ರಾಣಿಬೆನ್ನೂರ: ವಿಶ್ವ ಕಂಡ ಶ್ರೇಷ್ಠ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹ ಒಬ್ಬರು. ವಿಶ್ವದೆಲ್ಲೆಡೆ ಈ ದೇಶವನ್ನು ಗುರುತಿಸಿವಂತೆ ಮಾಡಿರುವ ಮೋದಿ ಅವರಿಗೆ ದೇಶದ ಪ್ರಗತಿಯೇ ಮುಖ್ಯವಾಗಿದೆ. ಇಂತಹ ಮಹಾನ್ ನಾಯಕನ್ನು ಮತ್ತೂಮ್ಮೆ ಈ ದೇಶದ ಪ್ರಧಾನಿಯಾಗಿಸುವಲ್ಲಿ ಸರ್ವರ ಪಾತ್ರ ಮುಖ್ಯವಾಗಿದೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.
ಶನಿವಾರ ತಾಲೂಕಿನ ನೂಕಾಪುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು,
ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವ ಮೂಲಕ ಮೋದಿಯವರನ್ನು ಮತ್ತೂಮ್ಮೆ ಈ ದೇಶದ ಪ್ರಧಾನಿಯನ್ನಾಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಶಿವರಾಜ್ ಸಜ್ಜನರ, ಮಾಲತೇಶ ಜಾಧವ, ವಿಶ್ವನಾಥ ಪಾಟೀಲ, ಮಂಜುನಾಥ ಓಲೇಕಾರ, ಗುರುರಾಜ ತಿಳವಳ್ಳಿ,
ಮಂಜುನಾಥಗೌಡ ಶಿವಣ್ಣನವರ, ಶಿವಪ್ಪ ಕುರವತ್ತಿ, ರಮೇಶ ನಾಯಕ, ನೀಲಪ್ಪ ದೇವರಗುಡ್ಡ ಸೇರಿದಂತೆ ಮತ್ತಿತರರು
ಇದ್ದರು. ನಂತರ ಯಲ್ಲಾಪೂರ, ಚಿಕ್ಕಕುರವತ್ತಿ, ಗಂಗಾಪೂರ ಮತ್ತಿತರ ಗ್ರಾಮಗಳಲ್ಲಿ ಮತಯಾಚಿಸಿದರು.