Advertisement
ಲಕ್ಷದ್ವೀಪ, ಕೇರಳ ಹಾಗೂ ತಮಿಳುನಾಡುಗಳಲ್ಲಿ ಒಖೀ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಪರಿ ಶೀಲನೆಗಾಗಿ ಸೋಮವಾರ ರಾತ್ರಿ ಹೊಸದಿಲ್ಲಿ ಯಿಂದ ಹೊರಟು ನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಕದ್ರಿಹಿಲ…Õನ ಸಕೀìಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಮೋದಿ ರಾತ್ರಿ 12 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ಸಕೀìಟ್ ಹೌಸ್‌ಗೆ ಪ್ರಯಾಣಿಸಿದರು. ಸಕೀìಟ್ ಹೌಸ್‌ನಲ್ಲಿ ಸೂಟ್ ನಂ.1ರ ಕೊಠಡಿಯನ್ನು ಪ್ರಧಾನಿ ವಾಸ್ತವ್ಯಕ್ಕೆ ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅ. 29ರಂದು ಉಜಿರೆ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುರಿ ತಾಗಿನ ಮಾಹಿತಿ, ಚಿತ್ರಸಂಪುಟಗಳುಳ್ಳ “ನಮೋ ಮಂಜುನಾಥ’ ಎನ್ನುವ ಪುಸ್ತಕವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ ಮೂಲಕ ಉದಯವಾಣಿ ಪತ್ರಕರ್ತ ಲಕ್ಷ್ಮೀ ಮಚ್ಚಿನ ಸಂಪಾ ದನೆಯಲ್ಲಿ ಹೊರತರಲಾಗಿತ್ತು. ಈ ಪುಸ್ತಕವನ್ನು ಸಂಸದ ನಳಿನ್ ಅವರು ಮಂಗಳವಾರ ಪ್ರಧಾನಿ ಮೋದಿ ಅವರಿಗೆ ಹಸ್ತಾಂತರಿಸಿದರು.
Related Articles
Advertisement
ಜನರ ಸನಿಹಕ್ಕೆ …ಪ್ರಧಾನಿ ಮೋದಿ ಅವರನ್ನು ಕಾಣಲು ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಸೋಮವಾರ ಮಧ್ಯರಾತ್ರಿ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ನೆರೆದಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಮೋದಿ ಅವರಿಗೆ ಸ್ವಾಗತ ಕೋರುವುದಕ್ಕೆ 2,500ಕ್ಕೂ ಅಧಿಕ ಕಾರ್ಯಕರ್ತರು ಅಲ್ಲಿ ಸೇರಿದ್ದರು. ಮೋದಿ ಅವರು ವಿಮಾನ ನಿಲ್ದಾಣದಿಂದ ಹೊರಬಂದ ಸಂದರ್ಭದಲ್ಲಿ ಅವರು ಕಾರನ್ನು ನಿಲ್ಲಿಸಿ ಅಲ್ಲಿಂದಲೇ ಜನರತ್ತ ಕೈಬೀಸಿ, ನಮಸ್ಕರಿಸಿ ಸಕೀìಟ್ ಹೌಸ್‌ಗೆ ತೆರಳುತ್ತಾರೆ ಎಂದು ಭದ್ರತೆಯಲ್ಲಿ ನಿರತರಾಗಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿ ಭಾವಿಸಿದ್ದರು. ಆ ಪ್ರಕಾರವೇ ಸೂಕ್ತ ಬಂದೋಬಸ್ತ್ ಹಾಗೂ ಜನರನ್ನು ನಿಯಂತ್ರಿಸುವುದಕ್ಕೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಪ್ರಧಾನಿ ಭದ್ರತೆಗಿದ್ದ ಎಸ್‌ಪಿಜಿ ಕಮಾಂಡೊ ಪಡೆ ಕೂಡ ಅದೇ ಲೆಕ್ಕಾಚಾರ ಹೊಂದಿತ್ತು. ಆದರೆ ನಡೆದದ್ದೇ ಬೇರೆ. ಪ್ರಧಾನಿ ಮೋದಿ ಕಾರಿನಲ್ಲಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ, ನೆರೆದ ಕಾರ್ಯಕರ್ತರೆಲ್ಲ “ಮೋದಿ, ಮೋದಿ’ ಎಂದು ಘೋಷಣೆ ಕೂಗ ಲಾರಂಭಿಸಿದರು. ಆಗ ಮೋದಿಯವರು ಕಾರು ನಿಲ್ಲಿಸಿ, ಜನ ರತ್ತ ಕೈಬೀಸಿದರು. ಅವರು ಇನ್ನೇನು ನಿರ್ಗಮಿಸುತ್ತಾರೆ ಎಂದು ಪೊಲೀಸರು ಅಂದುಕೊಳ್ಳುತ್ತಿದ್ದಂತೆ, ಮೋದಿ ಏಕಾಏಕಿ ಕಾರಿನಿಂದ ಇಳಿದು ನೇರ ವಾಗಿ ಕಾರ್ಯಕರ್ತರ ಬಳಿ ಬಂದರು. ಇದರಿಂದ ಪೊಲೀಸರು ಹಾಗೂ ಭದ್ರತಾ ಸಿಬಂದಿ ಕ್ಷಣಕಾಲ ಗಾಬರಿಗೂ ಒಳಗಾದರು. ಜನರನ್ನು ನಿಯಂತ್ರಿಸುವುದಕ್ಕೆ ತಾತ್ಕಾಲಿಕವಾಗಿ ಕಬ್ಬಿಣದ ಮೂರು ಹಂತದ ತಡೆಬೇಲಿಯನ್ನಷ್ಟೇ ನಿರ್ಮಿಸಲಾಗಿತ್ತು. ಮೋದಿ ಜನರತ್ತ ಆಗಮಿಸುತ್ತಿದ್ದಂತೆ ಜನಸ್ತೋಮ ಕೂಡ ರೋಮಾಂಚನಕ್ಕೆ ಒಳಗಾಗಿ ಭಾವಪರವಶರಾದರು. ಭಾರೀ ಸಂಖ್ಯೆಯಲ್ಲಿದ್ದ ಜನರು ಏಕಾಏಕಿ ಹಿಂಭಾಗದಿಂದ ಮುನ್ನುಗ್ಗಿ ಮೋದಿಯವರನ್ನು ಹತ್ತಿರದಿಂದ ಕಾಣುವುದಕ್ಕೆ ನೂಕುನುಗ್ಗಲು ಆರಂಭಿಸಿದರು. ಆಗ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಬಹುದೊಡ್ಡ ಸವಾಲಾಯಿತು. ಪ್ರಧಾನಿ ಮೋದಿ ಜನಸಮೂಹದ ಅಷ್ಟು ಸನಿಹಕ್ಕೆ ತೆರಳಿ ಹಸ್ತಲಾಘವ ನಡೆಸುತ್ತಾರೆ ಎಂಬುದನ್ನು ಪೊಲೀಸರಾಗಲಿ ಎಸ್‌ಪಿಜಿ ಭದ್ರತಾ ಸಿಬಂದಿಯಾಗಲಿ ಊಹಿಸಿಯೇ ಇರಲಿಲ್ಲ. ಒಂದೆಡೆ ಜನರ ಮುಗಿಲು ಮುಟ್ಟಿದ ಹರ್ಷ, ಇನ್ನೊಂದೆಡೆ ಪ್ರಧಾನಿ ಮೋದಿ ಅನಿರೀಕ್ಷಿತವಾಗಿ ಜನರ ಅತೀ ಸನಿಹಕ್ಕೆ ತೆರಳಿದ್ದು – ಭದ್ರತೆಗೆ ಸವಾಲೆನಿಸುವ ಈ ಸನ್ನಿವೇಶವನ್ನು ಭದ್ರತಾ ಸಿಬಂದಿ ಸಮಯೋಚಿತವಾಗಿ, ಯಶಸ್ವಿಯಾಗಿ ನಿರ್ವಹಿಸಿದ್ದು ಗಮನಾರ್ಹ.