Advertisement
ದೇಶದಲ್ಲೇ ಈ ಗನ್‌ಗಳನ್ನು ಅಭಿವೃದ್ಧಿಪಡಿಸುವುದರ ಪ್ರಮುಖ ಅನುಕೂಲವೆಂದರೆ ಈ ಗನ್‌ಗಳಿಗೆ ಅಗತ್ಯವಿರುವ ಯಾವುದೇ ಬಿಡಿಭಾಗಕ್ಕಾಗಿ ಸೇನೆ ವಿದೇಶಿ ಕಂಪೆನಿಗಳ ಮೊರೆ ಹೋಗಬೇಕಿಲ್ಲ. ಈ ಗನ್‌ಗಳು 40 ವರ್ಷಗಳ ಬಾಳಿಕೆ ಅವಧಿ ಹೊಂದಿದ್ದು, ಈ ವೇಳೆ ಎಲ್ ಆ್ಯಂಡ್ ಟಿ ಸ್ವತಃ ಬಿಡಿಭಾಗಗಳನ್ನು ಸೇನೆಗೆ ಒದಗಿಸಲಿದೆ. ಅತ್ಯಾಧುನಿಕ ಕೆ9 ವಜ್ರ
ಸ್ವಯಂ ಚಾಲಿತ ಹೊವಿಟ್ಜರ್ ಗನ್‌ಗಳನ್ನು ನಿರ್ಮಾಣ ಮಾಡುತ್ತಿರುವ ಲಾರ್ಸನ್ ಆ್ಯಂಡ್ ಟೂಬ್ರೋ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ. ಇದು ದೇಶದ ರಕ್ಷಣಾ ಕ್ಷೇತ್ರದಲ್ಲಿ ಅತ್ಯಂತ ಗಮನಾರ್ಹ ಹೆಜ್ಜೆಯಾಗಿದೆ.
-ನರೇಂದ್ರ ಮೋದಿ, ಪ್ರಧಾನಿ