Advertisement

Whatsapp: ಮೋದಿ ಚಾನೆಲ್‌ಗೆ ವಾರದಲ್ಲೇ 54 ಲಕ್ಷ ಫಾಲೋವರ್ಸ್‌!

09:15 PM Sep 25, 2023 | Team Udayavani |

ನವದೆಹಲಿ: ವಾಟ್ಸ್‌ಆ್ಯಪ್‌ ಇತ್ತೀಚೆಗಷ್ಟೇ ಪರಿಚಯಿಸಿದ ಹೊಸ ಫೀಚರ್‌ “ಚಾನೆಲ್ಸ್‌’ನಲ್ಲೂ ಪ್ರಧಾನಿ ಮೋದಿ ಮೋಡಿ ಮಾಡಿದ್ದಾರೆ. ವಾರದಲ್ಲೇ ಮೋದಿ ಅವರ ಚಾನೆಲ್‌ಗೆ 54 ಲಕ್ಷ ಮಂದಿ ಸಬ್‌ಸ್ರೈಬ್‌ ಆಗಿದ್ದು, ಖುದ್ದು ಪ್ರಧಾನಿ ಅವರೇ ತಮ್ಮ ಫಾಲೋವರ್ಸ್‌ಗೆ ಧನ್ಯವಾದ ಹೇಳಿದ್ದಾರೆ.

Advertisement

ಹೌದು, ಈಗಾಗಲೇ ಟ್ವಿಟರ್‌ನಲ್ಲೂ ಅತಿಹೆಚ್ಚು ಫಾಲೋವರ್‌ಗಳಿರುವ ಭಾರತದ ಖ್ಯಾತ ರಾಜಕಾರಣಿ ಎಂಬ ಗರಿ ಪ್ರಧಾನಿ ಮೋದಿ ಅವರಿಗಿದೆ. ಅದರ ಬೆನ್ನಲ್ಲೇ ವಾರದ ಹಿಂದಷ್ಟೇ ತೆರೆದ ಅವರ ಚಾನೆಲ್‌ ಖಾತೆ ಕೂಡ ಜನಮನ್ನಣೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಮೋದಿ ನಿರಂತರವಾಗಿ ತಮ್ಮನ್ನು ಬೆಂಬಲಿಸುತ್ತಿರುವುದಕ್ಕೆ ಧನ್ಯವಾದ ಎಂದಿದ್ದಾರೆ.

ಇನ್ನು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ 2.39 ಲಕ್ಷ ಮಂದಿ ಫಾಲೋವರ್ಸ್‌ಗಳಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ 6.5 ಸಾವಿರ ಮಂದಿ ಫಾಲೋವರ್ಸ್‌ಗಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next