Advertisement

BJP ಯಿಂದ ಅಮಾನತಾವರಿಂದಲೂ ‘ಮತ್ತೊಮ್ಮೆ ಮೋದಿ’ ಗೋಡೆ ಬರಹಕ್ಕೆ ಚಾಲನೆ

05:01 PM Feb 22, 2024 | Team Udayavani |

ಮೂಡಿಗೆರೆ: ದೇಶಾದ್ಯಂತ ನಡೆಯುತ್ತಿರುವ ‘ಮತ್ತೊಮ್ಮೆ ಮೋದಿ ಸರ್ಕಾರ’ ಗೋಡೆ ಬರಹಕ್ಕೆ, ಮೂಡಿಗೆರೆಯ ರೆಬೆಲ್ ಬಿಜೆಪಿ ನಾಯಕರು ಹಲವಾರು ಕಾರ್ಯಕರ್ತರನ್ನು ಒಡಗೂಡಿಸಿಕೊಂಡು ಚಾಲನೆ ನೀಡಿದರು.

Advertisement

ಮೂಡಿಗೆರೆಯ ನಗರದ ಪ್ರಮುಖ ಕಟ್ಟಡಗಳ ಗೋಡೆಗಳ ಮೇಲೆ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ತಲೆಬರಹದ ಕಮಲ ಚಿಹ್ನೆಯ ಗೋಡೆ ಬರಹಗಳನ್ನು ಹಲವೆಡೆಗಳಲ್ಲಿ ಬರೆದಿದ್ದಾರೆ. ಇತ್ತೀಚಿಗೆ ಪಕ್ಷದಿಂದ ಅಮಾನತಾಗಿದ್ದ ರೆಬಲ್ ಮುಖಂಡ ಪಟ್ಟದೂರು ಪುಟ್ಟಣ್ಣ, ಹಾಗೂ ಕನ್ನೇಹಳ್ಳಿ ಭರತ್ ರೊಂದಿಗೆ ‌ ಹಲವಾರು ಬಿಜೆಪಿ ಕಾರ್ಯಕರ್ತರು ಸೇರಿದ್ದರು.

ಮುಖಂಡ ಪುಟ್ಟಣ್ಣ ಮಾತನಾಡಿ ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬರಬೇಕು, ದೇಶದ ಉತ್ತಮ ಆಡಳಿತ ಮತ್ತೆ ಮುಂದುವರಿಯಬೇಕು, ಹಾಗಾಗಿ ಮುಂದಿನ ಚುನಾವಣೆಯಲ್ಲಿ ಹಗಲಿರಲು ಶ್ರಮಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next