Advertisement

ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿರುವ ಮೋದಿ

12:39 AM Apr 03, 2019 | Lakshmi GovindaRaju |

ಚನ್ನರಾಯಪಟ್ಟಣ: ಕಾಂಗ್ರೆಸ್‌ ವರಿಷ್ಠ ರಾಹುಲ್‌ಗಾಂಧಿ ಕೇರಳ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಆಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವುದಕ್ಕೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಅಸ್ತ್ರ ಉಪಯೋಗಿಸುವ ಮೂಲಕ ಭಾರತವನ್ನು ಹಿಂದೂರಾಷ್ಟ್ರ ಮಾಡುವ ಬಗ್ಗೆ ಪ್ರಧಾನಿ ಮೋದಿ ಸುಳಿವು ನೀಡಿದ್ದಾರೆ ಎಂದು ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡ ವಾಗ್ಧಾಳಿ ನಡೆಸಿದರು.

Advertisement

ತಾಲೂಕಿನ ದಂಡಿಗನಹಳ್ಳಿ ಹೋಬಳಿ ಯಲಿಯೂರು ದೇವೀರಮ್ಮ ದೇವಿಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇವೇಗೌಡರು ಏಕಾಂಗಿಯಾಗಿ ಆಗಮಿಸಿ ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಏಕಪಕ್ಷೀಯ ನಿರ್ಧಾರಕ್ಕೆ ಖಂಡನೆ: ದೇಶಕ್ಕೆ ಭಾರತ ಎಂದು ನಾಮಕರಣ ಮಾಡುವಾಗ ರಾಜರು ಮತ್ತು ಎಲ್ಲಾ ವರ್ಗದ ಜನರ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಆದರೆ ಇವರು ಏಕಪಕ್ಷೀಯವಾಗಿ ಹಿಂದೂರಾಷ್ಟ್ರ ಮಾಡಲು ಹೊರಟಿರುವುದು ಖಂಡನೀಯವೆಂದರು.

ಮೋದಿ ವಿರುದ್ಧ ಕಿಡಿ: ನಮ್ಮದು ಮುಸ್ಲಿಂ ಕುಟುಂಬವಲ್ಲ, ನಾನೇನು ಮುಸ್ಲಿಂ ಅಲ್ಲ ನಾನೂ ಕೂಡ ಹಿಂದೂ ನಮ್ಮದು ಹಿಂದೂ ಕುಟುಂಬ. ಆದರೆ ದೇಶದಲ್ಲಿನ ಬಿಜೆಪಿ ಪಕ್ಷದ ನಾಯಕರು ಮಾತ್ರ ಹಿಂದುಳಿದ ಪಕ್ಷದವರು ಹಿಂದೂಗಳಲ್ಲ ಎಂದು ದೇಶದಲ್ಲಿ ಬಿಂಬಿಸುತ್ತಿದ್ದಾರೆ ಎಂದು ಮೋದಿ ಹೆಸರು ಹೇಳಿದರು ಪರೋಕ್ಷವಾಗಿ ಕುಟುಕಿದರು.

ವಿಶೇಷ ಸ್ಥಾನ ರದ್ದು ಅಗತ್ಯವಿಲ್ಲ: ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನ ಮಾನ ರದ್ದು ಮಾಡಿದರೆ ಪ್ರತ್ಯೇಕ ಪ್ರಧಾನಿ ಮಾಡಬೇಕಾಗುತ್ತದೆ ಎಂದು ಮುಸ್ಲಿಂ ಮುಖಂಡ ಓಮರ್‌ ಅಬ್ದುಲ್ಲಾ ಹೇಳಿಕೆ ತರವಲ್ಲ. ಭಾರತ ಒಂದೇ ದೇಶವಾಗಿ ಇರಬೇಕು, ಒಂದು ದೇಶದಲ್ಲಿ ಇಬ್ಬರು ಪ್ರಧಾನಿಗಳು ಆಡಳಿತ ಮಾಡಲು ಸಾಧ್ಯವಿಲ್ಲ, ಆದರೆ ಮೋದಿಯ ಹಿಂದೂರಾಷ್ಟ್ರ ಪರಿಕಲ್ಪನೆ ಮತ್ತು ಓಮರ್‌ನ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಹೇಳಿಕೆಯಿಂದ ದೇಶ ಇಬ್ಭಾಗ ಮಾಡುವ ಲಕ್ಷಣಗಳು ಕಾಣುತ್ತಿವೆ ಎಂದರು.

Advertisement

ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿ: ಜಮ್ಮು ಕಾಶ್ಮೀರದಲ್ಲಿ ಮುಸ್ಲಿಂ, ಕ್ರಿಶ್ಚಿಯನ್‌, ಪಂಡಿತರು ಸೇರಿದಂತೆ ಎಲ್ಲಾ ವರ್ಗದವರು ಶಾಂತಿಯಿಂದ ಬದುಕುವಂತೆ ಮಾಡಬೇಕು ಹೊರತು ರಾಜ್ಯಕ್ಕೆ ಪ್ರತ್ಯೇಕ ಪ್ರಧಾನಿ ಮಾಡುವುದರಲ್ಲಿ ಅರ್ಥವಿಲ್ಲ. ನಾನು ದೇಶದ ಪ್ರಧಾನಿಯಾಗಿದ್ದಾಗ ಎಲ್ಲಾ ವರ್ಗದ ಜನರು ಸಹಬಾಳ್ವೆಯಿಂದ ಇದ್ದರು ಅವರನ್ನು ನೆಮ್ಮದಿಯಿಂದ ಬದುಕುವಂತೆ ಆಡಳಿತ ನೀಡಿದ್ದೆ ಆದರೆ ಇಂದು ರಾಜಕೀಯ ಮೇಲಾಟಕ್ಕೆ ಜನರ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದರು.

ಜಮ್ಮು ಕಾಶ್ಮೀರಕ್ಕೆ ನೀಡಿರುವ 370ನೇ ಸಂವಿದಾನ ವಿಧಿಯನ್ನು ತೆಗೆಯುವುದಕ್ಕೆ ಅಭ್ಯಂತರವಿಲ್ಲ, ದೇಶದ 130 ಕೋಟಿ ಜನರ ಒಪ್ಪಿಗೆ ಪಡೆದು ರದ್ದು ಮಾಡಬೇಕು ಹೊರತು ಆಡಳಿತ ಪಕ್ಷ ಮಾತ್ರ ಇದಕ್ಕೆ ಮುಂದಾಗಬಾರದು. ಈ ವಿಶೇಷ ಸ್ಥಾನವನ್ನು ಸ್ವತಂತ್ರ್ಯದ ವೇಳೆ ನೀಡಲಾಗಿದೆ.

ಇದನ್ನು ಎಲ್ಲಾ ಆಡಳಿತ ಪಕ್ಷಗಳು ಮುಂದು ವರೆಸಿಕೊಂಡು ಬಂದಿವೆ. ಈಗ ಬದಲಾವಣೆ ಬೇಕೆಂದು ಏಕೆ ಅನಿಸುತ್ತಿದೆ? ಇದನ್ನು ನಾನು ಒಪ್ಪುವುದಿಲ್ಲ ಎಂದರು. ರಾಜ್ಯದ 28 ಕ್ಷೇತ್ರಗಳಲ್ಲಿ ಪ್ರಚಾರ ಮಾಡುವ ಮೂಲಕ ಮೈತ್ರಿ ಅಭ್ಯರ್ಥಿಗಳ ಅಭೂತ ಪೂರ್ವ ಗೆಲುವಿಗೆ ಸಾಕ್ಷಿಯಾಗಲಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next