Advertisement
ಬಂದರು ಸೌಲಭ್ಯಗಳನ್ನು ಆಧುನೀಕರಿಸುವುದು, ದೀರ್ಘಕಾಲದ, ಪರಿಣಾಮಕಾರಿ ಪದ್ಧತಿಗಳನ್ನು ಉತ್ತೇಜಿಸುವುದು, ಅಂತಾರಾಷ್ಟ್ರೀಯ ಸಹಯೋಗವನ್ನು ಪ್ರೋತ್ಸಾಹಿಸುವುದು ದಾಖಲೆಯ ಮುಖ್ಯಾಂಶಗಳಾಗಿವೆ. ಪ್ರಸ್ತುತ ನಡೆಯುತ್ತಿರುವ ಜಾಗತಿಕ ಕಡಲಯಾನದ ಭಾರತೀಯ ಶೃಂಗದ 3ನೇ ಆವೃತ್ತಿಯಲ್ಲಿ ಮೋದಿ ಈ ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದರು.
ಎಲ್ಲದಕ್ಕಿಂತ ಮುಖ್ಯವಾಗಿ ಪ್ರಧಾನಿ ಮೋದಿ 300 ಒಪ್ಪಂದಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ಅದರಲ್ಲಿ ಒಟ್ಟು 7.16 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳಾಗಿವೆ. ಇದರಲ್ಲಿ ಜಾಗತಿಕ ಮತ್ತು ಭಾರತೀಯ ಪಾಲುದಾರಿಕೆಯಿರುತ್ತದೆ. ಐಎಂಇಇಸಿ (ಭಾರತ-ಮಧ್ಯಪೂರ್ವ ಯೂರೋಪ್ ಆರ್ಥಿಕ ಪಥ)ಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಜಿ20 ಸಭೆಯಲ್ಲಿ ಮಹತ್ವದ ಸರ್ವಾನುಮತ ಲಭಿಸಿದೆ. ಇದು ಸಮೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದೆ. ಹಲವು ಶತಮಾನಗಳ ಹಿಂದೆ ರೇಷ್ಮೆ ಮಾರ್ಗ ಎಂದು ಕರೆಸಿಕೊಂಡಿದ್ದರ ರೀತಿಯೇ ಇದೂ ಕೆಲಸ ಮಾಡಲಿದೆ. ಐಎಂಇಇಸಿ ಜಾಗತಿಕ ಕಡಲೋದ್ಯಮವನ್ನೇ ಬದಲಿಸುವ ತಾಕತ್ತು ಹೊಂದಿದೆ.
-ಪ್ರಧಾನಿ ನರೇಂದ್ರ ಮೋದಿ
Related Articles
Advertisement