Advertisement

“ಮೋದಿ-ಶಾ ಬರಲಿ ಕೋಮು ಸಾಮರಸ್ಯ ಕದಡದಿರಲಿ’

07:00 AM Dec 07, 2017 | Team Udayavani |

ಕಾರವಾರ(ಭಟ್ಕಳ): “ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಪ್ರಧಾನಿ ಮೋದಿ ರಾಜ್ಯಕ್ಕೆ ಬರಲು ನಮ್ಮ ಅಭ್ಯಂತರವಿಲ್ಲ. ಆದರೆ, ಕೋಮು ಸಾಮರಸ್ಯ ಕದಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಧರ್ಮ ಪರಿಪಾಲನೆಯಾಗಬೇಕು. ಆದರೆ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಾರದು. ನಾವು ಯಾವುದೇ ಧರ್ಮಕ್ಕೆ ಸೇರಿರಲಿ, ನಾವು ಭಾರತೀಯರು. ನಮ್ಮ ನಡುವೆ ಭೇದ ಮಾಡುವ, ಬೆಂಕಿ ಇಡುವ ಕೆಲಸ ಮಾಡುವವರನ್ನು ಖಂಡಿಸಬೇಕಾಗುತ್ತದೆ ಎಂದರು.

ವಿಶೇಷ ಕಾನೂನು ರಚನೆ ಇಲ್ಲ: ಮುಜರಾಯಿ ಇಲಾಖೆ ದೇವಾಲಯಗಳಿಗೆ ದಲಿತ ಅರ್ಚಕರ ನೇಮಕ ಆಗಬಾರದು ಅಂತೇನಿಲ್ಲ. ಯಾರು ಬೇಕಾದರೂ ದೇವಸ್ಥಾನ ನಿರ್ಮಿಸಿಕೊಂಡು ಅವರೇ ಅರ್ಚಕರಾಗಬಹುದು. ಆದರೆ, ದಲಿತ ಅರ್ಚಕರ ನೇಮಕ ಸಂಬಂಧದ ವಿಶೇಷ ಕಾನೂನು ರಚಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next