Advertisement

ಮೋದಿ ನೇತೃತ್ವದಲ್ಲಿ ಸಮರ್ಥ, ಸಶಕ್ತ ಭಾರತ ನಿರ್ಮಾಣ: ಕೋಟ ಶ್ರೀನಿವಾಸಪೂಜಾರಿ ವಿಶ್ವಾಸ

03:01 PM Feb 10, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಧ್ವನಿ ಇಲ್ಲದೇ ಇರುವ ಹಿಂದುಳಿದ ವರ್ಗದ ಜನರಿಗೆ ಶಕ್ತಿ ತುಂಬವ ಕೆಲಸ ಮಾಡಬೇಕು . ಹಿಂದುಳಿದ ವರ್ಗದವರು ಎಲ್ಲರು ಒಗ್ಗಟ್ಟಾಗಬೇಕು. ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆ ವಿರುದ್ದ ತೋಳ್ಬಲ ಮೂಲಕ ಹೋರಾಟ ಮಾಡುವ ಪ್ರಯತೃ ಮಾಡುತ್ತಿದ್ದಾರೆ. ತನ್ನ ಬೆಳೆಯನ್ನು ಮಾರಾಟ  ಮಾಡುವ ಹಕ್ಕನ್ನು ಬಿ.ಜೆ.ಪಿ ಸರ್ಕಾರ ರೈತನಿಗೆ ನೀಡಿದೆ ಎಂದು ಸಚಿವ ಕೋಟ ಶ್ರೀನಿವಾಸಪೂಜಾರಿ ತಿಳಿಸಿದ್ದಾರೆ.

Advertisement

ಮಲ್ಲೇಶ್ವರಂನ ಹವ್ಯಕ ಮಹಾಸಭಾ ಸಭಾಂಗಣದಲ್ಲಿ ನಡೆದ ಬಿಜೆಪಿ ಕರ್ನಾಟಕ ಹಿಂದುಳಿದ ವರ್ಗಗಳ ವಿಶೇಷ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾರ್ಯಕರ್ತರು ಕೃಷಿ ಮಸೂದೆ ಲಾಭಂಶವನ್ನು ಪ್ರತಿಯೊಬ್ಬ ರೈತರಿಗೆ ಮನಮುಟ್ಟುವಂತೆ ತಲುಪಿಸಬೇಕು. ಮಾಜಿ ಪ್ರಧಾನಿ ವಾಜಪೇಯಿ ಮತ್ತು ಎಲ್.ಕೆ. ಆಡ್ವಾಣಿರವರ ಕಂಡ ಕನಸು ಇಂದು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಮರ್ಥ, ಸಶಕ್ತ ಭಾರತ ನಿರ್ಮಾಣವಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗದ ಬಿ.ಜೆ.ಪಿ.ರಾಜ್ಯಾಧ್ಯಕ್ಷ  ನೆ.ಲ. ನರೇಂದ್ರಬಾಬುರವರು ಮಾತನಾಡಿ,  ಸಂಘಟನೆ ಹಾಗೂ ಸರ್ಕಾರದ ಕಾರ್ಯಕ್ರಮಗಳು  ಪ್ರತಿ ಮನೆಗೆ ತಲುಪಬೇಕು. ಪ್ರಧಾನಿ ನರೇಂದ್ರಮೋದಿಯವರ ಕಂಡ ಕನಸು ಅತ್ಮನಿರ್ಭರ ಭಾರತ ಸಾಕಾರಗೊಳಿಸಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಅಭಿವೃದ್ದಿ ಚಿಂತನೆಗಳು ನಾಡಿಗೆ ತಲುಪಬೇಕು ರಾಜ್ಯದಲ್ಲಿ ಶೇಕಡ 64ರಷ್ಟು ಹಿಂದುಳಿದ ವರ್ಗದ ಜನಸಂಖ್ಯೆ ಇದೆ. ಹಿಂದುಳಿದ ವರ್ಗದ ಸಮಾಜ ಮಂಚೂಣಿಗೆ ಬರಬೇಕು.  ಆಗ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ:  ಕೈಯಲ್ಲಿ ವಿಷದ ಬಾಟಲಿ, ಕೊರಳಲ್ಲಿ ನೇಣಿನ ಹಗ್ಗ ಹಾಕಿಕೊಂಡು ರೈತರ ಪ್ರತಿಭಟನೆ

Advertisement

ಸಚಿವರಾದ ಭೈರತಿ ಬಸವರಾಜ್ ಮಾತನಾಡಿ ಹಿಂದುಳಿದ ವರ್ಗದಲ್ಲಿ ಜನಿಸಿ, ಗ್ರಾಮ ಪಂಚಾಯಿತಿಯಿಂದ ಇಂದು ಸಚಿವನಾಗಿ ಕಾರ್ಯನಿರ್ವಹಿಸಿದ ಬಗ್ಗೆ ಹೆಮ್ಮೆಆನಿಸುತ್ತದೆ. ರಾಜ್ಯದ ಹೆಚ್ಚಿನ ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗದವರು ಇದ್ದಾರೆ. ಆಯಾ ಕ್ಷೇತ್ರದಲ್ಲಿ ಸಂಘಟನೆ ಮಾಡಿ. ಮುಂದಿನ ಬಜೆಟ್ ನಲ್ಲಿ ಹಿಂದುಳಿದ ವರ್ಗದ ಜನರ ಅಭಿವೃದ್ದಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ನಗರಾಭಿವೃದ್ದಿ ಸಚಿವರಾದ ಬಿ.ಎ.ಬಸವರಾಜ್, ಮುಜರಾಯಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸಪೂಜಾರಿ, ಹಿಂದುಳಿದ ವರ್ಗದ ಬಿ.ಜೆ.ಪಿ.ರಾಜ್ಯಾಧ್ಯಕ್ಷ ನೆ.ಲ. ನರೇಂದ್ರಬಾಬುರವರು ಮತ್ತು ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ್ ರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿ, ಭಾರತಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಕುಂಬಾರ ಕಲೆ ಮಡಿಕೆ ತಯಾರು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ:  ರಾಮನಗರದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ; ಶೀಘ್ರವೇ ನಿರ್ಮಾಣ ಕಾಮಗಾರಿ ಆರಂಭ: ಡಿಸಿಎಂ

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗದ ಮುಖಂಡರು ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎ.ಹೆಚ್.ಬಸವರಾಜ್ , ಗೋಪಿನಾಥ್ ರಾಜು , ಗೋವಿಂದರಾಜು, ಎಂ.ಸಿ. ಶ್ರೀನಿವಾಸ್ ಗೋವಿಂದನಾಯ್ದು ಉಪಸ್ಥಿತರಿದ್ದರು.

ಇದನ್ನೂ ಓದಿ:  ನಮ್ಮ ಫೇಸ್ ಬುಕ್ ಅನ್ನು ಮತ್ತೊಬ್ಬರು ಬಳಸುವುದನ್ನು ತಡೆಯುವುದು ಹೇಗೆ?

Advertisement

Udayavani is now on Telegram. Click here to join our channel and stay updated with the latest news.

Next