Advertisement

Census: ನಾಲ್ಕೈದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜನಗಣತಿ ಮುಂದಿನ ತಿಂಗಳಿಂದಲೇ ಆರಂಭ?

09:21 PM Aug 21, 2024 | Team Udayavani |

ನವದೆಹಲಿ: ನಾಲ್ಕೈದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜನ ಗಣತಿಯನ್ನು ಭಾರತ ಸರ್ಕಾರವು ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್‌ನಲ್ಲಿ ಆರಂಭಿಸುವ ಸಾಧ್ಯತೆಗಳಿವೆ. ಈ ಜನಗಣತಿ ನಡೆಸಲು ಸುಮಾರು 18 ತಿಂಗಳು ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವ ಜನ ಗಣತಿಯನ್ನು 2021ರಲ್ಲಿ ನಡೆಸಬೇಕಿತ್ತು. ಆದರೆ, ಕೋವಿಡ್‌-19 ಸಾಂಕ್ರಾಮಿಕದಿಂದಾಗಿ ಮುಂದೂಡಲಾಗಿತ್ತು.

ಸರ್ಕಾರವು ತನ್ನ ಕಾರ್ಯಕ್ರಮಗಳಿಗೆ 2011ರ ಜನ ಗಣತಿಯ ಅಂಕಿಸಂಖ್ಯೆಗಳನ್ನೇ ಆಧಾರವಾಗಿ ಬಳಸುತ್ತಿದೆ. ಆದರೆ, ಸರ್ಕಾರದ ಒಳಗಿನ ಮತ್ತು ಹೊರಗಿನ ಆರ್ಥಿಕ ತಜ್ಞರು, ಜನಗಣತಿಗೆ ವಿಳಂಬ ಮಾಡುತ್ತಿರುವುದಕ್ಕಿ ಸರ್ಕಾರವನ್ನು ಟೀಕಿಸಿದ್ದಾರೆ. ಸರಿಯಾದ ಅಂಕಿ ಸಂಖ್ಯೆಗಳ ಕೊರತೆಯಿಂದಾಗಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತೊಂದರೆಯಾಗಲಿದೆ. ಅಲ್ಲದೇ, ಆರ್ಥಿಕ ದತ್ತಾಂಶ, ಹಣದುಬ್ಬರ ಮತ್ತು ಉದ್ಯೋಗ ಅಂದಾಜು ಸೇರಿದಂತೆ ಇನ್ನೂ ಅನೇಕ ಅಂಕಿ ಸಂಖ್ಯೆಗಳ ಮಾಹಿತಿ ಕೊರತೆ ಎದುರಾಗಿದೆ. ಜನಗಣತಿಯ ನೇತೃತ್ವವನ್ನು ಕೇಂದ್ರ ಗೃಹ ಇಲಾಖೆ ಹೊತ್ತುಕೊಳ್ಳಲಿದೆ. 2026ರ ಮಾರ್ಚ್‌ನಲ್ಲಿ ಜನಗಣತಿ ವರದಿ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next