ರಾಮನಗರ: ಸರ್ಕಾರದ ಯೋಜನೆಗಳ ಲಾಭ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಸಂಪನ್ಮೂಲಗಳ ಕ್ರೂಢೀಕರಣ ಮತ್ತು ಅದರ ಸದ್ಬಳಕೆಯಾಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆಡಳಿತ ನೀಡು ತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಹೇಳಿದರು.
ನಗರದ ರಾಯರ ದೊಡ್ಡಿ ವೃತ್ತದಲ್ಲಿ ಮೋದಿ ಸರ್ಕಾರ 2 ಒಂದು ವರ್ಷದ ಸಾಧನೆ ಬಗ್ಗೆ ಜಾಗೃತಿ ಅಭಿಯಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೋದಿ ನೇತೃತ್ವದ ಸರ್ಕಾರ ಕಳೆದ ಬಾರಿ ಉತ್ತಮ ಜನ ಪರ ಆಡಳಿತ ನೀಡಿದ್ದರಿಂದಲೇ ಅವರು ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. 2ನೇ ಅವಧಿಯಲ್ಲಿ ಒಂದು ವರ್ಷ ಪೂರೈಸಲಾ ಗಿದೆ.
ಆದರೆ ಮಹತ್ತರ ಸವಾಲುಗಳಿಂದ ಕೂಡಿದ ವರ್ಷವಾ ಗಿತ್ತು. ಅಂಫಾನ್, ಚಂಡಮಾರುತ, ಕೋವಿಡ್-19 ಸೋಂಕು ಮುಂತಾಗಿ ಕೇಂದ್ರ ಸರ್ಕಾರಕ್ಕೆ ಸವಾಲು ಒಡ್ಡಿದೆ. ಆದರೆ ದೇಶ ಸಮರ್ಥ ಆಡಳಿತಗಾರರ ಬಳಿಯಿರುವುದರಿಂ ದ ದೇಶವನ್ನು ಸಂಕಷ್ಟದಿಂದ ಪಾರು ಮಾಡಬಲ್ಲ ವಿಶ್ವಾಸ ದೇಶವಾಸಿಗಳಲ್ಲಿ ಮೂಡಿದೆ ಎಂದರು.
ಭಾರತ, ಸ್ವಾವಲಂಬಿ, ಸದೃಢ, ಸಶಕ್ತ ದೇಶವಾಗಿ ಭಾರತ ಹೊರಹೊಮ್ಮಲಿದೆ. ಆರ್ಟಿಕಲ್ 370 ರದ್ದತಿ, ಪೌರತ್ವ ತಿದ್ದು ಪಡಿ ವಿಧೇಯಕ 2019, ರಾಮಮಂದಿರ ನಿರ್ಮಾಣಕ್ಕೆ ತೊಡಕು ನಿವಾರಣೆ, ತ್ರಿವಳಿ ತಲಾಖ್‌ನಿಂದ ಮುಕ್ತಿ, ಆಯುಷಾನ್ ಭಾರತ ಯೋಜನೆಯಡಿ 1 ಕೋಟಿಗೂ ಹೆಚ್ಚು ಫಲಾನುಭವಿಗಳು, ಕಿಸಾನ್ ಸಮ್ಮಾನ್ ನಿಧಿ, ಕೋವಿಡ್-19 ಸಂಕಷ್ಟ ನಿರ್ವಹಣೆಗೆ ಮಹತ್ತರ ನಿರ್ಧಾರಗಳು ಭಾರತವನ್ನು ಸಶಕ್ತಗೊಳಿಸುತ್ತಿದೆ ಎಂದರು.
ವಿವೇಕಾನಂದ ನಗರ ಬಡಾವಣೆ, ರಾಯರ ದೊಡ್ಡಿ ವೃತ್ತ, ಕೆಂಪೇಗೌಡ ವೃತ್ತ, ಕೆಂಪೇಗೌಡನ ದೊಡ್ಡಿಗಳಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಕರಪತ್ರ ಮತ್ತು ಮಾಸ್ಕ್ಗಳನ್ನು ವಿತರಿ ಸಿದರು. ಬಿಜೆಪಿ ಪ್ರಮುಖ ಪ್ರವೀಣ್‌ಗೌಡ, ಜಿ.ವಿ.ಪದ್ಮ ನಾಭ, ಎಸ್.ಆರ್.ನಾಗರಾಜ್, ರುದ್ರದೇವರು, ಗುಲಾಬ್ ಜಾನ್, ಚಂದ್ರಕಲಾ, ದೇವಿಕಾ, ಚಂದ್ರಶೇಖರ ರೆಡ್ಡಿ, ಬಿಜೆಪಿ ಮಂಜು, ಚಂದನ್ ಮುಂತಾದವರು ಹಾಜರಿದ್ದರು.