ಚೆನ್ನೈ: ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧಗಳ ಹೊಸ ಯುಗ ಚೆನ್ನೈ ವಿಷನ್ ಮೂಲಕ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ತಮಿಳುನಾಡಿನ ಕೋವಲಂನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ ಪಿಂಗ್ ಜೊತೆಗಿನ ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚೀನಾ ಮತ್ತು ತಮಿಳುನಾಡಿನ ನಡುವೆ ತುಂಬಾ ಹಳೆಯದಾದ ಸಾಂಸ್ಕೃತಿಕ ಮತ್ತು ವ್ಯಾಪಾರ ಸಂಬಂಧ ಇದೆ. ಕಳೆದ ವರ್ಷ ವುಹಾನ್ ನಲ್ಲಿ ನಡೆದ ಉಭಯ ದೇಶಗಳ ನಡುವಿನ ಮೊದಲ ಅನೌಪಚಾರಿಕ ಶೃಂಗ ಸಭೆ ನಮ್ಮ ನಡುವಿನ ಸಂಬಂಧಕ್ಕೆ ಹೊಸ ವೇಗ ನೀಡಿತ್ತು ಎಂದರು.
ಈ ವೇಳೆ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್, ನಿಮ್ಮ ಆತಿಥ್ಯ ನಮಗೆ ಬಹಳ ಸಂತೋಷ ತಂದಿದೆ. ನಾನು ಮತ್ತು ಮತ್ತು ನನ್ನ ಸಹೋದ್ಯೋಗಿಗಳಿಗೆ ಮರೆಯಲಾಗದ ಅನುಭವ ತಂದಿದೆ ಎಂದರು.
ಈ ಅನೌಪಚಾರಿಕ ಶೃಂಗಸಭೆಯನ್ನು ಆಯೋಜಿಸದ ಕಾರಣಕ್ಕಾಗಿ ಮೋದಿಯವರಿಗೆ ಧನ್ಯವಾಧ ಸಮರ್ಪಿಸಿದ ಜಿನ್ ಪಿಂಗ್, ಇಂತಹ ಅನೌಪಚಾರಿಕ ಶೃಂಗಸಭೆಗಳನ್ನು ನಡೆಸುತ್ತಿರಬೇಕು ಎಂದರು.
ಸಭೆಯಲ್ಲಿ ವಿದೇಶಾಂಗ ಸಚಿವ ಡಾ. ಜೈಶಂಕರ್, ಅಜಿತ್ ದೋವಲ್ ಮುಂತಾದ ಅಧಿಕಾರಿಗಳು ಭಾಗವಹಿಸಿದ್ದರು.