Advertisement
ಮಳೆ ಸುರಿದ ಅವಧಿ ಕಡಿಮೆಯಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಕಳೆದ 10 ದಿನಗಳ ಬಳಿಕ ಬೆಂಗಳೂರಿನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ಪೂರ್ವ ಬಂಗಾಲ ಉಪಸಾಗರದಲ್ಲಿ ಸರ್ಕ್ನೂಲೇಶನ್ 5.8 ಕಿ.ಮೀ ಮೀಟರ್ ಎತ್ತರದಲ್ಲಿದ್ದು, ಗುರುವಾರ ವಾಯುಭಾರ ಕುಸಿತವಾಗಿದೆ.
Related Articles
Advertisement
ಧರೆಗುರಳಿದ ಮರಗಳು:
ಭಾರೀ ಮಳೆಯ ಹಿನ್ನೆಲೆಯಲ್ಲಿ ಕೋರಮಂಗಲದ 3ನೇ ಬ್ಲಾಕ್ನ 2 ಎ ಕ್ರಾಸ್ನಲ್ಲಿ ಮರಧರೆಗೆ ಉರುಳಿಸಿದೆ. ಹಾಗೆಯೇ ಎಂ.ಎಸ್. ರಾಮಯ್ಯ ಗೇಟ್ ಬಳಿಯ ಮತ್ತಿಕೆರೆ ಸಾಗುವ ರಸ್ತೆಯಲ್ಲಿ ಮರ ಬಿದ್ದಿದೆ. ರಾಜರಾಜೇಶ್ವರಿ ನಗರ ಐಡಿಎಲ್ ಸರ್ಕಲ್ ಬಳಿಯ ಕೆಂಚನಹಳ್ಳಿಯಲ್ಲಿ ಮರ ನೆಲಕ್ಕುರಳಿದೆ ಎಂದು ಬಿಬಿಎಂಪಿಯ ಸಹಾಯವಾಣಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಪುಲಕೇಶಿ ನಗರದಲ್ಲಿ 2.8 ಸೆಂ.ಮೀ. ಮಳೆ
ಪುಲಕೇಶಿನಗರ 2.8 ಸೆಂ.ಮೀ., ವಿ.ವಿ.ಪುರ 2.2, ಕೋರಮಂಗಲ 2.2, ಪೀಣ್ಯ 2.1, ಚಾಮರಾಜಪೇಟೆ 2.4, ಕಾಟನ್ಪೇಟೆ 2, ಮಹದೇವಪುರದಲ್ಲಿ 1.5, ಚುಂಚನಗುಪ್ಪೆ 1.5, ಆರ್.ಆರ್.ನಗರ 1.4, ಎಚ್ ಎಸ್ಆರ್ 1.8, ನಂದಿನಿ ಲೇಔಟ್ 1.4, ಬಸವೇಶ್ವರನಗರ 1.8, ನಾಯಂಡಹಳ್ಳಿ 1.5, ವಿದ್ಯಾಪೀಠ 1.2, ಬಿಟಿಎಂ ಲೇಔಟ್ 1.2, ಕೋಡಿಗೆಹಳ್ಳಿ 1.1 ಸೆಂ.ಮೀ ಮಳೆಯಾಗಿದೆ.
ನಗರದಲ್ಲಿ ಇನ್ನೂ 3 ದಿನ ಮಳೆ ಸಾಧ್ಯತೆ
ಪೂರ್ವ ಬಂಗಾಲ ಉಪಸಾಗರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಬೆಂಗಳೂರಿನಲ್ಲಿ ಮುಂದಿನ 3 ದಿನಗಳ ಕಾಲ ಇದೇ ಮಾದರಿಯಲ್ಲಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.