ನವದೆಹಲಿ:ದೇಶದ ಸರ್ವೋಚ್ಚ ನ್ಯಾಯಾಲಯದ ಅಧಿಕೃತ ಇಮೇಲ್‌ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರವಿರುವ ಪೋಸ್ಟರ್ ಇರುವುದು ಗಮನಕ್ಕೆ ಬಂದಿದ್ದು, ಕೂಡಲೇ ಅದನ್ನು ತೆಗೆದುಹಾಕುವಂತೆ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ)ಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯು ತಮ್ಮ ವಕೀಲರಿಗೆ ಕಳುಹಿಸುವ ಅಧಿಕೃತ ಇಮೇಲ್‌ಗಳ ಕೆಳಭಾಗದಲ್ಲಿ ಈ ಪೋಸ್ಟರ್ ಇರುವುದರ ಬಗ್ಗೆ ಕೆಲವು ವಕೀಲರು ದೂರು ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ಎನ್ನುವುದು ಒಂದು ಸ್ವತಂತ್ರ ಅಂಗ. ಅದು ಸರ್ಕಾರದ ಭಾಗವಲ್ಲ. ಹೀಗಿರುವಾಗ ನ್ಯಾಯಾಲಯದ ಇಮೇಲ್‌ಗಳಲ್ಲಿ ಸರ್ಕಾರದ ಮುಖ್ಯಸ್ಥರ ಫೋಟೋ ಇರುವುದು ಸರಿಯಲ್ಲ ಎಂದು ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಭಯೋತ್ಪಾದನೆ ರಾಜಕೀಯ ಅಸ್ತ್ರವಾಗಿ ಬಳಸಬಾರದು|ಪಾಕ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮೋದಿ ಗುಡುಗು
ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿರುವ ರಿಜಿಸ್ಟ್ರಿಯು, ಸುಪ್ರೀಂಗೆ ಇಮೇಲ್ ಸೇವೆಗಳನ್ನು ಒದಗಿಸುವ ರಾಷ್ಟ್ರೀಯ ಮಾಹಿತಿ ಕೇಂದ್ರವನ್ನು ಸಂಪರ್ಕಿಸಿ, ಆ ಬ್ಯಾನರ್ ತೆಗೆದುಹಾಕುವಂತೆ ಸೂಚಿಸಿದೆ. ಜತೆಗೆ, ಅಲ್ಲಿ ಸುಪ್ರೀಂ ಕೋರ್ಟ್‌ನ ಫೋಟೋವನ್ನು ಹಾಕುವಂತೆಯೂ ನಿರ್ದೇಶಿಸಿದೆ.