Advertisement
ಬಿಜೆಪಿ ಮೂಲಗಳ ಪ್ರಕಾರ, ಪ್ರಧಾನಿ ಸೋಮವಾರ ರಾತ್ರಿ 11.45ಕ್ಕೆ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿ, ಸಕೀìಟ್ ಹೌಸ್‌ನಲ್ಲಿ ವಿಶ್ರಾಂತಿ ಪಡೆಯ ಲಿದ್ದಾರೆ. ಮರುದಿನ ಬೆಳಗ್ಗೆ 7.45ಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿ, ಹೆಲಿಕಾಪ್ಟರ್ ಮೂಲಕ ಲಕ್ಷದ್ವೀಪ ದ್ವೀಪ ಸಮೂಹದ ಅಗಾತಿ ದ್ವೀಪಕ್ಕೆ ತೆರಳಲಿದ್ದಾರೆ. ಲಕ್ಷದ್ವೀಪದಲ್ಲಿ ಇತ್ತೀಚೆಗೆ ಒಖೀ ಚಂಡಮಾರುತದಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದು, ಜತೆಗೆ ಅಪಾರ ನಷ್ಟ-ಹಾನಿ ಸಂಭವಿಸಿದೆ. ಹಾನಿಯ ಪರಿಶೀಲನೆಯನ್ನು ಅವರು ನಡೆಸಲಿದ್ದಾರೆ. ಕೇರಳದ ಕೊಚ್ಚಿಗಿಂತ ಮಂಗಳೂರು ವಿಮಾನ ನಿಲ್ದಾಣದಿಂದ ಲಕ್ಷದ್ವೀಪ ದ್ವೀಪ ಸಮೂಹಕ್ಕೆ ತೆರಳುವುದು ಹತ್ತಿರ ವಾಗಿರುವ ಕಾರಣ ಪ್ರಧಾನಿ ಮೋದಿ ಅವರು ಮಂಗಳೂರಿಗೆ ಆಗಮಿಸಿ ಅಲ್ಲಿಂದ ತೆರಳ ಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ವಾಸ್ತವ್ಯಕ್ಕೆ ನಗರದ ಸಕೀìಟ್ ಹೌಸ್‌ನಲ್ಲಿ ಸಕಲ ಸಿದ್ಧತೆ ಗಳನ್ನು ಕೈಗೊಳ್ಳಲಾಗುತ್ತಿದೆ. ಸಕೀìಟ್ ಹೌಸ್ ನಲ್ಲಿ ಹಲವು ಕೊಠಡಿಗಳಿದ್ದು, ಅವುಗಳ ಪೈಕಿ ಎರಡನ್ನು ವಿಶೇಷವಾಗಿ ಪ್ರಧಾನಿಗಳ ವಾಸ್ತವ್ಯಕ್ಕೆ ನಿಗದಿಪಡಿಸಲಾಗಿದೆ. ಭದ್ರತೆ ದೃಷ್ಟಿ ಯಿಂದ ಇಡೀ ಸಕೀìಟ್ ಹೌಸ್ ಆಸುಪಾಸಿನ ಎಲ್ಲ ಕಟ್ಟಡ ಹಾಗೂ ಇಡೀ ಆವರಣವನ್ನು ಪ್ರಧಾನಿಯವರ ಭದ್ರತೆಯ ನೇತೃತ್ವ ವಹಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳ ಸುಪರ್ದಿಗೆ ರವಿವಾರ ಸಂಜೆಯೇ ಒಪ್ಪಿಸಲಾಗಿದೆ. ಮೋದಿ ವಿಶೇಷ ಭದ್ರತಾಧಿಕಾರಿಗಳ ಸೂಚನೆಯ ಮೇರೆಗೆ ಎಲ್ಲೆಡೆಯೂ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗುತ್ತಿದೆ. ವಿಶೇಷ ಬಾಂಬ್ ಪತ್ತೆ ದಳ, ಶ್ವಾನದಳದಿಂದ ರವಿವಾರ ಸಂಜೆ ಭದ್ರತೆ ಕುರಿತಂತೆ ಸಕೀìಟ್ ಹೌಸ್‌ನ ಹೊಸ ಮತ್ತು ಹಳೆಯ ಕಟ್ಟಡಗಳಲ್ಲಿ ಹಾಗೂ ಆವರಣದಲ್ಲಿ ವ್ಯಾಪಕ ತಪಾಸಣೆ ನಡೆಸಲಾಗಿದೆ. ಸಕೀìಟ್ ಹೌಸ್‌ನಲ್ಲಿ ಈ ಮೊದಲು ಕೊಠಡಿಗಳನ್ನು ಕಾಯ್ದಿರಿಸಿ ವಾಸ್ತವ್ಯ ಹೂಡಿದ್ದವರನ್ನು ತೆರವು ಗೊಳಿಸಲಾಗಿದ್ದು, ಡಿ.18 ಹಾಗೂ ಡಿ. 19ರ ಎಲ್ಲ ಕೊಠಡಿಗಳ ಬುಕ್ಕಿಂಗ್ ಅನ್ನು ರದ್ದು ಪಡಿಸಲಾಗಿದೆ. ಸಕೀìಟ್ ಹೌಸ್ ಆಸುಪಾಸಿನಲ್ಲಿ ಕಾರ್ಯಾಚರಿಸುತ್ತಿರುವ 2 ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ರವಿವಾರ ಸಂಜೆ ಯಿಂದಲೇ ಮುಚ್ಚಿಸಲಾಗಿದೆ. ಸಕೀìಟ್ ಹೌಸ್‌ಗೆ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಸಕೀìಟ್ ಹೌಸ್ ಹಾಗೂ ಸುತ್ತಮುತ್ತ ವಿಶೇಷ ವಿದ್ಯುತ್ ದೀಪಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತಿದೆ. ಹೆಚ್ಚು ಪ್ರಖರತೆ ಹೊಂದಿರುವ ಸುಮಾರು 100ಕ್ಕೂ ಅಧಿಕ ವಿದ್ಯುದ್ದೀಪ ಗಳನ್ನು ಆವರಣದ ಸುತ್ತಲೂ ಅಳವಡಿಸಲಾಗಿದೆ. ವಿದ್ಯುತ್ ಸರಬರಾಜು ಸ್ಥಗಿತಗೊಂಡು ತೊಂದರೆ ಯಾಗ ಬಾರದು ಎಂಬ ಮುನ್ನೆಚ್ಚರಿಕೆ ಯಿಂದ ಅಲ್ಲಲ್ಲಿ ಜನರೇಟರ್‌ಗಳನ್ನು ಕೂಡ ವ್ಯವಸ್ಥೆ ಗೊಳಿಸ ಲಾಗಿದೆ. ಭದ್ರತಾ ಕಣ್ಗಾವಲಿಗಾಗಿ ಸುಮಾರು 60 ಸಿಸಿ ಕೆಮರಾಗಳನ್ನು ಅಗತ್ಯ ವಿರುವ ಕಡೆಗಳಲ್ಲಿ ಅಳವಡಿಸಲಾಗಿದೆ. ಪ್ರಧಾನಿಯವರ ಭದ್ರತೆಗಾಗಿ ಆಗಮಿಸುವ ವಿಶೇಷ ಭದ್ರತಾ ಪಡೆಯವರು ಹಾಗೂ ಪ್ರಧಾನಿ ಕಾರ್ಯಾಲಯದಿಂದ ಆಗಮಿ ಸುವ ಸಿಬಂದಿಗೆ ಕದ್ರಿಯಲ್ಲಿರುವ ಐಬಿ ಯಲ್ಲಿ ವಾಸ್ತವ್ಯಕ್ಕೆ ಈಗಾಗಲೇ ವ್ಯವಸ್ಥೆ ಕಲ್ಪಿಸಲಾಗಿದೆೆ.
Related Articles
ಪ್ರಧಾನಿಯವರ ಭದ್ರತೆಗಾಗಿ ಈಗಾಗಲೇ ನಿಯೋಜನೆಗೊಂಡಿರುವ ಎನ್‌ಎಸ್‌ಜಿಗೆ ಸೇರಿದ ವಿಶೇಷ ಭದ್ರತಾ ಪಡೆಯು ರವಿ ವಾರ ಸಂಜೆಯೇ ಮಂಗಳೂರಿಗೆ ಆಗಮಿಸಿದೆ. ಎನ್‌ಎಸ್‌ಜಿ ಕಮಾಂಡೋಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಾಸ್ತವ್ಯ ಹೂಡಿದ್ದು, ಪ್ರಧಾನಿ ಆಗಮನ ಹಾಗೂ ವಾಸ್ತವ್ಯದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಎಲ್ಲ ರೀತಿಯ ಭದ್ರತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ಹಾಗೂ ನಿಗಾ ವಹಿಸುತ್ತಿದ್ದಾರೆ. ವಿಮಾನನಿಲ್ದಾಣ ಹಾಗೂ ಸಕೀìಟ್ ಹೌಸ್ ನಡುವೆ ಸಂಚಾರಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಹೊಸದಿಲ್ಲಿಯಿಂದ ವಿಶೇಷ ಕಾರುಗಳು ಕೂಡ ನಗರಕ್ಕೆ ರವಾನೆಯಾಗಲಿವೆ.
Advertisement
ವಿಶೇಷ ಕಚೇರಿ ವ್ಯವಸ್ಥೆಪ್ರಧಾನಿ ಮೋದಿ ವಾಸ್ತವ್ಯ ಹಿನ್ನೆಲೆಯಲ್ಲಿ ಸಕೀìಟ್ ಹೌಸ್‌ನ ಕೊಠಡಿಯೊಂದರಲ್ಲಿ ಪ್ರಧಾನಿಯವರ ವಿಶೇಷ ತಾತ್ಕಾಲಿಕ ಕಚೇರಿಯನ್ನು ವ್ಯವಸ್ಥೆಗೊಳಿಸಲಾಗಿದೆ. ಒಟ್ಟು ನಾಲ್ಕು ಕಂಪ್ಯೂಟರ್ ಹಾಗೂ ಪ್ರಿಂಟರ್ ಸೌಲಭ್ಯವನ್ನು ಒದಗಿಸಲಾಗಿದ್ದು, ಪ್ರತ್ಯೇಕ ಇಂಟರ್‌ನೆಟ್ ಸಂಪರ್ಕವನ್ನೂ ಒದಗಿಸಲಾಗಿದೆ. ಮೋದಿ ವಾಸ್ತವ್ಯ ಅವಧಿಯಲ್ಲಿ ಪ್ರಧಾನಿಯವರಿಗೆ ಸಂಬಂಧಿಸಿದ ಅಧಿಕೃತ ವಿಚಾರಗಳು ಅಥವಾ ಸಂವಹನ – ಸಂಪರ್ಕಕ್ಕಾಗಿ ಈ ವಿಶೇಷ ಕಚೇರಿಯನ್ನು ಸಿದ್ಧಗೊಳಿಸಲಾಗಿದೆ. ಬೆಳಗ್ಗೆ ಉಪ್ಪಿಟ್ಟು – ದೋಸೆ
ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ರಾತ್ರಿ ಆಗಮಿಸುವ ದಿನ ಅಂದರೆ, ಸೋಮವಾರ ರಾತ್ರಿ ಊಟವನ್ನು ವಿಶೇಷ ವಿಮಾನದಲ್ಲೇ ಸ್ವೀಕರಿಸುತ್ತಾರೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗಿನ ಉಪಾಹಾರವನ್ನು ಸಕೀìಟ್ ಹೌಸ್‌ನಲ್ಲಿ ಸ್ವೀಕರಿಸಲಿದ್ದಾರೆ. ಅವರ ಉಪಾಹಾರಕ್ಕೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ತಯಾರಿಯನ್ನು ಕೈಗೊಳ್ಳಲಾಗಿದೆ. ಬೆಳಗ್ಗಿನ ಹೊತ್ತು ಮೋದಿ ಅವರಿಗೆ ಉಪ್ಪಿಟ್ಟು ಹಾಗೂ ದೋಸೆ ಸೇರಿದಂತೆ ವಿವಿಧ ಸ್ವಾದಿಷ್ಟ ಖಾದ್ಯಗಳ ಮೆನು ರೂಪಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಮಂಗಳೂರಿಗೆ ಮೂರನೇ ಭೇಟಿ
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮಂಗಳೂರಿಗೆ ಇದು ಅವರ ಮೂರನೇ ಭೇಟಿ. 2016ರಲ್ಲಿ ಕೇರಳದ ಕೊಚ್ಚಿಗೆ ತೆರಳುವ ಹಾದಿಯಲ್ಲಿ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಕಾರ್ಯಕರ್ತರನ್ನು ಭೇಟಿಯಾಗಿದ್ದರು. ಆದರೆ ಅಲ್ಲಿಂದಲೇ ಹೆಲಿಕಾಪ್ಟರ್ ಮೂಲಕ ಕೊಚ್ಚಿಗೆ ತೆರಳಿದ್ದರು. ಅ. 29ರಂದು ಉಜಿರೆ ಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದರು. ಆಗ ಕೂಡ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ತೆರಳಿದ್ದರು. ಇದು ಅವರ ತೃತೀಯ ಮಂಗಳೂರು ಭೇಟಿಯಾಗಿದ್ದು, ಇದೇ ಮೊದಲ ಬಾರಿಗೆ ನಗರದಲ್ಲಿ ಅವರು ವಾಸ್ತವ್ಯ ಹೂಡುತ್ತಿರುವುದು ವಿಶೇಷ. ಮಂಗಳೂರಿನಲ್ಲಿ ತಂಗುವ ಎರಡನೇ ಪ್ರಧಾನಿ
ಮೋದಿ ಮಂಗಳೂರಿನಲ್ಲಿ ತಂಗುವ ಎರಡನೇ ಪ್ರಧಾನಿಯಾಗಲಿದ್ದಾರೆ. ಈ ಹಿಂದೆ ಪಂಡಿತ್ ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ಮಂಗಳೂರಿಗೆ ಆಗಮಿಸಿದ್ದರು. ಆಗ ಅವರು ನಗರದ ಹೊಗೆ ಬಜಾರ್‌ನಲ್ಲಿ ಅಲುºಕರ್ಕ್ ಅವರ ನಿವಾಸದಲ್ಲಿ ತಂಗಿದ್ದರು. ನೆಹರೂ ಆಗ ಕೇಂದ್ರ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಇದೇ ಕಾರಣಕ್ಕೆ ಆ ಮೈದಾನಕ್ಕೆ “ನೆಹರೂ ಮೈದಾನ’ ಎಂಬ ಹೆಸರು ಬಂದಿದೆ. ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸಿŒ ನವ ಮಂಗಳೂರು ಬಂದರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 1975ರಂದು ನವಮಂಗಳೂರು ಬಂದರನ್ನು ಲೋಕಾರ್ಪಣೆ ಮಾಡಿದ್ದರು. ಮೊರಾರ್ಜಿ ದೇಸಾಯಿ, ಚಂದ್ರಶೇಖರ್, ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್, ವಾಜಪೇಯಿ ಕೂಡ ಪ್ರಧಾನಿಯಾಗಿದ್ದಾಗ ಜಿಲ್ಲೆಗೆ ಭೇಟಿ ನೀಡಿದ್ದರು. ಆದರೆ, ನೆಹರೂ ಅನಂತರ ಮಂಗಳೂರು ನಗರದಲ್ಲಿ ವಾಸ್ತವ್ಯ ಹೂಡುತ್ತಿರುವ ಪ್ರಧಾನಿ ನರೇಂದ್ರ ಮೋದಿ. ಇದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.ಬೆಳಗ್ಗೆ ಉಪ್ಪಿಟ್ಟು – ದೋಸೆ
ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ರಾತ್ರಿ ಆಗಮಿಸುವ ದಿನ ಅಂದರೆ, ಸೋಮವಾರ ರಾತ್ರಿ ಊಟವನ್ನು ವಿಶೇಷ ವಿಮಾನದಲ್ಲೇ ಸ್ವೀಕರಿಸುತ್ತಾರೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗಿನ ಉಪಾಹಾರವನ್ನು ಸಕೀìಟ್ ಹೌಸ್‌ನಲ್ಲಿ ಸ್ವೀಕರಿಸಲಿದ್ದಾರೆ. ಅವರ ಉಪಾಹಾರಕ್ಕೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ತಯಾರಿಯನ್ನು ಕೈಗೊಳ್ಳಲಾಗಿದೆ. ಬೆಳಗ್ಗಿನ ಹೊತ್ತು ಮೋದಿ ಅವರಿಗೆ ಉಪ್ಪಿಟ್ಟು ಹಾಗೂ ದೋಸೆ ಸೇರಿದಂತೆ ವಿವಿಧ ಸ್ವಾದಿಷ್ಟ ಖಾದ್ಯಗಳ ಮೆನು ರೂಪಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಮಂಗಳೂರಿಗೆ ಮೂರನೇ ಭೇಟಿ
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮಂಗಳೂರಿಗೆ ಇದು ಅವರ ಮೂರನೇ ಭೇಟಿ. 2016ರಲ್ಲಿ ಕೇರಳದ ಕೊಚ್ಚಿಗೆ ತೆರಳುವ ಹಾದಿಯಲ್ಲಿ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಕಾರ್ಯಕರ್ತರನ್ನು ಭೇಟಿಯಾಗಿದ್ದರು. ಆದರೆ ಅಲ್ಲಿಂದಲೇ ಹೆಲಿಕಾಪ್ಟರ್ ಮೂಲಕ ಕೊಚ್ಚಿಗೆ ತೆರಳಿದ್ದರು. ಅ. 29ರಂದು ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದರು. ಆಗ ಕೂಡ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ತೆರಳಿದ್ದರು. ಇದು ಅವರ ತೃತೀಯ ಮಂಗಳೂರು ಭೇಟಿಯಾಗಿದ್ದು, ಇದೇ ಮೊದಲ ಬಾರಿಗೆ ನಗರದಲ್ಲಿ ಅವರು ವಾಸ್ತವ್ಯ ಹೂಡುತ್ತಿರುವುದು ವಿಶೇಷ. ಮಂಗಳೂರಿನಲ್ಲಿ ತಂಗುವ ಎರಡನೇ ಪ್ರಧಾನಿ
ಮೋದಿ ಮಂಗಳೂರಿನಲ್ಲಿ ತಂಗುವ ಎರಡನೇ ಪ್ರಧಾನಿಯಾಗಲಿದ್ದಾರೆ. ಈ ಹಿಂದೆ ಪಂಡಿತ್ ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ಮಂಗಳೂರಿಗೆ ಆಗಮಿಸಿದ್ದರು. ಆಗ ಅವರು ನಗರದ ಹೊಗೆ ಬಜಾರ್‌ನಲ್ಲಿ ಅಲುºಕರ್ಕ್ ಅವರ ನಿವಾಸದಲ್ಲಿ ತಂಗಿದ್ದರು. ನೆಹರೂ ಆಗ ಕೇಂದ್ರ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಇದೇ ಕಾರಣಕ್ಕೆ ಆ ಮೈದಾನಕ್ಕೆ “ನೆಹರೂ ಮೈದಾನ’ ಎಂಬ ಹೆಸರು ಬಂದಿದೆ. ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ನವ ಮಂಗಳೂರು ಬಂದರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 1975ರಂದು ನವಮಂಗಳೂರು ಬಂದರನ್ನು ಲೋಕಾರ್ಪಣೆ ಮಾಡಿದ್ದರು. ಮೊರಾರ್ಜಿ ದೇಸಾಯಿ, ಚಂದ್ರಶೇಖರ್, ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್, ವಾಜಪೇಯಿ ಕೂಡ ಪ್ರಧಾನಿಯಾಗಿದ್ದಾಗ ಜಿಲ್ಲೆಗೆ ಭೇಟಿ ನೀಡಿದ್ದರು. ಆದರೆ, ನೆಹರೂ ಅನಂತರ ಮಂಗಳೂರು ನಗರದಲ್ಲಿ ವಾಸ್ತವ್ಯ ಹೂಡುತ್ತಿರುವ ಪ್ರಧಾನಿ ನರೇಂದ್ರ ಮೋದಿ. ಇದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಭವ್ಯ ಸ್ವಾಗತಕ್ಕೆ ಬಿಜೆಪಿ ಸಿದ್ಧತೆ
ಪ್ರಧಾನಿ ಮೋದಿಯವರಿಗೆ ಭವ್ಯ ಸ್ವಾಗತ ಕೋರಲು ದ. ಕ. ಜಿಲ್ಲಾ ಬಿಜೆಪಿ ಸಜ್ಜಾಗಿದ್ದು, ಅವರು ನಗರಕ್ಕೆ ಆಗಮಿಸುವ ಹಾದಿಯುದ್ದಕ್ಕೂ ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಗೂ ಬಿಜೆಪಿ ಧ್ವಜವನ್ನು ಹಾಕಲಾಗುತ್ತಿದೆ. ಪ್ರಧಾನಿ ಆಗಮಿಸುವಾಗ ಮತ್ತು ತೆರಳುವಾಗ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಲ್ಲಿ ಸೇರುವಂತೆ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ನಗರ ಮಂಡಲ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ. ಲಂಕಾ ಪ್ರಧಾನಿ ತಂಗಿದ್ದರು
ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಅವರು ನವೆಂಬರ್ 21ರಂದು ಶ್ರೀ ಕ್ಷೇತ್ರ ಕೊಲ್ಲೂರಿಗೆ ಆಗಮಿಸಿ ಬಳಿಕ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿ ದ್ದರು. ಅವರು ಮಂಗಳೂರಿಗೆ ಬಂದು ವಾಸ್ತವ್ಯ ಹೂಡಿದ ಮೊದಲ ವಿದೇಶೀ ಪ್ರಧಾನಿ. ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ 16 ಬೆಂಗಾವಲು ಕಾರುಗಳ ಜತೆಗೆ ಮಂಗಳೂರಿನ ಸ್ಟೇಟ್‌ಬ್ಯಾಂಕ್ ಬಳಿಯಿರುವ ಗೇಟ್‌ವೇ ಹೊಟೇಲ್‌ಗೆ ತೆರಳಿದ್ದರು. ಅಲ್ಲಿ ಒಂದು ದಿನ ವಿಶ್ರಾಂತಿ ಪಡೆದು ಮರುದಿನ ನಿರ್ಗಮಿಸಿದ್ದರು. ಬೀದಿನಾಯಿ ಕಾಟಕ್ಕೂ ಬ್ರೇಕ್
ಸಕೀìಟ್ ಹೌಸ್ ಆವರಣದಲ್ಲಿ ಬೀದಿ ನಾಯಿಗಳ ಕಾಟ ಬಹಳವಿದೆ. ಪ್ರಧಾನಿ ಸಕೀìಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡುವ ಹಿನ್ನೆಲೆಯಲ್ಲಿ ಆಸುಪಾಸಿನ ಬೀದಿನಾಯಿ ಗಳನ್ನು ತೆರವುಗೊಳಿಸಲಾಗಿದೆ.