Advertisement

Modi ಹ್ಯಾಟ್ರಿಕ್‌ ಹೀರೋ? ಉತ್ತರ ಭಾರತ ಕೇಸರಿಮಯ?ದಕ್ಷಿಣದಲ್ಲೂ ಕಮಲ ಅರಳಿ ವಿಸ್ಮಯ?

01:34 AM Jun 02, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನವು ಶನಿವಾರ ಸಂಜೆ ಮುಕ್ತಾಯವಾಗುತ್ತಿದ್ದಂತೆ ಮತಗಟ್ಟೆ ಸಮೀಕ್ಷೆಗಳ ಫ‌ಲಿತಾಂಶ ಹೊರಬಿದ್ದಿದೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು 3ನೇ ಬಾರಿಗೆ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ. ಇದರೊಂದಿಗೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿ ಹ್ಯಾಟ್ರಿಕ್‌ ಸಾಧಿಸಲಿದ್ದಾರೆ. ಎನ್‌ಡಿಎಗೆ ಪೈಪೋಟಿ ನೀಡಿರುವ ಕಾಂಗ್ರೆಸ್‌ ನೇತೃತ್ವದ “ಐಎನ್‌ಡಿಐಎ ಒಕ್ಕೂಟ’ವು ನಿರೀಕ್ಷಿತ ಸೋಲು ಕಾಣಲಿದೆ ಎಂದು ಅಂದಾಜಿಸಿವೆ.
ವಿಶೇಷ ಎಂದರೆ ಯಾವುದೇ ಮತಗಟ್ಟೆ ಸಮೀಕ್ಷೆಯು ಬಿಜೆಪಿ 370 ಮತ್ತು ಎನ್‌ಡಿಎ 400 ಸೀಟು ಗೆಲ್ಲಲಿದೆ ಎಂದು ಹೇಳುತ್ತಿಲ್ಲ. ಚುನಾವಣೆಯ ವೇಳೆ ಬಿಜೆಪಿಯು “ಅಬ್‌ ಕೀ ಬಾರ್‌ 400 ಪಾರ್‌’ ಎಂದು ಪ್ರಚಾರ ಮಾಡಿತ್ತು.

Advertisement

ಮತ್ತೊಂದು ಗಮನಿಸಬೇಕಾದ ಅಂಶ ಎಂದರೆ ಎಲ್ಲ ಸಮೀಕ್ಷೆಗಳು ಎನ್‌ಡಿಎಗೆ 350+ ಸೀಟುಗಳನ್ನು ನೀಡಿದ್ದರೆ, ಕಾಂಗ್ರೆಸ್‌ ನೇತೃತ್ವದ ಐಎನ್‌ಡಿಐಎ ಒಕ್ಕೂಟ ಈ ಬಾರಿ 120ರ ಗಡಿ ದಾಟುವ ಊಹೆಯನ್ನೂ ಮಾಡಿವೆ. ಈ ಎರಡೂ ಕೂಟಗಳನ್ನು ಹೊರತುಪಡಿಸಿ ಉಳಿದ ಪಕ್ಷಗಳು ಎಲ್ಲ ಸೇರಿ 50ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳನ್ನು ಈ ಮತಗಟ್ಟೆ ಸಮೀಕ್ಷೆಗಳು ತೆರೆದಿಟ್ಟಿವೆ.

ಬಿಜೆಪಿ ಪ್ರಭಾವದ ರಾಜ್ಯಗಳು
ಈ ಬಾರಿಯೂ ಬಿಜೆಪಿಯು ಗುಜರಾತ್‌, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ದಿಲ್ಲಿ, ಛತ್ತೀಸ್‌ಗಢ, ಬಿಹಾರ, ರಾಜಸ್ಥಾನ, ಉತ್ತರಾಖಂಡ, ಅಸ್ಸಾಂ ರಾಜ್ಯಗಳ ಪೈಕಿ ಕೆಲವು ಕಡೆ ಶೇ. 100ರಷ್ಟು, ಮತ್ತೆ ಉಳಿದೆಡೆ ಶೇ. 90ರಷ್ಟು ಸೀಟು ಗೆಲ್ಲಬಹುದು ಎಂದು ಸಮೀಕ್ಷೆಗಳು ಅಂದಾಜಿಸಿವೆ. ಹಾಗೆಯೇ ದಕ್ಷಿಣ ಭಾರತದಲ್ಲಿ ಮತ ಪ್ರಮಾಣ ಹೆಚ್ಚಿಸಿಕೊಳ್ಳುವುದರೊಂದಿಗೆ ಬಿಜೆಪಿ ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾ ಗೆಲ್ಲುವ ಸಾಧ್ಯತೆಗಳಿವೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಐಎನ್‌ಡಿಐಎ ಕೂಟದ ರಾಜ್ಯಗಳು
ನಿರೀಕ್ಷೆಯಂತೆ ಕೇರಳ, ಪಂಜಾಬ್‌, ತಮಿಳುನಾಡು, ತೆಲಂಗಾಣ, ಹರಿಯಾಣ, ಪಶ್ಚಿಮ ಬಂಗಾಲ ಸೇರಿ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ. ಆಂಧ್ರ ಪ್ರದೇಶ ಸೇರಿ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡುವ ಸಾಧ್ಯತೆಗಳಿವೆ.

ಐಎನ್‌ಡಿಐಎ ಕೂಟ ಜನರಿಂದ ತಿರಸ್ಕೃತ
ಅವಕಾಶವಾದಿ ಐಎನ್‌ಡಿಐಎ ಒಕ್ಕೂಟವು ಜನರ ಮತ ಪಡೆಯುವಲ್ಲಿ ವಿಫ‌ಲವಾಗಿದೆ. ಚುನಾವಣೆ ಪ್ರಚಾರದುದ್ದಕ್ಕೂ ಮೋದಿಯನ್ನು ವ್ಯಂಗ್ಯ ಮಾಡುವುದನ್ನೇ ಬಂಡವಾಳ ಮಾಡಿಕೊಂಡಿದ್ದ ಈ ಕೂಟವನ್ನು ಜನರು ತಿರಸ್ಕರಿಸಿದ್ದಾರೆ.ಎನ್‌ಡಿಎ ಸರಕಾರವನ್ನು ಮರಳಿ ತರುವುದಕ್ಕಾಗಿ ದಾಖಲೆಯ ಪ್ರಮಾಣದಲ್ಲಿ ಮತದಾನ ಮಾಡಿದ ಎಲ್ಲರಿಗೂ ಧನ್ಯವಾದಗಳು. – ನರೇಂದ್ರ ಮೋದಿ, ಪ್ರಧಾನಿ

Advertisement

ವಿವಿಧ ಮತಗಟ್ಟೆ ಸಮೀಕ್ಷೆ (ದೇಶ)
ಸಂಸ್ಥೆ-ಎನ್‌ಡಿಎ-ಐಎನ್‌ಡಿಐಎ-ಇತರರು
ರಿಪಬ್ಲಿಕ್‌ ಭಾರತ್‌-ಮ್ಯಾಟ್ರಿಜ್‌-  353- 368 118-133 43-48
ರಿಪಬ್ಲಿಕ್‌ ಟಿವಿ-ಪಿ ಮಾರ್ಕ್‌- 359  154   30
ಜನ್‌ ಕೀ ಬಾತ್‌- 362-392   141- 161 10- 20
ಟಿವಿ 9 ಪೋಲ್‌ಸ್ಟ್ರಾಟ್‌ 341   166   36
ಇಂಡಿಯಾ ನ್ಯೂಸ್‌-ಡಿ ಡೈನಾಮಿಕ್ಸ್‌ 371   125   47
ದೈನಿಕ್‌ ಭಾಸ್ಕರ್‌ 281- 350 145 201- 33 49
ನ್ಯೂಸ್‌ ನೇಷನ್‌ 342-378 159-169 21-23
ಇಂಡಿಯಾ ಟಿವಿ-ಸಿಎನ್‌ಎಕ್ಸ್‌ 308   125   30
ನ್ಯೂಸ್‌18 355 370-125 140   42-52
ನ್ಯೂಸ್‌ 24-ಚಾಣಕ್ಯ 400   107   36
ಟೈಮ್ಸ್‌ ನೌ-ಇಟಿಜಿ 358  132   53
ಇಂಡಿಯಾ ಟುಡೇ 361- 401 131- 166 08-20

ಕರ್ನಾಟಕ: ಕಳೆದ ಬಾರಿಗಿಂತ ಬಿಜೆಪಿಗೆ ಕಡಿಮೆ, ಕೈಗೆ ಹೆಚ್ಚಳ
ಬೆಂಗಳೂರು: 2019ರ ಲೋಕಸಭೆ ಚುನಾವಣೆ ಫ‌ಲಿತಾಂಶಕ್ಕೆ ಹೋಲಿಸಿದರೆ 2024ರ ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಕೆಲವು ಸ್ಥಾನಗಳು ಕಡಿಮೆಯಾಗಲಿವೆ. ಈ ಬಾರಿ ಬಿಜೆಪಿ ಮತ್ತು ಜೆಡಿಎಸ್‌ ಜತೆಗೂಡಿ ಸ್ಪರ್ಧಿಸಿದ್ದರೂ ಕಳೆದ ಬಾರಿಯ ಫ‌ಲಿತಾಂಶ ಪುನರಾವರ್ತನೆ ಆಗದು! ಕಳೆದ ಬಾರಿ ಕೇವಲ ಒಂದೇ ಸೀಟು ಗೆದ್ದಿದ್ದ ಕಾಂಗ್ರೆಸ್‌ ಈ ಬಾರಿ ಕನಿಷ್ಠ 3ರಿಂದ 7 ಸ್ಥಾನಗಳವರೆಗೂ ಗೆಲ್ಲಬಹುದು ಎಂದು ಮತಗಟ್ಟೆ ಸಮೀಕ್ಷೆ ಗಳು ಅಂದಾಜಿಸಿವೆ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 25 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್‌ ಮತು ಜೆಡಿಎಸ್‌ ಜಂಟಿಯಾಗಿ ಸ್ಪರ್ಧಿಸಿ ತಲಾ ಒಂದೊಂದು ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಮಂಡ್ಯದಲ್ಲಿ ಮಾತ್ರ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next