Advertisement

ಇಂದು ಕೇದಾರನಾಥಕ್ಕೆ ಪ್ರಧಾನಿ ಮೋದಿ

11:49 PM Nov 04, 2021 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ 6.30ಕ್ಕೆ ಉತ್ತರಾಖಂಡದ ಕೇದಾರನಾಥಕ್ಕೆ ಭೇಟಿ ನೀಡಲಿದ್ದು, ಮೋದಿ ಅವರ ಸ್ವಾಗತಕ್ಕೆ ಕೇದಾರ ಸಜ್ಜಾಗಿದೆ.

Advertisement

ಬೆಳಗ್ಗೆ ಕೇದಾರನಾಥದಲ್ಲಿ ತಲೆಎತ್ತಿರುವ ಆದಿ ಗುರು ಶಂಕರಾಚಾರ್ಯದ ಪ್ರತಿಮೆಯನ್ನು ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಅನಂತರ ಯಾತ್ರೆಗೆಂದು ಬರುವ ಅರ್ಚಕರ ವಸತಿ ಗೃಹವಾದ ಸರಸ್ವತಿ ಘಾಟ್‌ ಸೇರಿದಂತೆ ಒಟ್ಟಾರೆ 130 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ. 400 ಕೋಟಿ ರೂ. ವೆಚ್ಚದ ಕೇದಾರಪುರಿ ಮರು ನಿರ್ಮಾಣ ಯೋಜನೆಯ ಶಿಲಾನ್ಯಾಸವನ್ನೂ ಅವರು ಇದೇ ಸಂದರ್ಭದಲ್ಲಿ ನೆರವೇರಿಸಲಿದ್ದಾರೆ. ಇದು ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾಗಿದ್ದು, ಹಲವು ಬಾರಿ ಮೋದಿ ಅವರೇ ಕೇದಾರನಾಥಕ್ಕೆ ಆಗಮಿಸಿ ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ.

ಶುಕ್ರವಾರ ಬೆಳಗ್ಗೆಯೇ ದೇವಾಲಯದಲ್ಲಿ ಮೋದಿ ಅವರು ಮಹಾರುದ್ರಾಭಿಷೇಕ ಕೈಗೊಳ್ಳಲಿದ್ದು, ದೇಶದ ಒಳಿತಿಗಾಗಿ ಪ್ರಾರ್ಥಿಸಲಿದ್ದಾರೆ ಎಂದು ಕೇದಾರನಾಥ ದೇಗುಲದ ಅರ್ಚಕರಾದ ಬಾಗೀಶ್‌ ಲಿಂಗ್‌ ಹೇಳಿದ್ದಾರೆ.

ದೇಶಾದ್ಯಂತ ನೇರಪ್ರಸಾರ: ಆದಿಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮವನ್ನು ದೇಶದ ಉಳಿದ 11 ಜ್ಯೋತಿರ್ಲಿಂಗಗಳು, ನಾಲ್ಕು ಮಠಗಳು, ಪ್ರಮುಖ ಶಿವ ದೇವಾಲಯಗಳಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಮಿ ತಿಳಿಸಿದ್ದಾರೆ. ಪ್ರತಿಮೆಗೆ ಹೊಳಪು ಬರಲಿ ಎಂಬ ಉದ್ದೇಶದಿಂದ ತೆಂಗಿನಕಾಯಿಯ ನೀರಿನಿಂದ ಪಾಲಿಶ್‌ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next