Advertisement

ಮೋದಿಯೇ ಮೆಚ್ಚಿನ ವ್ಯಕ್ತಿ

11:23 AM Sep 28, 2019 | mahesh |

ಹೊಸದಿಲ್ಲಿ: ದೇಶದ ಅತಿ ಮೆಚ್ಚಿನ ವ್ಯಕ್ತಿಗಳ ಪೈಕಿ ಕ್ರಿಕೆಟಿಗ ಎಂ.ಎಸ್‌. ಧೋನಿಯನ್ನು ಹಿಂದಿಕ್ಕಿ ಪ್ರಧಾನಿ ನರೇಂದ್ರ ಮೋದಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲ, ವಿಶ್ವದ ಮೆಚ್ಚಿನ ವ್ಯಕ್ತಿಗಳ ಪೈಕಿ ಮೋದಿ ಆರನೇ ಸ್ಥಾನ ಗಳಿಸಿದ್ದಾರೆ.

Advertisement

ಯುಗೌ ಎಂಬ ಸಂಸ್ಥೆ ನಡೆಸಿದ ಈ ಸಮೀಕ್ಷೆಯಲ್ಲಿ ಭಾರತದ ಶೇ.15.66 ರಷ್ಟು ಜನರು ಮೋದಿಯನ್ನು ಮೆಚ್ಚಿದ್ದಾರೆ. ಇನ್ನು ಧೋನಿಯನ್ನು ಶೇ.8.58ರಷ್ಟು ಜನರು ಮೆಚ್ಚಿದ್ದಾರೆ. 41 ದೇಶಗಳ 42 ಸಾವಿರ ಜನರನ್ನು ಮಾತನಾಡಿಸಿ ಈ ಸಮೀಕ್ಷೆಯನ್ನು ಸಂಸ್ಥೆ ನಡೆಸಿದ್ದು, ಪುರುಷರು ಹಾಗೂ ಮಹಿಳೆಯರು ಎಂಬ ಎರಡು ವಿಭಿನ್ನ ವಿಭಾಗದಲ್ಲಿ ವಿಶ್ವದ ಮೆಚ್ಚಿನ ವ್ಯಕ್ತಿಗಳನ್ನು ಪಟ್ಟಿ ಮಾಡಿದೆ.

ಭಾರತದ ಮೆಚ್ಚಿನ ಮಹಿಳೆಯರ ಪಟ್ಟಿಯಲ್ಲಿ ಮೇರಿಕೋಮ್‌, ಕಿರಣ್‌ ಬೇಡಿ, ಲತಾ ಮಂಗೇಶ್ಕರ್‌, ಸುಷ್ಮಾ ಸ್ವರಾಜ್‌, ದೀಪಿಕಾ ಪಡುಕೋಣೆ ಮೊದಲ ಐದು ಸ್ಥಾನಗಳಲ್ಲಿದ್ದಾರೆ. ಪುರುಷರ ಪಟ್ಟಿಯಲ್ಲಿ ರತನ್‌ ಟಾಟಾ (3), ಬರಾಕ್‌ ಒಬಾಮಾ (4), ಬಿಲ್‌ ಗೇಟ್ಸ್‌ (5) ಸ್ಥಾನ ಪಡೆದಿದ್ದಾರೆ.

ಭಾರತದ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದರೆ, ವಿಶ್ವದ ಮೆಚ್ಚಿನ ವ್ಯಕ್ತಿಗಳ ಪೈಕಿ ಮೋದಿ ಆರನೆಯ ಸ್ಥಾನದಲ್ಲಿದ್ದಾರೆ. ವಿಶ್ವದ ಪಟ್ಟಿಯಲ್ಲಿ ಬಿಲ್‌ ಗೇಟ್ಸ್‌ (ಶೇ. 9.6), ಬರಾಕ್‌ ಒಬಾಮಾ (ಶೇ.9.2), ಜಾಕಿ ಚಾನ್‌ (ಶೇ. 5.7), ಕ್ಸಿ ಜಿನ್‌ಪಿಂಗ್‌ (ಶೇ. 5.1), ಜಾಕ್‌ ಮಾ (ಶೇ. 4.9) ಮೊದಲ ಐದು ಸ್ಥಾನಗಳಲ್ಲಿದ್ದಾರೆ. ಈ ಎಲ್ಲ ಗಣ್ಯರು ಕಳೆದ ವರ್ಷಕ್ಕೆ ಹೋಲಿಸಿದರೆ ಅದೇ ಸ್ಥಾನವನ್ನು ಕಾದುಕೊಂಡಿದ್ದರೆ, ಪ್ರಧಾನಿ ಮೋದಿ 2 ಸ್ಥಾನ ಮೇಲೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next