Advertisement

ನ್ಯಾಯಾಲಯದ ಮೇಲೆ ವಿಶ್ವಾಸವಿಡಿ ರಾಮಮಂದಿರ ಕುರಿತು ಮೋದಿ ನುಡಿ

10:38 AM Sep 21, 2019 | sudhir |

ನಾಸಿಕ್‌: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ವಿಚಾರ ವನ್ನು ಪ್ರಸ್ತಾವಿಸಿದ್ದು, “ರಾಮಮಂದಿರ ವಿವಾದದ ವಿಚಾರಣೆ ಸುಪ್ರೀಂ ಕೋರ್ಟ್‌ ನಲ್ಲಿ ನಡೆಯುತ್ತಿದೆ. ನ್ಯಾಯಾಲಯದ ಮೇಲೆ ವಿಶ್ವಾಸವಿಡಿ’ ಎಂದಿದ್ದಾರೆ.

Advertisement

ಮಿತ್ರಪಕ್ಷ ಶಿವಸೇನೆಯ ಹೆಸರೆತ್ತದೇ ಆ ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಅವರು, “ರಾಮಮಂದಿರದ ವಿಚಾರದಲ್ಲಿ ಕೆಲವು ದೊಡ್ಡ ಬಾಯಿಯವರ ಹೇಳಿಕೆಗಳನ್ನು ಗಮನಿಸಿದರೆ ನನಗೆ ಆಶ್ಚರ್ಯವಾಗುತ್ತದೆ. ಇವರೆಲ್ಲ ಎಲ್ಲಿಂದ ಬಂದರು? ದೇಶದ ಪ್ರತಿಯೊಬ್ಬರೂ ಸರ್ವೋಚ್ಚ ನ್ಯಾಯಾಲಯವನ್ನು ಗೌರವಿ ಸುತ್ತಾರೆ. ಈಗ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುತ್ತಿದೆ. “ದೊಡ್ಡ ದಾಗಿ ಮಾತನಾಡುವ ವ್ಯಕ್ತಿ’ಗಳಿಗೆ ನಾನು ಕೈಮುಗಿದು ಕೇಳಿಕೊಳ್ಳುವುದಿಷ್ಟೆ- ದಯ ವಿಟ್ಟು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಯಿಡಿ’ ಎಂದಿದ್ದಾರೆ. ಸೋಮವಾರ ವಷ್ಟೇ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಕಾನೂನು ತರುವ ದಿಟ್ಟ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಳ್ಳಲಿ ಎಂದು ಹೇಳಿದ್ದರು.

100 ದೇಶಗಳಿಗೆ ರಫ್ತು: ರಾಷ್ಟ್ರೀಯ ಭದ್ರತೆ ವಿಚಾರವನ್ನು ಹಿಂದಿನ ಯುಪಿಎ ಸರಕಾರ ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂದೂ ಆರೋಪಿಸಿರುವ ಪ್ರಧಾನಿ ಮೋದಿ, ಭದ್ರತಾ ಪಡೆಗಳು 2009ರಲ್ಲಿ 1.86 ಲಕ್ಷ ಬುಲೆಟ್‌ ಪ್ರೂಫ್ ಜಾಕೆಟ್‌ಗಳನ್ನು ನೀಡುವಂತೆ ಬೇಡಿಕೆಯಿಟ್ಟಿದ್ದವು. ಆದರೆ, ಕಾಂಗ್ರೆಸ್‌ ನೇತೃತ್ವದ ಸರಕಾರ ಅದಕ್ಕೆ ಕಿವಿಗೊಡಲೇ ಇಲ್ಲ. ಆದರೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಅನಂತರ, ಭದ್ರತಾ ಪಡೆಗಳ ಬೇಡಿಕೆಯನ್ನು ಈಡೇರಿಸಿದ್ದು ಮಾತ್ರವಲ್ಲ, ಈಗ ನಮ್ಮ ದೇಶದಲ್ಲೇ ತಯಾರಾದ ಬುಲೆಟ್‌ ಪ್ರೂಫ್ ಜಾಕೆಟ್‌ಗಳನ್ನು 100ರಷ್ಟು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದಿದ್ದಾರೆ.
ಇದೇ ವೇಳೆ, ಇತ್ತೀಚೆಗೆ 50 ಕೋಟಿ ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ರಾಜಕೀಯ ನಡೆ ಎಂದು ಟೀಕಿಸಿದ್ದವರಿಗೆ ತಿರುಗೇಟು ನೀಡಿದ ಮೋದಿ, “ಜಾನುವಾರುಗಳೇನೂ ವೋಟು ಹಾಕಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next