ಯದ ಬಗ್ಗೆ ಉಲ್ಲೇಖೀಸುತ್ತಿದ್ದರು. ಈಗ ಈ ವಿಶ್ವಾಸ ಜಾಗತಿಕವಾಗಿ ಮೂಡಬೇಕಿದೆ
  • ಈ ದಶಕವನ್ನು ಕಟ್ಟುವಲ್ಲಿ ಬೈಡೆನ್‌ ಅವರ ನಾಯಕತ್ವ ಪ್ರಮುಖ ಪಾತ್ರ ವಹಿಸಲಿದೆ.
  • ಎರಡು ದೇಶಗಳ ನಡುವೆ ಸ್ನೇಹ ವೃದ್ಧಿಗಾಗಿ ಈಗ ಬೀಜ ಬಿತ್ತಲಾಗಿದೆ. ಇದು ಹೆಮ್ಮರವಾಗಲಿದೆ.
  • ಈ ದಶಕ ಪ್ರತಿಭಾನ್ವಿತರು ಮತ್ತು ಜನಸಂಪರ್ಕದಿಂದ ರೂಪುಗೊಳ್ಳುತ್ತಿದೆ. ಅಮೆರಿಕದ ಪ್ರಗತಿಯಲ್ಲಿ ಭಾರತೀಯರ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ.
Advertisement

Udayavani is now on Telegram. Click here to join our channel and stay updated with the latest news.

Next