Advertisement

Agnipath Scheme: ಅಗ್ನಿಪಥ ಯೋಜನೆಯಲ್ಲಿ ಶೇ.50 ಯೋಧರ ಉಳಿಕೆಗೆ ಚಿಂತನೆ ?

09:32 PM Sep 06, 2024 | Team Udayavani |

ನವದೆಹಲಿ: ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿರುವ “ಅಗ್ನಿಪಥ’ ಯೋಜನೆಯಲ್ಲಿ ಸರ್ಕಾರ ದೊಡ್ಡ ಮಟ್ಟದ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.

Advertisement

ಪೂರ್ವ ಲಡಾಖ್‌ನಲ್ಲಿ ಚೀನಾ ಜತೆಗೆ ಉಂಟಾಗಿರುವ ಗಡಿ ತಗಾದೆ ಹಿನ್ನೆಲೆಯಲ್ಲಿ “ಅಗ್ನಿಪಥ’ ಯೋಜನೆಯಲ್ಲಿ ನೇಮಕಗೊಂಡಿರುವ ಯೋಧರನ್ನು ಸೇನೆಯ 3 ವಿಭಾಗಗಳಲ್ಲಿ ಉಳಿಸಿಕೊಳ್ಳುವ ಪ್ರಮಾಣವನ್ನು ಹಾಲಿ ಶೇ.25ರಿಂದ ಶೇ.50ಕ್ಕೆ ಏರಿಕೆ ಮಾಡುವ ಪ್ರಸ್ತಾಪದ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಸರ್ಕಾರದ ಮುಂದಿರುವ ಹೊಸ ಪ್ರಸ್ತಾಪದ ಅನ್ವಯ ಯೋಜನೆಗಾಗಿ ಆರಂಭಿಕ ವಯೋಮಿತಿಯನ್ನು ಈಗಿ ರುವ 17ರಿಂದ 23ನೇ ವರ್ಷಕ್ಕೆ ಪರಿಷ್ಕರಿಸಲಾಗುತ್ತದೆ. ಪರ್ವತ ಮತ್ತು ಕಡಿದಾದ ಗುಡ್ಡಗಾಡು ಪ್ರದೇಶಗಳಲ್ಲಿ ಹೋರಾಟ ಮತ್ತು ಕಾರ್ಯಾಚರಣೆ ನಡೆಸಲು ಯುವಕರ ಅಗತ್ಯವಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಸೇನಾಧಿಕಾರಿ ಹೇಳಿಕೊಂಡಿದ್ದಾರೆ.

“ಅಗ್ನಿಪಥ’ ಯೋಜನೆಯ ಅನ್ವಯ 17 ವರ್ಷದಿಂದ 21 ವರ್ಷ ವಯೋಮಿತಿಯವರೆಗೆ ಯುವಕರನ್ನು ಸೇನೆಯ 3 ವಿಭಾಗಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. 4 ವರ್ಷಗಳ ಸೇವೆಯ ಬಳಿಕ ಶೇ.25 ಮಂದಿಯನ್ನು ಹೊರತುಪಡಿಸಿ ಉಳಿದವರನ್ನು ಕೈಬಿಡುವ ಬಗ್ಗೆ ಈಗಿನ ಪ್ರಸ್ತಾಪವಿದೆ.

ಇದನ್ನೂ ಓದಿ: ಪೆನ್‌ನಿಂದ ವಿಶ್ವದ ಅತಿ ಚಿಕ್ಕ ವ್ಯಾಕ್ಯೂಮ್‌ ಕ್ಲೀನರ್‌ ತಯಾರಿಸಿದ ಭಾರತೀಯ ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next