Advertisement

ಎನ್‌ಸಿಎಂ ಕಾರ್ಡುಗಳ ಲೋಕಾರ್ಪಣೆ

12:30 AM Mar 06, 2019 | |

ಅಹಮದಾಬಾದ್‌: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ “ಒಂದು ದೇಶ, ಒಂದು ಕಾರ್ಡ್‌’ ಪರಿಕಲ್ಪನೆಯ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳನ್ನು (ಎನ್‌ಸಿಎಂಸಿ) ಪ್ರಧಾನಿ ಮೋದಿ, ಮಂಗಳವಾರ ಬಿಡುಗಡೆ ಮಾಡಿದರು. ಅಹಮದಾಬಾದ್‌ನಲ್ಲಿ ಮೊದಲ ಹಂತದ ಮೆಟ್ರೋ ರೈಲು ಯೋಜನೆ ಉದ್ಘಾಟಿಸಿದ ಅವರು, ಅದೇ ವೇಳೆ ಕಾರ್ಡುಗಳನ್ನೂ ಬಿಡುಗಡೆಗೊಳಿಸಿದರು. 

Advertisement

ನಂತರ ಮಾತನಾಡಿದ ಅವರು, ಈ ಕಾರ್ಡುಗಳ ಬಳಕೆದಾರರು, ಎಲ್ಲಾ ರಾಜ್ಯಗಳಲ್ಲಿ ಮೆಟ್ರೋ ಸಾರಿಗೆ ಸೇರಿದಂತೆ ಆಯಾ ರಾಜ್ಯಗಳ ಸಾರಿಗೆ ಟಿಕೆಟ್‌ ಖರೀದಿ, ಟೋಲ್‌ ಅಥವಾ ಪಾರ್ಕಿಂಗ್‌ ಶುಲ್ಕ ಪಾವತಿ ಸೇರಿದಂತೆ ಯಾವುದೇ ಹಣಕಾಸಿನ ವ್ಯವಹಾರವನ್ನು ಸುಲಲಿತವಾಗಿ ನಡೆಸಬಹುದಾಗಿದ್ದು, ಎಟಿಎಂಗಳಿಂದ ಹಣವನ್ನೂ ಡ್ರಾ ಮಾಡಬಹುದು ಎಂದರು.

ಎನ್‌ಸಿಎಂ ಕಾರ್ಡುಗಳು ಡೆಬಿಟ್‌ ಅಥವಾ ಪ್ರೀ ಪೇಯ್ಡ ಮಾದರಿಯ ಕಾರ್ಡುಗಳಾಗಿದ್ದು, “ರು ಪೇ’ ಪಾವತಿ ತಂತ್ರಜ್ಞಾನ ಆಧಾರಿತವಾದ ಇವುಗಳನ್ನು ಬ್ಯಾಂಕುಗಳೇ ವಿತರಿಸುತ್ತವೆ. ಈವರೆಗೆ ಬಳಸಲಾಗುತ್ತಿದ್ದ ಡೆಬಿಟ್‌, ಕ್ರೆಡಿಟ್‌ ಮುಂತಾದ ಪಾವತಿ ಕಾರ್ಡುಗಳು ರಾಜ್ಯಗಳ ಗಡಿಯ ಮಿತಿಯನ್ನು ಹೊಂದಿದ್ದವು. ಆದರೆ, ಎನ್‌ಸಿಎಂ ಕಾರ್ಡುಗಳು ಅಂತಾರಾಜ್ಯ, ಅಂತರ ಸೇವೆಗಳ ಅನುಕೂಲ ಹೊಂದಿದ್ದು ಇದನ್ನು ಹೊಂದಿರುವ ನಾಗರಿಕರು ದೇಶದ ಎಲ್ಲೆಡೆ ಬಳಸಬಹುದಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next