ಮಹಾನಗರ: ಪ್ರಧಾನಿ ನರೇಂದ್ರ ಮೋದಿಯವರು 5 ವರ್ಷ ಗಳಲ್ಲಿ ಸಮರ್ಥ, ಸಮೃದ್ಧಿ ಹಾಗೂ ಶಕ್ತಿಶಾಲಿ ಭಾರತದ ನಿರ್ಮಾಣ ಮಾಡಿದ್ದು, ಹಲವು ಕ್ರಾಂತಿಕಾರಿ ಯೋಜನೆ ಗಳನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲು ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಕೇಂದ್ರ ಮೈದಾನದಲ್ಲಿ ನರೇಂದ್ರ ಮೋದಿಯವರ ವಿಜಯ ಸಂಕಲ್ಪ ಚುನಾವಣ ಪ್ರಚಾರ ಸಭೆಯ ನ್ನುದ್ದೇಶಿಸಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲು ಅವರನ್ನು ಗೆಲ್ಲಿಸಬೇಕು ಎಂದರು. ಕಾಂಗ್ರೆಸ್ ರಾಷ್ಟ್ರಹಿತಕ್ಕೆ ವಿರುದ್ಧ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರೇ ಯಾಕೆ ಇನ್ನೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದೀರಿ. ನಮ್ಮ ಪಕ್ಷಕ್ಕೆ ಬನ್ನಿ ಎಂದವರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಬಿಜೆಪಿಯದ್ದು ಮೇಕಿಂಗ್ ಇಂಡಿ ಯಾ ಪರಿಕಲ್ಪನೆಯಾದರೆ, ಕಾಂಗ್ರೆಸ್-ಜೆಡಿಎಸ್ ಸಹಿತ ಮಹಾಘಟಬಂಧನ್‌ನ ಪರಿಕಲ್ಪನೆ ಬ್ರೇಕ್ ಇಂಡಿಯಾ ಆಗಿದೆ. ಜರ್ನಾದನ ಪೂಜಾರಿ ಅವರು ನಳಿನ್ ಕುಮಾರ್ ಗೆಲ್ಲುತ್ತಾರೆ ಮತ್ತು ನರೇಂದ್ರ ಮೋದಿ ಇನ್ನು ಎರಡು ಬಾರಿ ಪ್ರಧಾನಿಯಾಗುತ್ತಾರೆ ಎಂದು ಹರಸಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಿ.ಟಿ. ರವಿ ಹೇಳಿದರು.
ಶಾಸಕ, ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸುನಿಲ್ ಕುಮಾರ್ ಮಾತನಾಡಿ, ಕಾಂಗ್ರೆಸ್‌ನವರು ಅಚ್ಚೆದಿನ್ ಎಲ್ಲಿ ಬಂತು ಎಂದು ಕೇಳುತ್ತಿದ್ದಾರೆ. ಕೇಸರಿ, ಹಿಂದುತ್ವ ಅಂದರೆ ಮಾರು ದೂರ ನಿಲ್ಲುತ್ತಿದ್ದ ಕಾಂಗ್ರೆಸ್‌ನವರು ಈಗ ಅದನ್ನು ಅಪ್ಪಿಕೊಂಡಿರುವುದು, ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಕೇಸರಿ ಶಾಲು ಹಾಕಿ ಮತಯಾಚಿಸುತ್ತಿರುವುದು ದೇಶದಲ್ಲಿ ಅಚ್ಚೆದಿನ್ ಬಂದಿರುವುದಕ್ಕೆ ನಿದರ್ಶನ ಎಂದರು.
ಚೌಕಿದಾರ್ ವರ್ಸಸ್ ಚೋರರ
ನಡುವಿನ ಚುನಾವಣೆ
ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಈ ಬಾರಿಯ ಚುನಾವಣೆ ಚೌಕಿದಾರ್ ವರ್ಸಸ್ ಚೋರರ, ಪ್ರಜಾಪ್ರಭುತ್ವ ವರ್ಸಸ್ ಕುಟುಂಬ ರಾಜಕಾರಣ, ಪ್ರಾಮಾಣಿಕತೆ ವರ್ಸಸ್ ಭ್ರಷ್ಟಚಾರದ ನಡುವಣ ಚುನಾವಣೆಯಾಗಿದೆ ಎಂದರು.