Advertisement

ಐದು ವರ್ಷ ವ್ಯರ್ಥಗೊಳಿಸಲು ಅವಕಾಶ ಕೊಡೆನು: ಮೋದಿ ಗುಡುಗು

09:27 AM Nov 06, 2019 | Team Udayavani |

ನವದೆಹಲಿ: “ನೀವು ನನ್ನ ಐದು ವರ್ಷಗಳ ಆಡಳಿತಾವಧಿಯನ್ನು ವ್ಯರ್ಥಗೊಳಿಸಿದ್ದೀರಿ. ಅದೇ ಮಾದರಿಯಲ್ಲಿ, ಇನ್ನು ಮುಂದಿನ ಐದು ವರ್ಷಗಳ ಅವಧಿಯನ್ನು ನೀವು ವ್ಯರ್ಥಗೊಳಿಸಲು ಯತ್ನಿಸಿದರೆ ಅದಕ್ಕೆ ನಾನು ಅವಕಾಶ ನೀಡುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ವಿವಿಧ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ.

Advertisement

ನವದೆಹಲಿಯಲ್ಲಿ ಮಂಗಳವಾರ, ಏಕ್‌ ಭಾರತ್‌, ಶ್ರೇಷ್ಠ ಭಾರತ್‌ ಪರಿಕಲ್ಪನೆಯಡಿ ಜಾರಿಗೊಳಿಸಲಾಗಿದ್ದ ಕೇಂದ್ರದ ಯೋಜನೆಗಳ ಪರಾಮರ್ಶೆಯ ಸಭೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಕೇಂದ್ರದ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವಲ್ಲಿ ವಿಫ‌ಲರಾದ ಅಥವಾ ಆ ಯೋಜನೆಯಗಳನ್ನು ಅನುಷ್ಠಾನಗೊಳಿಸುವಲ್ಲಿ ತಡ ಮಾಡಿದ ಅಧಿಕಾರಿಗಳ ವಿರುದ್ಧ ಮೋದಿ ಕಿಡಿಕಾರಿದರು. ಆಗಲೇ, ಅವರು ಮೇಲಿನಂತೆ ಗುಡುಗಿದರು.
ಪ್ರಧಾನಿಯವರ ಈ ಆವೇಶದ ಮಾತುಗಳ ಹಿಂದೆ, ಜಡ್ಡುಗಟ್ಟಿರುವ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿರುವ ಆಲೋಚನೆಯಿದೆ ಎಂದು ಹೇಳಲಾಗಿದೆ.

ವಿವಿಧ ಇಲಾಖೆಗಳಲ್ಲಿನ ಸೋಮಾರಿ ಅಧಿಕಾರಿಗಳನ್ನು ಗುರುತಿಸಿ ಅವರನ್ನು ಮತ್ತೆ ಕೆಲಸದತ್ತ ಎಳೆಯಲು ಕೇಂದ್ರ ಸರ್ಕಾರ ಈಗಾಗಲೇ ಪ್ರಯತ್ನಿಸಿದೆ. ಅದರ ಮೊದಲ ಹೆಜ್ಜೆಯೆಂಬಂತೆ, 2020-21ರಿಂದ ಎಲ್ಲ ಗ್ರೂಪ್‌ ಎ ಸೇವೆಗಳಿಗೆ ಸಾಮಾನ್ಯ ಫೌಂಡೇಶನ್‌ ಕೋರ್ಸ್‌ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next