Advertisement

ಮೋದಿ ದೂರದೃಷ್ಟಿಯ ನಾಯಕ: ಅಮೆರಿಕ ವಾಣಿಜ್ಯ ಸಚಿವೆ ಗಿನಾ ರೈಮಂಡೊ

10:03 PM Apr 16, 2023 | Team Udayavani |

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಜನಪ್ರಿಯ ವಿಶ್ವ ನಾಯಕರು. ದೂರದೃಷ್ಟಿ ಹೊಂದಿದವರು. ಭಾರತದ ನಾಗರಿಕರ ಮೇಲಿನ ಅವರ ಬದ್ಧತೆಯು ವರ್ಣಾತೀತ ಎಂದು ಅಮೆರಿಕ ವಾಣಿಜ್ಯ ಸಚಿವೆ ಗಿನಾ ರೈಮಂಡೊ ಶ್ಲಾಸಿದ್ದಾರೆ. ಇತ್ತೀಚೆಗೆ ಭಾರತದ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದನ್ನು ಅವರು ಸ್ಮರಿಸಿದರು.

Advertisement

ಇಂಡಿಯಾ ಹೌಸ್‌ನಲ್ಲಿ ಶನಿವಾರ ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ ರೈಮಂಡೊ, “ಹೋಲಿ ಸಂಭ್ರಮದಲ್ಲಿ ಪಾಲ್ಗೊಳ್ಳಲೆಂದೇ ಒಂದು ದಿನದ ಮೊದಲು ಭಾರತಕ್ಕೆ ತೆರಳಿದ್ದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಅವರು ಕುಟುಂಬದವರು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು,” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next