Advertisement

ದೇಶದ ಪ್ರಭಾವಿ ನಾಯಕರಲ್ಲಿ ಮೋದಿಯೇ ನಂ.1

07:00 AM Mar 31, 2018 | Team Udayavani |

ಭಾರತದಲ್ಲಿ ಯಾರು ಪವರ್‌ಫ‌ುಲ್‌ ನಾಯಕ? ಹೀಗೊಂದು ಪ್ರಶ್ನೆ ಎದುರಾದಾಗ ಸಾಮಾನ್ಯವಾಗಿ ಮೊದಲು ಬರುವ ಹೆಸರುಗಳೇ ರಾಜಕಾರಣಿಗಳದ್ದು. ಬಳಿಕ ಉದ್ಯಮಿಗಳು ಮತ್ತು ಬೇರೆ ಕ್ಷೇತ್ರದಲ್ಲಿರುವವರ ಹೆಸರುಗಳು ಕೇಳಿಬರುತ್ತವೆ. 2019ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ಪ್ರಭಾವಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಆನ್‌ಲೈನ್‌ನಲ್ಲಿ ನಡೆಸಲಾದ ಸರ್ವೆಯನ್ನಾಧರಿಸಿ 2017-18ರ ಪಟ್ಟಿ ಸಿದ್ಧಗೊಂಡಿದೆ.

Advertisement

ಮೋದಿ ಈಗಲೂ ಟಾಪ್‌-1
2019ರ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿಯಲ್ಲಿರುವ ಪ್ರಧಾನಿ ಮೋದಿ ಈಗಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಉಳಿದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಈ ಪಟ್ಟಿಯ 2ನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರು ನಾಯಕರ ಮುಂದಾಳತ್ವದ ಬಿಜೆಪಿ ಈಗಾಗಲೇ ಉತ್ತರದ ಬಹುತೇಕ ರಾಜ್ಯಗಳನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುವುದರ ಜತೆಗೆ ಪ್ರಭಾವ ಬೀರಿರುವುದು ಗಮನಾರ್ಹ. ಈಗ ಮತ್ತೂಂದು ಅಗ್ನಿಪರೀಕ್ಷೆ ಎದುರಿಸಲಿರುವ ಭಲೇ ಜೋಡಿಗೆ 5ನೇ ಸ್ಥಾನದಲ್ಲಿರುವ ಸೋನಿಯಾ ಗಾಂಧಿ, 6ನೇ ಸ್ಥಾನದಲ್ಲಿರುವ ಮಮತಾ ಬ್ಯಾನರ್ಜಿ ಸೇರಿದಂತೆ ಟಾಪ್‌ 10ನಲ್ಲಿರುವ ರಾಜಕೀಯದ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದಾರೆ.

ಟಾಪ್‌ 5ನಲ್ಲಿ ಯಾರ್ಯಾರು? ಯಾಕೆ?
1. ನರೇಂದ್ರ ಮೋದಿ, ಪ್ರಧಾನಿ
ಯಾಕೆ?: ಈಗಲೂ ಆಡಳಿತ ಪಕ್ಷ ಬಿಜೆಪಿಯ ಅಂತಿಮ ನಿರ್ಣಾಯಕ ಸ್ಥಾನದಲ್ಲಿ ರುವ ನಾಯಕ. ಅನೇಕ ಚುನಾವಣೆಗಳಲ್ಲಿ ತಮ್ಮದೇ ಅಲೆಯಿಂದ ಗೆಲುವಿಗೆ ಕಾರಣವಾದವರು. ಏಷ್ಯನ್‌ ರಾಷ್ಟ್ರಗಳ ಜತೆಗಿನ ಉತ್ತಮ ಸಂಬಂಧ ಸೇರಿ ವಿಶ್ವದ ಗಮನ ಸೆಳೆದಿದ್ದಾರೆ. ಅನೇಕ ಬದಲಾವಣೆಗೆ ಕಾರಣೀಕರ್ತ ಎಂಬ ಹೆಗ್ಗಳಿಕೆ

2. ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ
ಯಾಕೆ?: ದೇಶದಲ್ಲಿ ಬಿಜೆಪಿಯ ಏಳ್ಗೆಗೆ ಕಾರಣೀಕರ್ತರಾದ ಪ್ರಮುಖರ ಪೈಕಿ ಒಬ್ಬರು. ಅವರದೇ ಅಧ್ಯಕ್ಷತೆಯಲ್ಲಿ  ತ್ರಿಪುರ, ಉತ್ತರ ಪ್ರದೇಶದಲ್ಲಿ ಪಕ್ಷ ಭಾರೀ ಗೆಲುವು ಕಂಡಿದೆ. ಪಕ್ಷದಲ್ಲಿನ ಆಂತರಿಕ ಭಿನ್ನಮತದ ನಡುವೆಯೂ ಒಗ್ಗಟ್ಟಿನಲ್ಲಿ ಸಾಗುವಂತೆ ಮಾಡಿದ್ದಾರೆ. ಈಗ ಕರ್ನಾಟಕ ಅಸೆಂಬ್ಲಿ ಚುನಾವಣೆ ಅಗ್ನಿಪರೀಕ್ಷೆ.

3. ದೀಪಕ್‌ ಮಿಶ್ರಾ, ಸಿಜೆ ಐ
ಯಾಕೆ?: ದೇಶದ ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥರು. ನ್ಯಾಯಮೂರ್ತಿ ಗಳಿಂದಲೇ ತಮ್ಮ ವಿರುದ್ಧ ಆರೋಪಗಳು ಕೇಳಿಬಂದರೂ ಅದನ್ನು ಸುಲಲಿತವಾಗಿ ಎದುರಿಸಿದ್ದಾರೆ. ಅನೇಕ ಮಹತ್ವದ ಪ್ರಕರಣಗಳನ್ನು ವಿಚಾರಣೆ ನಡೆಸಿದ ನ್ಯಾಯಪೀಠದ ನೇತೃತ್ವ ವಹಿಸಿ ತೀರ್ಪು ನೀಡಿರುವ ಹೆಗ್ಗಳಿಕೆ ಇವರದು.

Advertisement

4. ಮೋಹನ್‌ ಭಾಗÌತ್‌, ಆರೆಸ್ಸೆಸ್‌ ಮುಖ್ಯಸ್ಥ
ಯಾಕೆ?: ಬಿಜೆಪಿಯ ಅನೇಕ ಬೆಳವಣಿಗೆಗಳ ಹಿಂದಿನ ಪ್ರಭಾವಿ ನಾಯಕ ಎನ್ನುವ ಮಾತಿದೆ. ಅಷ್ಟೇ ಅಲ್ಲ, ಕೇಂದ್ರ ಸರಕಾರದ ಅನೇಕ ನಿರ್ಧಾರಗಳ ಹಿಂದೆಯೂ ಭಾಗÌತ್‌ ಸಲಹೆ ಇದೆ ಎನ್ನಲಾಗುತ್ತದೆ. ಕೇಂದ್ರ  ಸಂಪುಟದಲ್ಲಿ ಭಾಗÌತ್‌ ಅವರ ಬೆಂಬಲದಿಂದ ಸಚಿವರಾಗಿರುವವರ ಸಂಖ್ಯೆ ಹೆಚ್ಚಿದೆ. 

5. ಸೋನಿಯಾ ಗಾಂಧಿ, ಯುಪಿಎ ಅಧ್ಯಕ್ಷೆ 
ಯಾಕೆ?: ಗಾಂಧಿ ಮನೆತನದ ಹಿರಿಯ ನಾಯಕಿ. ಯುಪಿಎ ಮುಂದಾಳತ್ವ ವಹಿಸಿಕೊಂಡು ಅನೇಕ ವರ್ಷಗಳ ಕಾಲ ಮನ್ನಡೆಸಿದ ಅನುಭವಿ ರಾಜಕಾರಣಿ. 19 ವರ್ಷ ಕಾಂಗ್ರೆಸ್‌ನ ಪ್ರಬಲ ನಾಯಕಿಯಾಗಿದ್ದವರು. ಸಾಕಷ್ಟು ಏಳು- ಬೀಳುಗಳನ್ನು ನೋಡಿದವರು. 2019ನೇ ಲೋಕಸಭಾ ಚುನಾವಣೆ ಅಗ್ನಿಪರೀಕ್ಷೆ.

6. ಮಮತಾ ಬ್ಯಾನರ್ಜಿ, ಪಶ್ವಿ‌ಮ ಬಂಗಾಲ ಸಿಎಂ
7. ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ
8. ಅರುಣ್‌ ಜೇಟ್ಲಿ, ಕೇಂದ್ರ ವಿತ್ತ ಸಚಿವ
9. ಯೋಗಿ ಆದಿತ್ಯನಾಥ್‌, ಉತ್ತರಪ್ರದೇಶ ಸಿಎಂ
10. ಮುಖೇಶ್‌ ಅಂಬಾನಿ, ಉದ್ಯಮಿ

ಟಾಪ್‌ 10ರಲ್ಲೂ ರಾಹುಲ್‌ಗಿಲ್ಲ ಸ್ಥಾನ
ಎಐಸಿಸಿ ರಾಷ್ಟಾóಧ್ಯಕ್ಷ ರಾಹುಲ್‌ ಗಾಂಧಿ 100 ಮಂದಿ ಪ್ರಭಾವಿಗಳ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮೊದಲ ಐದು ಸ್ಥಾನದಲ್ಲಿ ಇವರೆಲ್ಲಾ ಇದ್ದಾರೆ.

ಟಾಪ್‌ 100ನಲ್ಲಿ ಸಿದ್ದರಾಮಯ್ಯ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಹಾಗೂ ರಾಜ್ಯದ ಇನ್ನಷ್ಟು ಸಚಿವರು, ಉದ್ಯಮಿಗಳು 100 ಮಂದಿ ಪ್ರಭಾವಿಗಳ ಪಟ್ಟಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next