Advertisement

ಪರಿವರ್ತನಾ ಯಾತ್ರೆ ಸಮಾರೋಪದಲ್ಲಿ ಮೋದಿಗೆ ಎಸ್‌.ಎಂ. ಕೃಷ್ಣ ಸಾಥ್‌

06:05 AM Jan 21, 2018 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನೆ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜತೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ವೇದಿಕೆ ಹಂಚಿಕೊಳ್ಳಲಿದ್ದಾರೆ.

Advertisement

ಫೆ.4ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಪ್ರಧಾನಿ ಮೋದಿ ಬರುವುದರಿಂದ ಕೃಷ್ಣ ಅವರು ಭಾಗವಹಿಸಲಿದ್ದು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟ ನೆಯ ನಿಟ್ಟಿನಲ್ಲಿ ಚರ್ಚೆ ಕೂಡ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕೃಷ್ಣ ಅವರು ಬಿಜೆಪಿ ಸೇರಿದ ನಂತರ ಪಕ್ಷದ ಚಟುವಟಿಕೆ ಹಾಗೂ ಕಾರ್ಯಕ್ರಮದಲ್ಲಿ ಗುರುತಿಸಿಕೊಂಡಿರಲಿಲ್ಲ. ಬೆಂಗಳೂರಿನಲ್ಲಿ ಆಯೋಜಿ ಸಿದ್ದ ಪರಿವರ್ತನಾ ರ್ಯಾಲಿಯ ಸಮಾವೇಶಕ್ಕೆ ಆಹ್ವಾನಿಸಿ ದ್ದರೂ ಭಾಗಿಯಾಗಿರಲಿಲ್ಲ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಬಂದಿದ್ದಾಗಲೂ ಗೈರು ಹಾಜರಾಗಿದ್ದರು. ಇದಾದ ನಂತರ, ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಮತ್ತು ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ್‌ ಅವರು ಸದಾಶಿವ ನಗರದಲ್ಲಿರುವ ಎಸ್‌.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ, ಫೆ.4ರಂದು ಬೆಂಗಳೂರಿನಲ್ಲಿ ನಡೆಯುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದರು. 

ಮಾಧ್ಯಮ ವಕ್ತಾರರ ಸಭೆ
ಮÇÉೇಶ್ವರದ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಶನಿವಾರ ಮಾಧ್ಯಮ ವಕ್ತಾರರ ಜತೆ ಸಭೆ ನಡೆಸಿದರು. ಬಿಜೆಪಿಯಿಂದ ನೇಮಿಸಿರುವ ಮಾಧ್ಯಮ ವಕ್ತಾರರು ಮತ್ತು ಸಹ ವಕ್ತಾರರು ಸಭೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ವಿಭಾಗೀಯ ಮಟ್ಟದಲ್ಲೂ ನಡೆಸಬೇಕು. ಒಂದೇ ದಿನ ಅದೇ ವಿಷಯದ ಬಗ್ಗೆ ವಿಭಾಗ ಮಟ್ಟದಲ್ಲೂ ಸುದ್ದಿಗೋಷ್ಠಿ ನಡೆಸಬೇಕು. ಯಾವುದನ್ನು ಬೆಂಗಳೂರಿಗೆ ಸೀಮಿತ ಮಾಡಿಕೊಳ್ಳಬಾರದು ಎಂದು ಸೂಚನೆ ನೀಡಿದ್ದಾರೆ. ಚುನಾವಣೆ ಮುಗಿಯುವ ತನಕ ಯಾರೂ ಕೂಡ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಹಾಗೆಯೇ, ಒಂದೇ ಟಿವಿ ಚಾನಲ್‌ಗೆ ಯಾರೂ ಬ್ರಾಂಡ್‌ ಆಗಬಾರದು. ವಕ್ತಾರರು ರೊಟೇಷನ್‌ ಮೂಲಕ ಟಿವಿ ಚರ್ಚೆಯಲ್ಲಿ ಭಾಗಿಯಾಗಬೇಕು ಎಂಬ
ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ತೊರೆಯಲು ಎಆರ್‌ಕೆ ನಿರ್ಧಾರ
ಚಾಮರಾಜನಗರ:
ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಹೀಗಾಗಿ ಪಕ್ಷ ತೊರೆಯಲು ನಿರ್ಧರಿಸಿದ್ದೇನೆ ಎಂದು ಮಾಜಿ ಶಾಸಕ, ರಾಜ್ಯ ಬಿಜೆಪಿ ಎಸ್‌.ಸಿ. ಮೋರ್ಚಾ ಮಾಜಿ ಅಧ್ಯಕ್ಷ ಎ.ಆರ್‌. ಕೃಷ್ಣಮೂರ್ತಿ ನೊಂದು ನುಡಿದಿದ್ದಾರೆ. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯನ್ನು ಸಂಘಟಿಸಲು ಮೊದಲು ಸೇರ್ಪಡೆಗೊಂಡ ದಲಿತ ಮುಖಂಡ ನಾನು. ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷನಾಗಿ ಮೂರು ವರ್ಷ ಪಕ್ಷವನ್ನು ಸಂಘಟಿಸಿದ್ದೇನೆ. ಇಷ್ಟಾಗಿಯೂ ಈ ಅವಧಿಯಲ್ಲಿ ನನಗೆ ಯಾವುದೇ ಹುದ್ದೆ ನೀಡದೆ  ಡೆಗಣಿಸಲಾಗಿದೆ. ಪರಿವರ್ತನಾ ರ್ಯಾಲಿಯಲ್ಲೂ ಪಕ್ಷ ಬಳಸಿಕೊಂಡಿಲ್ಲ. ಬಿಜೆಪಿ ನಮ್ಮನ್ನು ಮತ್ತು ಬೆಂಬಲಿಗರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದರು. ಈ ಎಲ್ಲ ಬೆಳವಣಿಗೆಗಳಿಂದ ನೊಂದು ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿದ್ದೇನೆ. ಬೆಂಬಲಿಗರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಜೊತೆ ಚರ್ಚಿಸಿ ಮುಂದೆ ಯಾವ ಪಕ್ಷ ಸೇರಬೇಕೆಂಬುದನ್ನು ನಿರ್ಧರಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next