Advertisement

ಪುರಿಯಿಂದ ಮೋದಿ ಸ್ಪರ್ಧೆ?

12:30 AM Jan 03, 2019 | |

ಭುವನೇಶ್ವರ: ಒಡಿಶಾದ ಪುರಿಯಿಂದಲೇ ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಬಿಜೆಪಿ ಹಿರಿಯ ಮುಖಂಡ ಪ್ರದೀಪ್‌ ಪುರೋಹಿತ್‌ ಬುಧವಾರ ಹೇಳಿದ್ದಾರೆ. ಲೋಕಸಭೆ ಕ್ಷೇತ್ರ ಬದಲಾವಣೆ ಮಾಡುವ ವಿಚಾರವನ್ನು ಮಾಧ್ಯಮಗಳೇ ಸೃಷ್ಟಿಸಿವೆ ಎಂದು ಪ್ರಧಾನಿ ಮೋದಿ ಸಂದರ್ಶನದಲ್ಲಿ ಹೇಳಿದ ನಂತರ ಶಾಸಕ ಪ್ರದೀಪ್‌ ಹೇಳಿಕೆ ನೀಡಿದ್ದು ಮಹತ್ವ ಪಡೆದಿದೆ. ಒಡಿಶಾದ ಜನರನ್ನು ಮೋದಿ ಪ್ರೀತಿಸುತ್ತಾರೆ. ಪುರಿಯೊಂದಿಗೆ ಅವರು ಅನುಬಂಧವನ್ನೂ ಹೊಂದಿದ್ದಾರೆ. ಹೀಗಾಗಿ ಅವರು ಇಲ್ಲಿಂದಲೇ ಸ್ಪರ್ಧಿಸುವ ಸಾಧ್ಯತೆ ಶೇ.90ರಷ್ಟಿದೆ ಎಂದು ಪ್ರದೀಪ್‌ ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ಮೋದಿ ಅವರು ಉತ್ತರಪ್ರದೇಶದ ವಾರಾಣಸಿಯಿಂದ ಸ್ಪರ್ಧಿಸಿ ಗೆದ್ದಿದ್ದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next