Advertisement

YouTube: ಮೋದಿ ನಂ.1- ಖಾತೆಯಲ್ಲಿ 2 ಕೋಟಿ ದಾಟಿದ ಚಂದಾದಾರರು

10:16 PM Dec 26, 2023 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಾಲತಾಣ ವೇದಿಕೆಗಳಲ್ಲಿ ಅಪಾರ ಅನುಯಾಯಿಗಳಿರುವುದು ಗೊತ್ತಿರುವ ವಿಚಾರ. ಇದೀಗ ಮೋದಿ ಅವರ ವೈಯಕ್ತಿಕ ಯೂಟ್ಯೂಬ್‌ ಖಾತೆಯಲ್ಲೂ ಚಂದಾದಾರರ ಸಂಖ್ಯೆ 2 ಕೋಟಿಯ ಗಡಿ ದಾಟಿದೆ. ಈ ಮೂಲಕ ಯೂಟ್ಯೂಬ್‌ನಲ್ಲಿ ಇಷ್ಟೊಂದು ಚಂದಾದಾರರನ್ನು ಹೊಂದಿರುವ ಏಕೈಕ ಜಾಗತಿಕ ನಾಯಕನೆಂಬ ಗರಿಯೂ ಅವರ ಮುಡಿಗೇರಿದೆ.

Advertisement

ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್‌ ಬೋಲ್ಸೆನಾರೋ 64 ಲಕ್ಷ ಚಂದಾದಾರರನ್ನು ಹೊಂದಿ 2ನೇ, ಅಮೆರಿಕ ಅಧ್ಯಕ್ಷ ಜೋ ಬೈಡನ್‌ 7.89 ಲಕ್ಷ ಚಂದಾದಾರರನ್ನು ಹೊಂದಿ 3ನೇ ಸ್ಥಾನದಲ್ಲಿದ್ದಾರೆ. ಟರ್ಕಿ ಅದ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೋಗನ್‌ಗೆ 3.16 ಲಕ್ಷ ಚಂದಾದಾರಿದ್ದಾರೆ. ಇನ್ನು ಭಾರತದ ರಾಜಕಾರಣಿಗಳ ಪೈಕಿಯೂ ಮೋದಿಯೇ ಅಗ್ರಸ್ಥಾನದಲ್ಲಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 35 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next