Advertisement

ವ್ಯಕ್ತಿಗೆ ದಿನಕ್ಕೆ 55 ಲೀ. ನೀರು

12:26 AM Aug 30, 2019 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಘೋಷಣೆ ಮಾಡಿರುವಂತೆ 2024ರ ಒಳಗಾಗಿ ಪ್ರತಿ ಮನೆಗೂ ಟ್ಯಾಪ್‌ ಮೂಲಕ ನೀರು ಪೂರೈಕೆ ಯೋಜನೆಯಡಿ ಪ್ರತಿ ವ್ಯಕ್ತಿಗೆ ದಿನವೊಂದಕ್ಕೆ 55 ಲೀ. ನೀರನ್ನು ಒದಗಿಸಲು ಗುರಿ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ರಾಷ್ಟ್ರೀಯ ಜಲ ಜೀವನ ಕೋಶ ರಚಿಸಲಾಗುತ್ತದೆ. ಸ್ವಚ್ಛ ಭಾರತ ಯೋಜನೆ ಘೋಷಿಸಿದಾಗಲೂ ಇದೇ ರೀತಿ ಸ್ವಚ್ಛ ಭಾರತ ಕೋಶವನ್ನು ರಚಿಸಲಾಗಿತ್ತು. ಅದರ ಮೂಲಕ ಖಾಸಗಿ ಕಂಪನಿಗಳು ಮತ್ತು ಇತರ ದತ್ತಿ ಸಂಸ್ಥೆಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದೇ ರೀತಿ ‘ನಲ್ ಸೆ ಜಲ್’ ಎಂಬ ಈ ಯೋಜನೆಗೂ ಜಲ ಕೋಶ ರಚಿಸಿ, ಸಿಎಸ್‌ಆರ್‌ ಅನುದಾನಗಳನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಆರಂಭದಲ್ಲಿ ಕೆರೆ ಹಾಗೂ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸಲು ಉದ್ಯೋಗ ಖಾತರಿಯಲ್ಲಿನ 1 ಲಕ್ಷ ಕೋಟಿ ರೂ. ಹಣವನ್ನು ಅದಕ್ಕೆ ಮೀಸಲು ಇರಿಸಬೇಕಾಗುತ್ತದೆ.

Advertisement

ಸಂಪುಟದಲ್ಲಿ ಶೀಘ್ರ ಚರ್ಚೆ: ಅಧಿಕಾರಿಗಳು ಈ ಯೋಜನೆಗೆ ಅಂತಿ ರೂಪ ನೀಡುತ್ತಿದ್ದು, ಶೀಘ್ರದಲ್ಲೇ ಇದನ್ನು ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಒಬ್ಬ ವ್ಯಕ್ತಿಗೆ 43 ರಿಂದ 55 ಲೀ .ನೀರನ್ನು ಪ್ರತಿ ದಿನ ಒದಗಿಸುವ ಪ್ರಸ್ತಾವನೆ ಇದರಲ್ಲಿದೆ. ಸಾಮಾನ್ಯವಾಗಿ ಬಹುತೇಕ ಸಂದರ್ಭಗಳಲ್ಲಿ ಮನೆಯಿಂದ 100 ಮೀಟರ್‌ ಒಳಗೆ ಇಷ್ಟು ನೀರು ಲಭ್ಯವಾಗುತ್ತದೆ. ತೀವ್ರ ಕೊರತೆ ಇರುವ 254 ಜಿಲ್ಲೆಗಳನ್ನು ಆದ್ಯತೆಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next