Advertisement
“ದೇಶದಲ್ಲಿ ಮೋದಿ, ಮಹಾರಾಷ್ಟ್ರದಲ್ಲಿ ಶಿಂಧೆ” ಎಂಬ ಕ್ಯಾಚ್ ಲೈನ್ ನೊಂದಿಗೆ ನೀಡಿರುವ ಪತ್ರಿಕಾ ಜಾಹೀರಾತು ಮಹಾರಾಷ್ಟ್ರದ ರಾಜಕೀಯ ವಲಯಗಳಲ್ಲಿ ಅನೇಕ ಗುಮಾಣಿಗಳನ್ನು ಎಬ್ಬಿಸಿದೆ. ಈ ಹಿಂದೆ, “ದೆಹಲಿ ಮೇ ನರೇಂದ್ರ ಔರ್ ರಾಜ್ಯ ಮೇ ದೇವೇಂದ್ರ” ಎಂಬ ಘೋಷಣೆ ಮಹಾರಾಷ್ಟ್ರ ರಾಜ್ಯದಲ್ಲಿ ಜನಪ್ರಿಯವಾಗಿತ್ತು.
Related Articles
Advertisement
ಸಮೀಕ್ಷೆಯ ಪ್ರಕಾರ ಬಿಜೆಪಿಗೆ 30.2% ಮತ್ತು ಶಿಂಧೆ ಸೇನೆ 16.2% ಜನರ ಬೆಂಬಲವನ್ನು ಹೊಂದಿದೆ ಎಂದು ಜಾಹೀರಾತು ಹೇಳುತ್ತದೆ. ಒಟ್ಟಾಗಿ, ಸಮೀಕ್ಷೆ ಮಾಡಿದ ಜನರ ಗುಂಪಿನಲ್ಲಿ ಮೈತ್ರಿಯು 46% ಕ್ಕಿಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ.
ಪ್ರಧಾನಿ ಮೋದಿ ಮತ್ತು ಏಕನಾಥ್ ಶಿಂಧೆ ಅವರು ಪ್ರಾರಂಭಿಸಿದ ಸಾರ್ವಜನಿಕ ಕಲ್ಯಾಣ ಯೋಜನೆಗಳ ಸರಣಿಯಿಂದಾಗಿ ಜನಪ್ರಿಯತೆ ಹೆಚ್ಚಿದೆ ಎಂದು ಜಾಹೀರಾತು ಹೇಳಿದೆ.
ಇದರ ಮಧ್ಯೆ, ಉದ್ಧವ್ ಠಾಕ್ರೆ ಅವರ ಬಣದ ಸಂಸದ, ಸಂಜಯ್ ರಾವುತ್ ಅವರು ಪಕ್ಷವನ್ನು ಸ್ಥಾಪಿಸಿದ ಬಾಳಾಸಾಹೇಬ್ ಠಾಕ್ರೆ ಬಗ್ಗೆ ಯಾವುದೇ ಉಲ್ಲೇಖವಿಲ್ಲದೇ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಮಾಡಿದ ಜಾಹೀರಾತಿನ ವಿರುದ್ಧ ವಾಗ್ದಾಳಿ ನಡೆಸಿದರು.