Advertisement

7 ವರ್ಷಗಳಲ್ಲಿ ದೇಶದಾದ್ಯಂತ  15 ಏಮ್ಸ್ ಆಸ್ಪತ್ರೆಗಳ ಸ್ಥಾಪನೆ : ಪ್ರಧಾನಿ ನರೇಂದ್ರ ಮೋದಿ

03:51 PM Jul 01, 2021 | Team Udayavani |

ನವ ದೆಹಲಿ :  ದೇಶದಲ್ಲಿ ಏಳು ವರ್ಷಗಳಲ್ಲಿ 15 ಏಮ್ಸ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ದೇಶದ ಹಲವಡೆಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸುವುದರ ಮೂಲಕ ಜನರಿಗೆ ಅನುಕೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು(ಗುರುವಾರ, ಜುಲೈ 1) ಹೇಳಿದ್ದಾರೆ.

Advertisement

ವೈದ್ಯರ ದಿನದ ಅಂಗವಾಗಿ ದೇಶದ ವೈದ್ಯ ಸಮೂಹವನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, ವೈದ್ಯರ ಶ್ರಮದಿಂದ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದ ಲಕ್ಷಾಂತರ ಮಂದಿಯ ಜೀವ ರಕ್ಷಣೆಯಾಗಿದೆ. ಕೋವಿಡ್ ವೈರಸ್ ವಿಶ‍್ವದಾದ್ಯಂತ ಹರಡಿದಾಗಿನಿಂದ ನಿರಂತರವಾಗಿ ವೈದ್ಯರು ಜನರ ಸೇವೆ ಮಾಡುತ್ತಿದ್ದಾರೆ.  ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲಲ್ಲಿ ದೇವರಂತೆ ವೈದ್ಯ ಸಮೂಹದವರು ಕೇಲಸ ಮಾಡಿದ್ದಾರೆ ಎಂದು ವೈದ್ಯರನ್ನು ನಮೋ ಶ್ಲಾಘಿಸಿದ್ದಾರೆ.

ಇದನ್ನೂ ಓದಿ : ದೀರ್ಘಕಾಲದ ಅನಾರೋಗ್ಯ: ಬಿಜೆಪಿ ಮಾಜಿ ಸಂಸದ ಶರದ್ ತ್ರಿಪಾಠಿ ವಿಧಿವಶ, ಪ್ರಧಾನಿ ಸಂತಾಪ

ಆರೋಗ್ಯ ಕ್ಷೇತ್ರ ಸುಧಾರಣೆಗೆ 50 ಸಾವಿರ ಕೋಟಿ 

ದೇಶದಾದ್ಯಂತ ಆರೋಗ್ಯ ಕ್ಷೇತ್ರವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ 50 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಆರೋಗ್ಯ ಕ್ಷೇತ್ರ ಬಲಪಡಿಸುವತ್ತ ನಮ್ಮ ಮೊದಲ ಆದ್ಯತೆ ಇರಲಿದೆ ಎಂದು ಅವರು ಹೇಳಿದ್ದಾರೆ.  ಮಾತ್ರವಲ್ಲದೇ, ವೈದ್ಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗುತ್ತದೆ. ವೈದ್ಯರಿಗೆ ವಿಮಾ ಸೌಲಭ್ಯವನ್ನು ಕೂಡ ನಿಡಲಾಗುತ್ತದೆ ಎಂದು ಹೇಳಿದ್ದಾರೆ.

Advertisement

ಕೋವಿಡ್ ಸೇವೆಯಲ್ಲಿದ್ದು, ಮೃತ ಪಟ್ಟ ವೈದ್ಯರಿಗೆ ಮೋದಿ ಶ್ರದ್ಧಾಂಜಲಿ

ದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಸೋಂಕಿನ ಕಾರಣದಿಂದ ಜನರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವ ಭಯ ಭೀತಿಯಿಲ್ಲದೇ ಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ವೈದ್ಯರನ್ನು ಭಾರತೀಯರೆಲ್ಲರೂ ದೇವರೆಂದು ಪರಿಗಣಿಸಿದ್ದಾರೆ. ವೈದ್ಯರೆಂದರೇ, ಪುನರ್ ಜನ್ಮ ನೀಡುವ ದೇವರು. ಕೋವಿಡ್ ಸೇವೆಯಲ್ಲಿ ನಿರತರಾಗಿದ್ದ ನೂರಾರು ಮಂದಿ ವೈದ್ಯರನ್ನು ದೇಶ ಕಳೆದುಕೊಂಡಿದೆ. ಅವರೆಲ್ಲರ ಸೇವೆಗೆ ಭಾರತ ಕೃತಜ್ಙರಾಗಿರುತ್ತದೆ. ಅವರ ಸಾವಿಗೆ ಭಾರತದ ಜನರ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಪರಿಸರ ನಿಯಮಗಳನ್ನು ಉಲ್ಲಂಘಿಸುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ: ಯೋಗೇಶ್ವರ್

Advertisement

Udayavani is now on Telegram. Click here to join our channel and stay updated with the latest news.

Next