Advertisement
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ, ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಖನಿಜ ನಿಧಿ ಶಿಷ್ಯವೇತನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಶಾಸಕ ಭೀಮಾನಾಯ್ಕ ಮಾತನಾಡಿ, ಕಳೆದ 35 ವರ್ಷಗಳ ರೈತರ ಕನಸಾದ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ತುಂಬಿಸುವ ಯೋಜನೆಯನ್ನು ಸಾಕಾರಗೊಳಿಸಲಾಗಿದೆ. ಈ ಹಿಂದಿನ ಅವಧಿಯಲ್ಲಿ ಕೇವಲ ಪೊಳ್ಳು ಭರವಸೆಗಳಲ್ಲಿ ಕಾಲಾರಹಣ ಮಾಡಿದ ಮಾಜಿ ಶಾಸಕ ನೇಮರಾಜನಾಯ್ಕ ಈ ಹಿಂದೆ ರಾಜಕೀಯ ಇಚ್ಛಾಶಕ್ತಿ ತೋರದೆ ಜಲಾಶಯ ಕುರಿತಂತೆ ಸುಳ್ಳು ಹೇಳಿಕೆ ನೀಡುತ್ತಿರುವುದು ದುರಂತದ ಸಂಗತಿ ಎಂದರು.
ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ ಮಾತನಾಡಿದರು. ಪುರಸಭೆ ಅಧ್ಯಕ್ಷ ಟಿ. ರಾಘವೇಂದ್ರ, ತಾಪಂ ಅಧ್ಯಕ್ಷೆ ಕೆ. ನಾಗಮ್ಮ, ಉಪಾಧ್ಯಕ್ಷೆ ಸುಶೀಲಮ್ಮ ಮಂಜುನಾಥ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬುವಲಿ, ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ, ಪುರಸಭೆ ಸದಸ್ಯರಾದ ಕನಕಪ್ಪ, ಗುಂಡ್ರು ಹನುಮಂತ, ಜೋಗಿ ಹನುಮಂತ, ಭರತ್, ಬಾಲಕೃಷ್ಣ ಬಾಬು, ನೆಲ್ಲುಗುಡಿ ಗಣೇಶ, ರೋಗಾಣಿ ಪ್ರಕಾಶ್, ಇದೇ ವೇಳೆ ತಾಲೂಕಿನ 2 ಸಾವಿರಕ್ಕೂ ಹೆಚ್ಚು ವಿವಿಧ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿ ಕಾರಿ ಶೇಖರಪ್ಪ ಹೊರಪೇಟೆ, ಪರಮೇಶ್ವರಯ್ಯ ಸೊಪ್ಪಿಮಠ ನಿರೂಪಿಸಿದರು.
ಕಾಂಗ್ರೆಸ್‌ನಿಂದ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ 4500 ಕೋಟಿ ರೂ. ಕಂಪ್ಲಿ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ 4500 ಕೋಟಿ ರೂ. ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು. ಪಟ್ಟಣದ ಪುರಸಭೆ ನೀರು ಶುದ್ಧೀಕರಣ ಘಟಕ ಆವರಣದಲ್ಲಿ 9ಪಟ್ಟಣಗಳ ಕುಡಿಯುವ ನೀರಿನ ಯೋಜನಡಿಯಲ್ಲಿ ಕಂಪ್ಲಿ ಪುರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಅನುಷ್ಠಾನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನೂತನ ತಾಲೂಕು ಕೇಂದ್ರವನ್ನಾಗಿ ಅನುಷ್ಠಾನಕ್ಕೆ ತಂದಿದ್ದು, ಕಂಪ್ಲಿ ಪಟ್ಟಣಕ್ಕೆ 2223.96 ಲಕ್ಷ ರೂ. ಗಳ ಕುಡಿವ ನೀರು ಪೂರೈಕೆ ಮಾಡುವ ಮಹತ್ವದ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಕಾರ್ಯಕ್ರಮಗಳನ್ನು ಅರಿತು ಕಾಂಗ್ರೆಸ್‌ನ್ನು ಮತ್ತೆ ಅಧಿ ಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು. ಸೋಮಪ್ಪ ಕೆರೆ ಆಧುನೀಕರಣ ಸೇರಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಂಪ್ಲಿ ಪಟ್ಟಣಕ್ಕೆ ಕಾಂಗ್ರೆಸ್ ಸರ್ಕಾರ ನೀಡಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕ್ರಿಯಾಶೀಲತೆಯಿಂದ ನಗರೋತ್ಥಾನ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಂಗ್ರೆಸ್ ಐದು ವರ್ಷಗಳ ಆಡಳಿತ ಅವಧಿಯಲ್ಲಿ ರಾಜ್ಯದ ಜನತೆಗೆ ಹತ್ತು ಹಲವು ಭಾಗ್ಯಾದಿ ಯೋಜನೆಗಳನ್ನು ನೀಡಿದೆ ಎಂದರು. ಹೈದ್ರಾಬಾದ್ ಕರ್ನಾಟಕದ ಜನತೆ ಬಿಜೆಪಿಗೆ ಮತ ಹಾಕಬಾರದು ಯಾಕೆಂದರೆ ಈ ಭಾಗವನ್ನು ಕೇಂದ್ರ ಸರ್ಕಾರ ಸಂಫೂರ್ಣವಾಗಿ ನಿರ್ಲಕ್ಷಿಸಿದ್ದು, ಹೈದರಾಬಾದ್ ಕರ್ನಾಟಕ್ಕೆ ಸಂವಿಧಾನದ 371ಜೆ ಸೌಲಭ್ಯಗಳನ್ನು ನೀಡುವಲ್ಲಿ ವಿಫಲವಾಗಿತ್ತು. ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲವೆಂದು ಅಂದಿನ ಉಪಪ್ರಧಾನಿ ಲಾಲ್‌ಕೃಷ್ಣ ಅಡ್ವಾಣಿಯವರು ರಾಜ್ಯದ ಮನವಿಯನ್ನು ತಿರಸ್ಕರಿಸಿದ್ದರು. ಆದರೆ ಯುಪಿಎ ಸರ್ಕಾರ ಈ ಭಾಗಕ್ಕೆ 371ನೇ ಜೆ ಸೌಲಭ್ಯ ನೀಡುವ ಮೂಲಕ ಜನತೆಯ ಆಶೋತ್ತರಗಳನ್ನು ಈಡೇರಿಸಿದೆ ಎಂದು ಹೇಳಿದರು. ಜನರು ಸಿದ್ದರಾಮಯ್ಯನವರ ಕಾರ್ಯಕ್ರಮಗಳ ಕುರಿತು ಅರಿತುಕೊಳ್ಳಬೇಕು. ರಾಜ್ಯದ ಅಭಿವೃದ್ಧಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು. ಪುರಸಭೆ ಅಧ್ಯಕ್ಷ ಎಂ.ಸುಧೀರ್, ಜಿಲ್ಲಾಧಿಕಾರಿ ಡಾ| ರಾಮಪ್ರಸಾತ್ ಮನೋಹರ, ತಹಶೀಲ್ದಾರ್ ಬಿ. ರವೀಂದ್ರಕುಮಾರ್, ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮೀ , ಜಿಪಂ ಸದಸ್ಯ ಕೆ. ಶ್ರೀನಿವಾಸರಾವ್, ಪುರಸಭೆ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಿ.ಆರ್. ಹನುಮಂತ, ಎಸ್. ಸುರೇಶ್, ಭಟ್ಟ ಪ್ರಸಾದ್, ಮರೆಣ್ಣ, ಸರಸ್ವತಮ್ಮ, ಕೆ.ಎಸ್. ರಾಜಸಾಬ್, ಲಡ್ಡು ಹೊನ್ನೂರವಲಿ, ಎ. ರೇಣುಕಪ್ಪ, ಮುಖಂಡರಾದ ಇಟ್ಗಿ ಬಸವರಾಜಗೌಡ, ಕೆ.ಎಂ. ಹಾಲಪ್ಪ,ಕೆ.ಎಸ್.ಎಲ್ ಸ್ವಾಮಿ, ಜೆ.ಎನ್. ಗಣೇಶ್, ಬಿ. ನಾರಾಯಣಪ್ಪ, ಭರತ ಮಾ. ಮಗದೂರ, ರಾಜು ನಾಯಕ, ಮಾಜಿ ಶಾಸಕರ ಟಿ.ಎಂ. ಚಂದ್ರಶೇಖರಯ್ಯಸ್ವಾಮಿ ಇದ್ದರು.