Advertisement

‘ಹುವಾ ತೋ ಹುವಾ’ಪಿತ್ರೋಡ ಹೇಳಿಕೆ ಕಾಂಗ್ರೆಸ್‌ ಕುತ್ಸಿತ ಮನೋಭಾವಕ್ಕೆ ಸಾಕ್ಷಿ: ಮೋದಿ

10:01 AM May 11, 2019 | Sathish malya |

ರೋಹಟಕ್‌, ಹರಿಯಾಣ : 1984ರ ಸಿಕ್ಖ್ ವಿರೋಧಿ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಹಿರಿಯ ನಾಯಕ ಸ್ಯಾಮ್‌ ಪಿತ್ರೋಡ ಅವರು ‘ಹುವಾ ತೋ ಹುವಾ’ (ಆದದ್ದು ಆಗಿ ಹೋಯಿತು) ಎಂದು ನೀಡಿದ್ದ ಅತ್ಯಂತ ಉಪೇಕ್ಷೆ ಮತ್ತು  ಅಸಡ್ಡೆಯ ವಿವಾದಿತ ಹೇಳಿಕೆಯನ್ನು ಖಂಡಿಸಿ “ಇದು ಕಾಂಗ್ರೆಸ್‌ ಪಕ್ಷದ ಕೀಳು ವ್ಯಕ್ತಿತ್ವ ಮತ್ತು ಕುತ್ಸಿತ ಮನೋಭಾವವನ್ನು ತೋರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದಿಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು.

Advertisement

ಕೇಂದ್ರದಲ್ಲಿನ ತನ್ನ ನೇತೃತ್ವದ ಎನ್‌ಡಿಎ ಸರಕಾರ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದೆ ಎಂದು ಹೇಳಿದ ಮೋದಿ, ಅವಕಾಶವಾದಿ ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಮತದಾರರನ್ನು ಜಾಗೃತಗೊಳಿಸಿದರು.

ಕಾಂಗ್ರೆಸ್‌ ಪಕ್ಷ 70 ವರ್ಷಗಳ ಕಾಲ ಈ ದೇಶವನ್ನು ಆಳಿದೆ. ಅದರ ಮನೋಭಾವ, ದುರಹಂಕಾರ ಈಗಲೂ ಏನೆಂಬುದು ನಿನ್ನೆಯಷ್ಟೇ ಆ ಪಕ್ಷದ ಹಿರಿಯ ನಾಯಕ (ಸ್ಯಾಮ್‌ ಪಿತ್ರೋಡ) ನೀಡಿರುವ ನಿರ್ಲಜ್ಜ ಹೇಳಿಕೆಯಲ್ಲೇ ವ್ಯಕ್ತವಾಗುತ್ತದೆ. ಅವರು ಆಡಿರುವ ‘ಹುವಾ ತೋ ಹುವಾ’ ಎಂಬ ಮೂರು ಪದಗಳು ಕೇವಲ ಪದಗಳಲ್ಲ; ಅವು ಕಾಂಗ್ರೆಸ್‌ ಪಕ್ಷದ ಕೀಳು ವ್ಯಕ್ತಿತ್ವ ಮತ್ತು ಕುತ್ಸಿತ ಮನೋಭಾವವನ್ನು ತೋರಿಸುತ್ತದೆ ಎಂದು ಮೋದಿ ಹೇಳಿದರು.

ಹೂಡಾ ಕುಟುಂಬದ ಭದ್ರಕೋಟೆ ಎನಿಸಿರುವ ರೋಹಟಕ್‌ನಲ್ಲಿ ಬಿಜೆಪಿಯು ಮಾಜಿ ಸಂಸದ ಅರವಿಂದ ಶರ್ಮಾ ಅವರನ್ನು ಕಾಂಗ್ರೆಸ್‌ನ ಹಾಲಿ ಸಂಸದ ದೀಪೇಂದರ್‌ ಸಿಂಗ್‌ ಹೂಡಾ ಅವರ ವಿರುದ್ಧ ಕಣಕ್ಕಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next