Advertisement
ಇದಕ್ಕಾಗಿಯೇ ಪ್ರಧಾನಿ ನೇತೃತ್ವದಲ್ಲಿ ಇತ್ತೀಚೆಗೆ ಚಿಂತನ ಶಿಬಿರಗಳನ್ನು ನಡೆಸಲಾಯಿತು. ಇವುಗಳಲ್ಲಿ, ಎಲ್ಲ ಇಲಾಖೆಗಳ ಸಚಿವರು, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸುಮಾರು ಐದು ಗಂಟೆಗಳ ಕಾಲ ನಡೆದ ಮೊದಲ ಶಿಬಿರದ ಅನಂತರ 77 ಸಚಿವರನ್ನು ಎಂಟು ತಂಡಗಳನ್ನಾಗಿ ವಿಭಜಿಸಲಾಯಿತು. ಈ ತಂಡಗಳು, ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳ ಅಭಿವೃದ್ಧಿಗಾಗಿ ಹಾಗೂ ಯುವ ವೃತ್ತಿಪರರನ್ನು ತಂಡದಲ್ಲಿ ನೇಮಿಸಿಕೊಳ್ಳುವ ಕೆಲಸ ಮಾಡಲಿವೆ. ಈ ಮೂಲಕ, ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ, ಚುರುಕುತನ ಹಾಗೂ ಸರಕಾರದ ಫಲಪ್ರದತೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
Related Articles
Advertisement
ಪ್ರತಿ ಸಚಿವರ ಕಛೇರಿಯಲ್ಲಿ ಕೇಂದ್ರದ ಪ್ರಮುಖ ಯೋಜನೆಗಳು ಮತ್ತು ನೀತಿಗಳ ಕಾರ್ಯಕ್ಷಮತೆಯ ಬಗ್ಗೆ ನವೀಕರಣಗಳನ್ನು ನೀಡುವ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸುವುದು, ಆಯಾ ಸಚಿವರು ಮಾಡಿದ ನಿರ್ಧಾರಗಳನ್ನು ಮೇಲ್ವಿಚಾರಣೆ ಮಾಡಲು ಡ್ಯಾಶ್‌ಬೋರ್ಡ್ ಮತ್ತು ಸಭೆಗಳನ್ನು ನಿಗದಿಪಡಿಸುವ ವ್ಯವಸ್ಥೆ ಮತ್ತು ಪತ್ರವ್ಯವಹಾರವನ್ನು ನಿರ್ವಹಿಸುವುದು ಈ ಗುಂಪುಗಳಿಗೆ ನಿಯೋಜಿಸಲಾದ ಕಾರ್ಯಗಳಲ್ಲಿ ಸೇರಿವೆ.