Advertisement

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

01:13 AM Sep 21, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿ ಅವರ 3 ದಿನಗಳ ಅಮೆರಿಕ ಪ್ರವಾಸ ಶನಿವಾರ (ಸೆ. 21) ಆರಂಭವಾಗಲಿದೆ. ಈ ಭೇಟಿ ಸಮಯದಲ್ಲಿ ಕ್ವಾಡ್‌ ಶೃಂಗಸಭೆ, ದ್ವಿಪಕ್ಷೀಯ ಮಾತುಕತೆ, ಬೈಡೆನ್‌ ಭೇಟಿ, ವಿಶ್ವಸಂಸ್ಥೆಯಲ್ಲಿ ನಡೆಯುವ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ.

Advertisement

ಪ್ರಧಾನಿಯಾದ ಬಳಿಕ ಇದು ಮೋದಿ ಅವರ 9ನೇ ಅಮೆರಿಕ ಭೇಟಿಯಾಗಲಿದೆ. ಅಮೆರಿಕದಲ್ಲಿ ನಡೆಯುತ್ತಿರುವ ಕ್ವಾಡ್‌ ಶೃಂಗಸಭೆಯಲ್ಲಿ ಭಾಗಿಯಾಗುವುದು ಈ ಪ್ರವಾಸದ ಪ್ರಮುಖ ಉದ್ದೇಶವಾಗಿದ್ದರೂ ಕ್ವಾಡ್‌ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧ, ಇಂಡೋ ಫೆಸಿಫಿಕ್‌ ಪ್ರದೇಶದಲ್ಲಿ ಸ್ಥಿರತೆ, ಉಕ್ರೇನ್‌ ಯುದ್ಧ, ಗಾಜಾ ಬಿಕ್ಕಟ್ಟು, ಜಾಗತಿಕ ದಕ್ಷಿಣ (ಗ್ಲೋಬಲ್‌ ಸೌತ್‌) ಅಭಿವೃದ್ಧಿ ಮಾತುಕತೆಗಳನ್ನು ಈ ಭೇಟಿ ಒಳಗೊಂಡಿದೆ ಎನ್ನಲಾಗಿದೆ.

ಡೆಲಾವೆರ್‌ಗೆ ಭೇಟಿ
ಭಾರತದಿಂದ ಪ್ರಯಾಣ ಆರಂಭಿಸುವ ಮೋದಿ ಮೊದಲು ಡೆಲಾವೆರ್‌ ತಲುಪಲಿದ್ದು, ಇಲ್ಲಿ ನಡೆಯುವ ಕ್ವಾಡ್‌ ಸಭೆಯಲ್ಲಿ ಭಾಗಿ ಯಾಗಲಿದ್ದಾರೆ. ಬಳಿಕ ನ್ಯೂಯಾರ್ಕ್‌ಗೆ ಪ್ರಯಾಣಿಸಿ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಸೆ. 22ರಂದು ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಟ್ರಂಪ್‌ ಭೇಟಿ ಖಚಿತ ಇಲ್ಲ
ಅಮೆರಿಕ ಭೇಟಿಯ ಸಮಯ ದಲ್ಲಿ ಮೋದಿ ಅವರನ್ನು ಭೇಟಿ ಮಾಡುವುದಾಗಿ ಟ್ರಂಪ್‌ ತಿಳಿಸಿದ್ದರು. ಆದರೆ ಈ ಭೇಟಿಗೆ ಸಂಬಂಧಿಸಿ ಅಮೆರಿಕ ಅಥವಾ ಭಾರತದ ಸಚಿವಾಲಯಗಳು ಖಾತ್ರಿ ನೀಡಿಲ್ಲ.

ಅಮೆರಿದಲ್ಲಿ ಮೋದಿ ಕಾರ್ಯಕ್ರಮ
1. ಕ್ವಾಡ್‌ ಶೃಂಗಸಭೆಯಲ್ಲಿ ಭಾಗಿ
2. ದ್ವಿಪಕ್ಷೀಯ ಮಾತುಕತೆ
3. ಕ್ಯಾನ್ಸರ್‌ ಉಪಕ್ರಮಗಳ ಘೋಷಣೆ
4. ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ
5. ಅಮೆರಿಕ ಟೆಕ್‌ ನಾಯಕರೊಂದಿಗೆ ಚರ್ಚೆ

Advertisement
Advertisement

Udayavani is now on Telegram. Click here to join our channel and stay updated with the latest news.

Next