Advertisement

X ನಲ್ಲಿ ಮೋದಿಗೆ ಈಗ 10 ಕೋಟಿ ಫಾಲೋವರ್ಸ್‌! ವಿಶ್ವದಲ್ಲೇ ಹೆಚ್ಚು ಹಿಂಬಾಲಕರ

01:16 AM Jul 15, 2024 | Team Udayavani |

ಹೊಸದಿಲ್ಲಿ: ಮೈಕ್ರೋಬ್ಲಾಗಿಂಗ್‌ ವೆಬ್‌ಸೈಟ್‌ ಟ್ವಿಟರ್‌ನಲ್ಲಿ(ಈಗ ಎಕ್ಸ್‌) ಪ್ರಧಾನಿ ನರೇಂದ್ರ ಮೋದಿ 10 ಕೋಟಿ ಹಿಂಬಾಲಕರನ್ನು (ಫಾಲೋವರ್ಸ್‌) ಹೊಂದುವ ಮೂಲಕ ಹೊಸ ಮೈಲುಗಲ್ಲು ನೆಟ್ಟಿದ್ದಾರೆ. ಈ ಸಾಧನೆ ಮಾಡಿದ ಜಗತ್ತಿನ ಮೊದಲ ನಾಯಕರಾಗಿದ್ದರೆ.

Advertisement

ಹಿಂಬಾಲಕರ ವಿಷಯದಲ್ಲಿ ಭಾರತದ ಯಾವುದೇ ನಾಯಕರು ಮೋದಿ ಹತ್ತಿರವೂ ಇಲ್ಲ. ರಾಹುಲ್‌ ಗಾಂಧಿ 2.64 ಕೋಟಿ, ಕೇಜ್ರಿವಾಲ್‌ 2.75 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ರಾಹುಲ್‌ ಗಾಂಧಿ, ಕೇಜ್ರಿವಾಲ್‌, ಅಖೀಲೇಶ್‌ ಯಾದವ್‌, ಮಮತಾ ಬ್ಯಾನರ್ಜಿ, ಲಾಲು ಪ್ರಸಾದ್‌ ಯಾದವ್‌, ಶರದ್‌ ಪವಾರ್‌ ಹಿಂಬಾಲಕರನ್ನು ಸೇರಿಸಿದರೂ 10 ಕೋಟಿಯಾಗುವುದಿಲ್ಲ.

ಹೆಚ್ಚು ಫಾಲೋವರ್ಸ್‌:  ಅಗ್ರ 5 ವಿಶ್ವ ನಾಯಕರು

ಮೋದಿ, ಭಾರತದ ಪಿಎಂ              10 ಕೋಟಿ

ಬೈಡೆನ್‌, ಅಮೆರಿಕ ಅಧ್ಯಕ್ಷ           3.81 ಕೋಟಿ

Advertisement

ಎಡೋìಗನ್‌, ಟರ್ಕಿ ಅಧ್ಯಕ್ಷ        2.15 ಕೋಟಿ

ಶೇಖ್‌ ಹೊಮ್ಮದ್‌, ಯುಎಇ        1.12 ಕೋಟಿ

ಆಂಡ್ರೆಸ್‌, ಮೆಕ್ಸಿಕೊ ಅಧ್ಯಕ್ಷ         1.09 ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next