Advertisement

ಸಂಪುಟ ಲೆಕ್ಕಾಚಾರ : ಒಬಿಸಿಗೆ ಸೇರಿದ 24 ಮಂದಿಗೆ ಸಚಿವ ಸ್ಥಾನ ನೀಡುವ ಯೋಜನೆಯಲ್ಲಿ ಮೋದಿ?

09:38 PM Jul 06, 2021 | Team Udayavani |

ನವ ದೆಹಲಿ : ಎರಡನೇ ಬಾರಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಸಂಪುಟ ಮರುರಚನೆಯಾಗುತ್ತಿದ್ದು, ಯಾರಿಗೆ ಸಚಿವ ಸ್ಥಾನದ ಭಾಗ್ಯ ದೊರಕಲಿದೆ ಎಂಬ ಲೆಕ್ಕಾಚಾರ ಜೋರಾಗಿದೆ.

Advertisement

ಪ್ರತಿ ರಾಜ್ಯಗಳಲ್ಲಿ ಕೆಲವು ನಿರ್ದಿಷ್ಟ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟಕ್ಕೆ ಸಚಿವರನ್ನು ಆಯ್ಕೆ ಮಾಡಲಾಗುತ್ತದೆ. ಹಿಂದುಳಿದ ವರ್ಗಗಳಿಗೆ(ಒಬಿಸಿ) ಸೇರಿದ 24 ಮಂದಿಗೆ ಸಚಿವ ಸ್ಥಾನ ನೀಡುವ ಯೋಜನೆಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ, ಸುರಕ್ಷಿತವಾಗಿದೆ : ವಿಜಯಕುಮಾರ್ ಸ್ಪಷ್ಟನೆ

ಇನ್ನು, ನೂತನ ಸಚಿವ ಸಂಪುಟದಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡುವತ್ತ ಮೋದಿ ಪಡೆ ಗಮನ ಹರಿಸಿದ್ದು, ಇತ್ತ ಅನುಭವಿ ಮಹಿಳೆಯರಿಗೂ ಸಚಿವ ಸ್ಥಾನದ ಮಣೆ ಹಾಕಲಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿಯ ಸಚಿವ ಸಂಪುಟ ವಿಸ್ತರಣೆಗೆ ಮುಂದಿನ ವರ್ಷ ನಡೆಯುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ, ಮೈತ್ರಿ ಪಕ್ಷಗಳಿಗೆ ಆದ್ಯತೆ, ಜಾತಿ ಸಮೀಕರಣಗಳೇ ಮಾನದಂಡಗಳಾಗಿವೆ. ಕೇಂದ್ರದ ಕ್ಯಾಬಿನೆಟ್ ನಲ್ಲಿರುವ ಕೆಲ ಅಸಮರ್ಥ ಸಚಿವರಿಗೆ ಗೇಟ್ ಪಾಸ್ ನೀಡಿ ಸಚಿವ ಸಂಪುಟ ಪುನರ್ ರಚಿಸುವುದು ಮೋದಿ ಪ್ಲ್ಯಾನ್ ಆಗಿದೆ.

Advertisement

ಅಸ್ಸಾಂ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಸರ್ಬಾನಂದ ಸೋನೊವಾಲ್‌, ಜ್ಯೋತಿರಾದಿತ್ಯ ಸಿಂದಿಯಾ, ಸುಶೀಲ್‌ ಮೋದಿ ಅವರ ಹೆಸರುಗಳು ಸಚಿವ ಸ್ಥಾನದ ಪಟ್ಟಿಯಲ್ಲಿ ಪ್ರಮುಖವಾಗಿವೆ. ದಿವಂಗತ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಸೋದರ ಪಶುಪತಿ ಕುಮಾರ್‌ ಪರಾಸ್‌, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದ ನಾಯಕರು ಹಾಗೂ ಬಿಜೆಪಿಯ ಮೈತ್ರಿ ಪಕ್ಷಗಳಾದ ಜೆಡಿ(ಯು) ಮತ್ತು ಅಪ್ನಾ ದಳದ ಪ್ರತಿನಿಧಿಗಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.

ಇನ್ನು,  ಪ್ರಸ್ತುತ ಕೇಂದ್ರ ಸಚಿವ ಸಂಪುಟವು ಪ್ರಧಾನಿ ಮೋದಿ ಅವರನ್ನು ಹೊರತು ಪಡಿಸಿ 53 ಸಚಿವರನ್ನು ಒಳಗೊಂಡಿದೆ. ಗರಿಷ್ಠ 81 ಸಂಸದರಿಗೆ ಸಚಿವ ಸಂಪುಟ ಸೇರುವ ಅವಕಾಶವಿದೆ.

ಒಟ್ಟಾರೆ ಸಚಿವ ಸಂಪುಟದ ಗಾತ್ರ 81 ಅನ್ನು ದಾಟುವಂತಿಲ್ಲ. ಹೀಗಾಗಿ 20ಕ್ಕೂ ಹೆಚ್ಚು ಸಂಸದರಿಗೆ ಈಗ ಕೇಂದ್ರದ ಕ್ಯಾಬಿನೆಟ್ ನಲ್ಲಿ ಸಚಿವರಾಗುವ ಅವಕಾಶ ಇದ್ದು, ಯಾರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸಲಿದೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ :  ಐಸಿಐಸಿಐ ಬ್ಯಾಂಕ್ ನ ಎಟಿಎಂ, ಚೆಕ್ ಬುಕ್ ನಿಯಮಗಳ ಬದಲಾವಣೆ ಆಗಸ್ಟ್ ನಿಂದ ಅನ್ವಯ

Advertisement

Udayavani is now on Telegram. Click here to join our channel and stay updated with the latest news.

Next