Advertisement

ಸಿಬ್ಬಂದಿಗೆ ಮೋದಿ ಅಭಿನಂದನೆ

10:25 PM Apr 07, 2019 | Lakshmi GovindaRaju |

ನವದೆಹಲಿ: ಆರೋಗ್ಯ ಸೇವೆ, ನೈರ್ಮಲ್ಯ ಮತ್ತು ಶುಚಿತ್ವಕ್ಕಾಗಿ ಶ್ರಮಿಸುತ್ತಿರುವವರಿಗೆ ವಿಶ್ವ ಆರೋಗ್ಯ ದಿನದಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ಜನರಲ್ಲಿ ಉತ್ತಮ ಆರೋಗ್ಯಕ್ಕಾಗಿ ಅವರ ಕೊಡುಗೆ ಮಹತ್ವದ್ದು ಎಂದು ಅವರು ಹೇಳಿದ್ದಾರೆ.

Advertisement

ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ಸೇವೆ ಯೋಜನೆ ಆಯುಷ್ಮಾನ್‌ ಭಾರತ್‌ ನಮ್ಮ ದೇಶದ್ದು ಎಂಬುದು ನಮ್ಮೆಲ್ಲರ ಹೆಮ್ಮೆ . ಇದು 50 ಕೋಟಿ ಭಾರತೀಯರಿಗೆ ಗುಣಮಟ್ಟದ ಹಾಗೂ ಕೈಗೆಟಕುವ ಆರೋಗ್ಯ ಸೇವೆಯನ್ನು ಒದಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next