ಹೊಸದಿಲ್ಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಚಂಡ ಗೆಲುವು ಸಾಧಿಸುವ ಎಕ್ಸಿಟ್ ಪೋಲ್ ಭವಿಷ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ತಳ್ಳಿಹಾಕಿದ್ದು, ದಿವಂಗತ ಪಂಜಾಬಿ ರಾಪರ್ ಸಿಧು ಮೂಸೆವಾಲಾ ಅವರ ‘295’ ಹಾಡಿನ ಉಲ್ಲೇಖವನ್ನು ಮಾಡಿದ್ದಾರೆ.
ಪಕ್ಷದ ಸಭೆಯ ನಂತರ, ರಾಹುಲ್ ಗಾಂಧಿ ಅವರನ್ನು ಎಕ್ಸಿಟ್ ಪೋಲ್ ಸಮೀಕ್ಷೆಗಳ ಕುರಿತು ಸುದ್ದಿಗಾರರು, ಇಂಡಿಯಾ ಮೈತ್ರಿಕೂಟ ಎಷ್ಟು ಸ್ಥಾನಗಳನ್ನು ಪಡೆಯುತ್ತದೆ ಎಂದು ಪ್ರಶ್ನಿಸಿದಾಗ ಈ ಉತ್ತರ ನೀಡಿದ್ದಾರೆ.
“ಸಿಧು ಮೂಸೆವಾಲಾ ಕಾ ಸಾಂಗ್ ಸುನಾ ಹೈ ಆಪ್ನೆ?” (ನೀವು ಸಿಧು ಮೂಸೆವಾಲಾ ಅವರ ಹಾಡು ಕೇಳಿದ್ದೀರಾ?) 295″ ಎಂದಷ್ಟೇ ಪ್ರತಿಕ್ರಿಯಿಸಿದರು.
ವಯನಾಡ್ ಮತ್ತು ರಾಯ್ ಬರೇಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ರಾಹುಲ್ ಅವರು ಎಕ್ಸಿಟ್ ಪೋಲ್ ಭವಿಷ್ಯಗಳು “ಮೋದಿ ಮಾಧ್ಯಮ ಸಮೀಕ್ಷೆ” ಎಂದು ಕರೆದರು.
ಕಾಂಗ್ರೆಸ್ ನ ಹಲವು ನಾಯಕರು ಸಮೀಕ್ಷೆಗಳು ನಿಜವಾಗುವುದಿಲ್ಲ , ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.