Advertisement

ಮೋದಿ, ಮ್ಯಾಕ್ರನ್‌: ಉ.ಪ್ರ. ಸೋಲಾರ್‌ ಪವರ್‌ ಪ್ಲಾಂಟ್‌ ಉದ್ಘಾಟನೆ

12:16 PM Mar 12, 2018 | Team Udayavani |

ದದರ್‌ ಕಲಾನ್‌, ಉತ್ತರ ಪ್ರದೇಶ : ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಭೇಟಿಯಲ್ಲಿರುವ ಫ್ರೆಂಚ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರನ್‌ ಅವರು ಇಂದು ಸೋಮವಾರ ಉತ್ತರ ಪ್ರದೇಶದ ಅತೀ ದೊಡ್ಡ ಸೌರ ವಿದ್ಯುದುತ್ಪಾದನಾ ಘಟಕವನ್ನು ಮಿರ್ಜಾಪುರ ಜಿಲ್ಲೆಯ ಛಾನ್‌ವೀ ಬ್ಲಾಕ್‌ ನಲ್ಲಿ ಉದ್ಘಾಟಿಸಿದರು. 

Advertisement

ಪ್ರಧಾನಿ ಮೋದಿ, ಉ.ಪ್ರ. ರಾಜ್ಯಪಾಲ ರಾಮ ನಾಯ್‌ ಮತ್ತು ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಫ್ರೆಂಚ್‌ ಅಧ್ಯಕ್ಷ ಮತ್ತು ಅವರ ಪತ್ನಿ ಬ್ರಿಗೆಟ್‌ ಅವರನ್ನು ಏರ್‌ಸ್ಟ್ರಿಪ್‌ ನಲ್ಲಿ ಹಾರ್ದಿಕವಾಗಿ ಸ್ವಾಗತಿಸಿ ಬರಮಾಡಿಕೊಂಡರು. 

ಪ್ರಧಾನ ಮೋದಿ ಮತ್ತು ಫ್ರೆಂಚ್‌ ಅಧ್ಯಕ್ಷ ಮ್ಯಾಕ್ರನ್‌ ಅವರು ಬಟನ್‌ ಒತ್ತುವ ಮೂಲಕ ಸೋಲಾರ್‌ ಪ್ಯಾನಲ್‌ಗ‌ಳನ್ನು ಕ್ರಿಯಾಶೀಲಗೊಳಿಸಿ 75 ಮೆಗಾ ವ್ಯಾಟ್‌ ಸಾಮರ್ಥ್ಯದ ಈ ಘಟಕವನ್ನು ಲೋಕಾರ್ಪಣೆ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next