Advertisement
ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸ್ವಿಸ್ ಬ್ಯಾಂಕ್‌ನಲ್ಲಿರುವ ದೇಶದ ಕಪ್ಪು ಹಣವನ್ನು 100 ದಿನದೊಳಗೆ ವಾಪಸ್ ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಜಮಾ ಮಾಡುವುದಾಗಿ ಮೋದಿ ಭರವಸೆ ನೀಡಿದ್ದರು. ಐದು ವರ್ಷಗಳಾದರೂ 15 ಪೈಸೆಯನ್ನು ಯಾರ ಖಾತೆಗೂ ಜಮಾ ಮಾಡಿಲ್ಲ. ಬರೀ ಸುಳ್ಳು ಆಶ್ವಾಸನೆಗಳನ್ನು ಹೇಳಿ ಜನತೆಯನ್ನು ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ ಎಂದರು.
Related Articles
Advertisement
ಉತ್ತಮ ಕೆಲಸ ನೋಡಿ ಮತ ನೀಡಿ: ಆರ್.ಧ್ರುವನಾರಾಯಣ್ ಅವರು ಕಳೆದ 10 ವರ್ಷದಿಂದ ಚಾಮರಾಜನಗರ ಲೋಕಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಭಾರಿ ಗೆಲವು ಸಾಧಿಸಿದರೆ ಇನ್ನೂ ಅನೇಕ ಉತ್ತಮ ಕೆಲಸಗಳನ್ನು ಮಾಡಲಿದ್ದಾರೆ ಎಂದು ಹೇಳಿದರು.
ವಿವಿಧೆಡೆ ಮತಯಾಚನೆ: ತಾಲೂಕಿನ ವ್ಯಾಪ್ತಿಗೆ ಸೇರಿದ ಮಂಗಲ ,ದೂಡ್ಡಮೋಳೆ ವೆಂಕಟಯ್ಯನ ಛತ್ರ, ಬಿಸಲವಾಡಿ, ಮೂಕನಪಾಳ್ಯ, ಅಟ್ಟುಗುಳಿಪುರ, ಸಿದ್ದಯ್ಯನಪುರ, ಹೆಬ್ಬಸೂರು, ಚಂದಕವಾಡಿ, ನಾಗವಳ್ಳಿ, ಜ್ಯೋತಿಗೌಡನಪುರ, ಕಾಗಲವಾಡಿ, ಆಲೂರು, ಕೂಡೂರು ಮತ್ತಿತರ ಗ್ರಾಮಗಳಲ್ಲಿ ಸಂಸದರು, ಸಚಿವರು ಮತ ಯಾಚಿಸಿದರು.
ಮಾಜಿ ಸಂಸದ ಎಂ.ಶಿವಣ್ಣ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವು, ಆರ್.ಮಹದೇವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ, ಮಹಮದ್‌ಅಸರ್, ನಗರಸಭಾ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಸದಸ್ಯ ಎಸ್.ಸೋಮನಾಯಕ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಮುಖಂಡರಾದ ನಾಗಯ್ಯ, ಕಪನಿನಾಯಕ, ನಾಸಿರ್‌ಅಹಮದ್, ಕಮಲ್, ಪಟೇಲ್‌ಸುಬ್ಬಪ್ಪ ಇತರರು ಇದ್ದರು.