Advertisement

ಬೌದ್ಧಿಕ ಆಸ್ತಿ ಹಣಕಾಸು ಉತ್ತೇಜನಕ್ಕೆ ಕೇಂದ್ರ ಸರಕಾರ

11:33 PM Jul 15, 2023 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಬೌದ್ಧಿಕ ಆಸ್ತಿ ಹಣಕಾಸು ಪರಿಕಲ್ಪನೆಗೆ ಉತ್ತೇಜನ ನೀಡಲು ಮತ್ತು ಅದನ್ನು ಸಾಂಸ್ಥಿಕಗೊಳಿಸಲು ವ್ಯೂಹಾತ್ಮಕ ನೀಲನಕ್ಷೆ ಮತ್ತು ಕ್ರಿಯಾ ಯೋಜನೆಯ ಕರಡನ್ನು ರೂಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಿರ್ಧರಿಸಿದೆ.

Advertisement

ಬೌದ್ಧಿಕ ಆಸ್ತಿ ಹಕ್ಕು ಎನ್ನುವುದು ದೇಶದ ಹಣಕಾಸು ಸುಧಾರಣೆಗೆ ಅತ್ಯುತ್ತಮ ಅಸ್ತ್ರ ಎಂದು ಸರಕಾರ ನಂಬಿದೆ. “ಐಪಿ ಫೈನಾನ್ಸಿಂಗ್‌ ಎನ್ನುವುದು ಉದಯೋನ್ಮುಖ ಉದ್ದಿಮೆ ಆಯ್ಕೆಯಾಗಿ ಬೆಳೆಯುತ್ತಿದೆ. ಸಮರ್ಪಕ ಐಪಿ ಆಸ್ತಿಯನ್ನು ಹೊಂದಿರುವಂಥ ಕಂಪೆನಿಗಳು ಬಂಡವಾಳ ಕ್ರೋಡೀಕರಣಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಇದು ನೆರವಾಗಲಿದೆ’ ಎಂದು ಸರಕಾರಿ ದಾಖಲೆಗಳೇ ಅಭಿಪ್ರಾಯಪಟ್ಟಿವೆ ಎಂದು “ನ್ಯೂಸ್‌ 18′  ವರದಿ ಮಾಡಿದೆ.

ಏನಿದು ಐಪಿ ಫೈನಾನ್ಸಿಂಗ್‌?: ಹಣಕಾಸಿನ ನೆರವು ಪಡೆಯಲು, ಸಾಲ ಪಡೆಯಲು ಮತ್ತು ಆದಾಯ ಉತ್ಪತ್ತಿಗಾಗಿ ಐಪಿಆರ್‌ ಅನ್ನು ಬಳಕೆ ಮಾಡುವುದನ್ನು ಐಪಿ ಫೈನಾನ್ಸಿಂಗ್‌ ಎಂದು ಕರೆಯುತ್ತಾರೆ. ಉದ್ದಿಮೆಯ ವಹಿವಾಟುಗಳಲ್ಲಿ ಮೇಲಾಧಾರವಾಗಿ ಇದನ್ನು ಬಳಸುವುದನ್ನು “ಐಪಿ ಹಣಕಾಸು ವಹಿವಾಟು’ ಎನ್ನುತ್ತಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಬೌದ್ಧಿಕ ಆಸ್ತಿಯ ಮೂಲಕ ಕಂಪನಿಗಳು ಆದಾಯ ಉತ್ಪತ್ತಿ ಮಾಡುತ್ತಿರುವುದು ಬೆಳಕಿಗೆ ಬರುತ್ತಿವೆ.

ಈಗ ಸರಕಾರವು ಯಾವುದೇ ಬೌದ್ಧಿಕ ಆಸ್ತಿಯನ್ನು ಅಮೂರ್ತ ಆಸ್ತಿಯನ್ನಾಗಿ ಪರಿಗಣಿಸಲು ಮತ್ತು ಅದರ ಮೌಲ್ಯವನ್ನು ನಿರ್ಧರಿಸಲು ಏಕರೂಪದ ವ್ಯವಸ್ಥೆ ಜಾರಿಗೆ ತರುವ ಯೋಜನೆ ಹಾಕಿಕೊಂಡಿದೆ. ಇದರಿಂದಾಗಿ ಹಣಕಾಸು ಸಂಸ್ಥೆಗಳ ಆಸ್ತಿಪಾಸ್ತಿಗಳ ಮೌಲ್ಯಮಾಪನವೂ ಸುಲಭವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next