ಆಲೂರು: ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾವುದು ಖಚಿತ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಕದಾಳು ಗ್ರಾಮದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ.ಮಂಜು ಪರ ಚುನಾವಣಾ ಪ್ರಚಾರ ನಡೆಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಹಾಸನ ಸೇರಿದಂತೆ ದೇಶದಲ್ಲಿ ಬಿಜೆಪಿ ಬಹುಮತದಿಂದ ಜಯಭೇರಿ
ಬಾರಿಸುವುದು ಖಚಿತ ಎಂದರು.
ದೇಶಭಕ್ತಿಯ ಆಂದೋಲನ: ಎಲ್ಲಿ ರಾಷ್ಟ್ರಭಕ್ತಿ ಜಾಗೃತವಾಗುತ್ತದೋ ಅಲ್ಲಿ ಹಣ, ಜಾತಿ, ಧರ್ಮ, ಪ್ರಾದೇಶಿಕತೆ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಈ ನಿಟ್ಟಿಲ್ಲಿ ದೇಶಾದ್ಯಂತ ದೇಶಭಕ್ತಿಯ ಆಂದೋಲನ ನಡೆಯುತ್ತಿದೆ ಹಾಗಾಗಿ ಹಾಸನ ಕ್ಷೇತ್ರವು ಸೇರಿದಂತೆ ಇಡೀ ರಾಷ್ಟ್ರದಲ್ಲಿ ಬಿಜೆಪಿ ಬಹುಮತದಿಂದ ಜಯಭೇರಿ ಬಾರಿಸುವುದು ನಿಶ್ಚಿತ ಎಂದರು.
ಪ್ರಾಮಾಣಿಕತೆ, ಭಷ್ಟಾಚಾರದ ಸಮರ: ಈ ಬಾರಿಯ ಲೋಕಸಭಾ ಚುನಾವಣೆ ಪ್ರಾಮಾಣಿಕತೆ ಹಾಗೂ ಭ್ರಷ್ಟಾಚಾರದ ನಡುವಿನ ಚುನಾವಣೆ ಯಾಗಿದ್ದು, ಪ್ರಾಮಾಣಿಕತೆಯ ಕಡೆ ದೇಶದಲ್ಲಿ 5 ವರ್ಷ ಆಡಳಿಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರು ಇದ್ದಾರೆ. ಭ್ರಷ್ಟಾಚಾರದ ಕಡೆ ಅಪವಿತ್ರ ಮೈತ್ರಿ ಸರ್ಕಾರದ ರಾಜಕಾರಣಿಗಳು ಇದ್ದಾರೆ. ಆದರೆ ಪ್ರಧಾನಿ ಮೋದಿ ಅವರ 5 ವರ್ಷಗಳ ಆಡಳಿದ ಅವಧಿಯಲ್ಲಿ ಮನುಷ್ಯನ ಕನಿಷ್ಠ ಅವಶ್ಯಕತೆಗಳಿಗೆ ಆದ್ಯತೆ ಕೊಟ್ಟಿದೆ. ಬ್ಯಾಂಕ್ ಖಾತೆಯನ್ನು ಹೊಂದಿಲ್ಲದವರಿಗೆ ಜನಧನ್ ಯೋಜನೆಯ ಮೂಲಕ ಖಾತೆಯನ್ನು ತೆರೆದು ಹಣವನ್ನು ನೀಡಲಾಗಿದೆ. ಪ್ರತಿಯೊಬ್ಬರಿಗೂ ಶೌಚಾಲಯ. ಎಲ್‌ಪಿಜಿ ಸೌಲಭ್ಯವಿಲ್ಲದವರಿಗೆ ಅನಿಲ ಭಾಗ್ಯಯೋಜನೆಯಡಿ ಗ್ಯಾಸ್ ವಿತರಣೆ ಮಾಡಲಾಗಿದೆ. ಬಡವರು 5 ಲಕ್ಷದ ವರೆಗೂ ಆರೋಗ್ಯ ಚಿಕಿತ್ಸೆಯನ್ನು ಪಡೆಯಲು ಆಯುಷ್ಮಾನ್ ಕಾರ್ಡ್ ನೀಡಿದೆ. ವಸತಿ ವಂಚಿತ ಫಲಾನುಭವಿಗಳಿಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟಿಕೊಡುವ ಕೆಲಸವನ್ನು ಮಾಡುತ್ತ ಭ್ರಷ್ಟಾಚಾರವಿಲ್ಲದ ಕಳಂಕ ರಹಿತ ಆಡಳಿತವನ್ನು ನಡೆಸಿ ಜನಮನ್ನಣೆಗೆ ಪಾತ್ರವಾಗಿದೆ ಎಂದರು.
ದೇಶದ ಸೇವೆ, ಪಕ್ಷದ ಸಂಘಟನೆಗಾಗಿ ಹಗಲಿರುಳೂ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತೂಮ್ಮೆ ಈ ದೇಶದ ಪ್ರಧಾನಿಯಾನ್ನಾಗಿಸುವುದು ಪ್ರತಿಯೊಬ್ಬ ಮತದಾರರ ಹಾಗೂ ಪಕ್ಷದ ಕಾರ್ಯಕರ್ತರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪೂರ್ಣೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಲೋಕೇಶ್ ಕದಾಳು, ಪ್ರಧಾನ ಕಾರ್ಯದರ್ಶಿ ಧರ್ಮರಾಜು, ಹೇಮಂತ್, ಹಿರಿಯ ಮುಖಂಡರಾದ ರೇಣುಕುಮಾರ್, ಪಕ್ಷದ ಕಾರ್ಯಕರ್ತರು ಮುಖಂಡರು ಹಾಜರಿದ್ದರು.