Advertisement

ದ.ಕ.ದಲ್ಲಿ ಮೋದಿ ಕಮಾಲ್‌: ನಳಿನ್‌ಗೆ ವಿಜಯ ಮಾಲೆ

08:06 PM May 23, 2019 | Team Udayavani |

ಮಹಾನಗರ: ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿಗೆ ತಲೆಬಾಗಿದ ದ.ಕ.ಜಿಲ್ಲೆಯ ಮತದಾರರು ಮತ್ತೂಮ್ಮೆ ಜಿಲ್ಲೆಯಲ್ಲಿ ತಾವರೆ ಅರಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ದಾಖಲೆಯ ಮತಗಳ ಅಂತರದ ಗೆಲ್ಲುವ ಮೂಲಕ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ.

Advertisement

ಕೇಂದ್ರದಲ್ಲಿ ಮೋದಿ ಹಾಗೂ ದ.ಕ.ದಲ್ಲಿ ನಳಿನ್‌ ಭರ್ಜರಿ ವಿಜಯದ ಸುದ್ದಿ ತಿಳಿಯುತ್ತಿದ್ದಂತೆ ನಗರ ಸಹಿತ ಎಲ್ಲೆಡೆ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ.

ಎನ್‌ಐಟಿಕೆ ಮತ ಎಣಿಕೆ ಕೇಂದ್ರದ ಸುತ್ತ ಕಾರ್ಯಕರ್ತರ ಸಂಭ್ರಮಾಚರಣೆಗೆ ಅವಕಾಶ ಇಲ್ಲದಿದ್ದರೂ ಮಂಗಳೂರಿನ ಬಿಜೆಪಿಯ ಚುನಾವಣಾ ಕಚೇರಿ, ನಗರದ ವಿವಿಧ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಶಾಸಕರಾದ ವೇದವ್ಯಾಸ ಕಾಮತ್‌, ಡಾ| ವೈ.ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಜತೆಗೆ ಸಂಭ್ರಮಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಖುಷಿಯ ಮಧ್ಯೆಯೇ ಈ ಬಾರಿ ಮತ್ತೂಮ್ಮೆ ನಳಿನ್‌ ಅಧಿಕ ಮತಗಳ ಅಂತರ ದಲ್ಲಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಇಮ್ಮಡಿಯಾಗಿತ್ತು. ಕೆಲವೆಡೆ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರೆ, ಇನ್ನೂ ಕೆಲವೆಡೆ ವಾಹನ ರ್ಯಾಲಿ ಮೂಲಕ ಕಾರ್ಯಕರ್ತರು ಸಂಭ್ರಮಿಸಿದರು. ಮತ್ತೆ ಕೆಲವೆಡೆ ಸಿಹಿತಿಂಡಿ ವಿತರಿಸುವ ಮೂಲಕ ಖುಷಿ ಹಂಚಿಕೊಂಡರು.

ಹೆಚ್ಚಿದ ಸಂಭ್ರಮ
2004ರಲ್ಲಿ ದ.ಕ. ಕ್ಷೇತ್ರದಿಂದ ಬಿಜೆಪಿಯ ಡಿ.ವಿ. ಸದಾನಂದ ಗೌಡ 3,84,760 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಎಂ. ವೀರಪ್ಪ ಮೊಲಿ (3,51,345) ಅವರನ್ನು 33,415 ಮತಗಳ ಅಂತರದಿಂದ ಸೋಲಿಸಿದ್ದರು. 2009ರಲ್ಲಿ ನಳಿನ್‌ ಕುಮಾರ್‌ ಕಟೀಲು 4,99,385 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಅವರನ್ನು (4,58,965) 40,420 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು. 2014ರ ಚುನಾವಣೆಯಲ್ಲಿ ನಳಿನ್‌ ಕುಮಾರ್‌ ಕಟೀಲು 6,42,739 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಅವರನ್ನು (499030) 1,43,704 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು. ಈ ಬಾರಿ ನಳಿನ್‌ ಅವರು ಪಡೆದ ಮತಗಳ ಅಂತರ ಈ ಎಲ್ಲದಕ್ಕಿಂತಲೂ ಅಧಿಕವಾದ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ.

ಕಾಂಗ್ರೆಸ್‌ ನಿರೀಕ್ಷೆ
ಪ್ರಾರಂಭಿಕವಾಗಿ ಕೆಲವು ಸುತ್ತುಗಳ ಮತ ಎಣಿಕೆಯ ಫಲಿತಾಂಶ ಘೋಷಣೆ ಯಾಗುತ್ತಿದ್ದಂತೆ ಬಿಜೆಪಿ-ಕಾಂಗ್ರೆಸ್‌ ಲೀಡ್‌ ಸಮಬಲದಲ್ಲಿತ್ತು. ಹೀಗಾಗಿ ಕಾಂಗ್ರೆಸ್‌ ಪಾಳಯದಲ್ಲಿ ನಿರೀಕ್ಷೆ ಮೂಡಿತ್ತು. ಮುಂದಿನ ಸುತ್ತುಗಳಲ್ಲಿ ಇದೇ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆಯೂ ಕಾಂಗ್ರೆಸ್‌ ಮುಖಂಡರು ಮಾತುಕತೆ ನಡೆಸುತ್ತಿದ್ದರು. ಆದರೆ, ಬಳಿಕ ನಡೆದ ಒಂದೊಂದು ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಲೀಡ್‌ ದೀರ್ಘ‌ ಮಟ್ಟಿಗೆ ಕಡಿಮೆಯಾಗುತ್ತ ಬಂತು. ಕೊನೆಗೆ ಇದು 2 ಲಕ್ಷ ಮತಗಳ ಅಂತರವನ್ನು ದಾಟಿತು. ಬಿಜೆಪಿ 50 ಸಾವಿರ ಮತಗಳ ಲೀಡ್‌ ದಾಖಲಿಸುತ್ತಿದ್ದಂತೆ ಫಲಿತಾಂಶ ಬಿಜೆಪಿ ಪರವಾಗಿ ಬರುವ ಬಗ್ಗೆ ಬಿಜೆಪಿ ಪಾಳಯದಲ್ಲಿ ನಿಖರತೆ ಸೃಷ್ಟಿಯಾಗಿತ್ತು.

Advertisement

2014ರ ಚುನಾವಣೆಯಲ್ಲಿ ನಳಿನ್‌ ಕುಮಾರ್‌ ಕಟೀಲು 6,42,739 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಅವರನ್ನು (499030) 1,43,704 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು. ಈ ಬಾರಿ ನಳಿನ್‌ ಅವರು ಪಡೆದ ಮತಗಳ ಅಂತರ ಈ ಎಲ್ಲದಕ್ಕಿಂತಲೂ ಅಧಿಕವಾದ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ.

ಕಾಂಗ್ರೆಸ್‌ ನಿರೀಕ್ಷೆ
ಪ್ರಾರಂಭಿಕವಾಗಿ ಕೆಲವು ಸುತ್ತುಗಳ ಮತ ಎಣಿಕೆಯ ಫಲಿತಾಂಶ ಘೋಷಣೆ ಯಾಗುತ್ತಿದ್ದಂತೆ ಬಿಜೆಪಿ-ಕಾಂಗ್ರೆಸ್‌ ಲೀಡ್‌ ಸಮಬಲದಲ್ಲಿತ್ತು. ಹೀಗಾಗಿ ಕಾಂಗ್ರೆಸ್‌ ಪಾಳಯ ದಲ್ಲಿ ನಿರೀಕ್ಷೆ ಮೂಡಿತ್ತು. ಮುಂದಿನ ಸುತ್ತುಗಳಲ್ಲಿ ಇದೇ ಅಂತರ ವನ್ನು ಕಾಯ್ದುಕೊಳ್ಳುವ ಬಗ್ಗೆಯೂ ಕಾಂಗ್ರೆಸ್‌ ಮುಖಂಡರು ಮಾತುಕತೆ ನಡೆಸುತ್ತಿದ್ದರು. ಆದರೆ, ಬಳಿಕ ನಡೆದ ಒಂದೊಂದು ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಲೀಡ್‌ ದೀರ್ಘ‌ ಮಟ್ಟಿಗೆ ಕಡಿಮೆಯಾಗುತ್ತ ಬಂತು. ಕೊನೆಗೆ ಇದು 2 ಲಕ್ಷ ಮತಗಳ ಅಂತರವನ್ನು ದಾಟಿತು. ಬಿಜೆಪಿ 50 ಸಾವಿರ ಮತಗಳ ಲೀಡ್‌ ದಾಖಲಿಸುತ್ತಿದ್ದಂತೆ ಫಲಿತಾಂಶ ಬಿಜೆಪಿ ಪರವಾಗಿ ಬರುವ ಬಗ್ಗೆ ಬಿಜೆಪಿ ಪಾಳಯದಲ್ಲಿ ನಿಖರತೆ ಸೃಷ್ಟಿಯಾಗಿತ್ತು.

ಎಣಿಕೆ ಕೇಂದ್ರಕ್ಕೆ ಬರಲೇ ಇಲ್ಲ ಮಿಥುನ್‌ ರೈ!
ಸುರತ್ಕಲ್‌ನ ಮತ ಎಣಿಕೆ ಕೇಂದ್ರಗಳಿಗೆ ಪ್ರಾರಂಭಿಕವಾಗಿ ಅಭ್ಯರ್ಥಿಗಳು ಬಂದಿರಲಿಲ್ಲ. ಪಕ್ಷಗಳ ಪರವಾಗಿ ಏಜೆಂಟರು ಮಾತ್ರ ಕೌಂಟಿಂಗ್‌ ಸೆಂಟರ್‌ನಲ್ಲಿದ್ದರು. ನಳಿನ್‌ ಕುಮಾರ್‌ ಕಟೀಲು ಹಾಗೂ ಮಿಥುನ್‌ ರೈ ಅವರು ಟಿವಿ ನೋಡುತ್ತ ಹಾಗೂ ತಮ್ಮ ಪಕ್ಷದ ಏಜೆಂಟರ ಮೂಲಕ ಫಲಿತಾಂಶದ ಮಾಹಿತಿ ಪಡೆಯುತ್ತಿದ್ದರು. ಪ್ರತೀ ಸುತ್ತಿನಲ್ಲಿಯೂ ಲೀಡ್‌ ಪಡೆಯುತ್ತಿರುವುದು ಖಚಿತವಾಗುತ್ತಿದ್ದಂತೆ ಬೆಳಗ್ಗೆ 11.50ರ ಸುಮಾರಿಗೆ ನಳಿನ್‌ ಮತ ಎಣಿಕೆ ಕೇಂದ್ರದತ್ತ ಆಗಮಿಸಿದರು. ಆದರೆ, ಮಿಥುನ್‌ ರೈ ಮತ ಎಣಿಕೆ ಕೇಂದ್ರದತ್ತ ಸುಳಿಯಲೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next